
ಮುಂಬೈ (ಫೆ.23): ಬಣ್ಣಗಳ ಹಬ್ಬ ಹೋಳಿಯನ್ನು ಛಪ್ರಿಗಳ (ಅನಾಗರಿಕರ) ಹಬ್ಬ ಎಂದು ಬಾಲಿವುಡ್ ನಿರ್ಮಾಪಕಿ ಫರಾ ಖಾನ್ ವಿವಾದಿತ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಸೆಲಬ್ರಿಟಿ ಮಾಸ್ಟರ್‌ಚೆಫ್ ಕಾರ್ಯಕ್ರಮದಲ್ಲಿ ಫರಾ, ‘ಎಲ್ಲಾ ಛಪ್ರಿಗಳ ಪ್ರಿಯವಾದ ಹಬ್ಬ ಹೋಳಿ’ ಎಂದಿದ್ದರು. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ, ಸಾಮಾಜಿಕ ಮಾಧ್ಯಮ ಪ್ರಭಾವಿ, ಹಿಂದುಸ್ತಾನಿ ಭಾವು ಎಂದೇ ಜನಪ್ರಿಯರಾಗಿರುವ ವಿಕಾಸ್ ಜಾಯರಾಂ ಪಾಠಕ್ ದೂರು ದಾಖಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಈ ಸಂಬಂಧ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಹಾಗೂ ತನಿಖೆ ನಡೆಯುತ್ತಿದೆ ಎಂದು ಖಾರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ವಾಟ್ಸ್‌ಆಪ್‌ನಲ್ಲಿ ಬೇಕಾಬಿಟ್ಟಿ ಸ್ಟೇಟಸ್, ಕೇಸ್ ರದ್ದು ಮಾಡಲು ನಿರಾಕರಿಸಿದ ಕೋರ್ಟ್!
ಏನಿದು ವಿವಾದ?
ಹಿಂದೂ ಹಬ್ಬ 'ಹೋಳಿ' ಕುರಿತು ನಿರ್ದೇಶಕಿ ಮತ್ತು ಬರಹಗಾರ್ತಿ ಫರಾ ಖಾನ್,ತಮ್ಮ ಪಾಕಶಾಲೆಯ ಕಾರ್ಯಕ್ರಮ 'ಸೆಲಿಬ್ರಿಟಿ ಮಾಸ್ಟರ್‌ಶೆಫ್ 2025' ರ ಇತ್ತೀಚಿನ ಸಂಚಿಕೆಯಲ್ಲಿ ಹೋಳಿಯನ್ನು 'ಚಪ್ರಿ ಹಬ್ಬ' ಎಂದು ಕರೆದು ವಿವಾದಕ್ಕೆ ಸಿಲುಕಿದ್ದಾರೆ. ಅಲ್ಲದೇ ಅವರ ಹೇಳಿಕೆಗೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಲ್ಲದೇ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ವಿವಾದದಲ್ಲಿ 'ರಾಮನ ಅವತಾರ'; ರಿಷಿ ಸಿನಿಮಾ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ, ಹಿಂದೂಪರ ಸಂಘಟನೆ ಆಕ್ರೋಶ
ನಿರ್ದೇಶಕರು ಹೇಳಿದ್ದೇನು?
ಸೆಲೆಬ್ರಿಟಿ ಮಾಸ್ಟರ್‌ಶೆಫ್ 2025 ರ ಇತ್ತೀಚಿನ ಸಂಚಿಕೆಯಲ್ಲಿ, 'ಓಂ ಶಾಂತಿ ಓಂ' ನಿರ್ದೇಶಕರು ಹೋಳಿ ಸಂಸ್ಕೃತಿಯಿಲ್ಲದ (ಛಪ್ರಿ) ಪುರುಷರ ನೆಚ್ಚಿನ ಹಬ್ಬ ಎಂದು ಹೇಳುತ್ತಿರುವುದು ಕಂಡುಬಂತು . ಈ ವೇಳೆ 'ಸಾರೆ ಛಾಪ್ರಿ ಲೋಗೋ ಕಾ ಫೇವರಿಟ್ ಫೆಸ್ಟಿವಲ್ ಹೋತಾ ಹೈ ಹೋಲಿ' ಎಂದ ಫರಾ ಖಾನ್. ಹೋಳಿ ಹಬ್ಬದ ಬಗ್ಗೆ ಫರಾ ಖಾನ್ ಈ ಹೇಳಿಕೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅನೇಕ ಜನರು ಇದನ್ನು 'ಹಿಂದೂಗಳ ಅವಹೇಳನ' ಎಂದು ಕರೆದಿದ್ದಾರೆ. ಹಿಂದೂ ಹಬ್ಬಗಳ ಬಗ್ಗೆ ಅವಮಾನ ಮಾಡುವ ಫರಾ ಖಾನ್, ಬಕ್ರಿದ್ ಹಬ್ಬದಲ್ಲಿ ನಡೆಯುವ ರಕ್ತದೋಕುಳಿ ಛಪ್ರಿಗಳ ಹಬ್ಬ ಅಂತಾ ಹೇಳಿ ನೋಡೋಣ ಎಂದು ಪ್ರಶ್ನಿಸಿದ್ದಾರೆ. ಸದ್ಯ ಕಾನೂನು ಸಂಕಷ್ಟಕ್ಕೆ ಸಿಲುಕಿರುವ ಫರಾಖಾನ್. ಹಿಂದೂ ಹಬ್ಬದ ಬಗ್ಗೆ ನಿರ್ದೇಶಕಿ ಮಾಡಿರುವ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಫರಾ ಖಾನ್ 2004 ರಲ್ಲಿ ಶಿರೀಶ್ ಕುಂದರ್ ಅವರನ್ನು ವಿವಾಹವಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ