
ಅಹಮದಾಬಾದ್ (ಫೆ.23): ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನ ಸಾರ್ವಜನಿಕ ಸಾಲದ ಮತ್ತವು 2023-24ನೇ ಸಾಲಿಗೆ 3,77,962 ಕೋಟಿ ರು.ಗೆ ಏರಿಕೆಯಾಗಿದ್ದು, ಇದು ಪ್ರತಿ ವ್ಯಕ್ತಿ ಮೇಲೆ 66,000 ರು. ಹೊರೆಯಾಗಿದೆ.
ಗುಜರಾತ್ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ ಅಂಕಿ ಅಂಶದಲ್ಲಿ ಮಾಹಿತಿ ಬೆಳಕಿಗೆ ಬಂದಿದೆ. ಸಾಲದ ಮೊತ್ತವು 2024-25ನೇ ಸಾಲಿಗೆ 3,99,633 ಕೋಟಿ ರು.ಗೆ ಹೆಚ್ಚಳವಾಗಲಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸರ್ಕಾರ, 2022-23ರಲ್ಲಿ ರಾಜ್ಯ ಸರ್ಕಾರವು 23,442 ಕೋಟಿ ರು. ಬಡ್ಡಿ ಪಾವತಿಸಿದ್ದು, 22,159 ಕೋಟಿ ರು. ಅಸಲು ಪಾವತಿಸಿದೆ. 2023-24ರಲ್ಲಿ 25,212 ಕೋಟಿ ರು. ಬಡ್ಡಿ ಮತ್ತು 26,149 ಕೋಟಿ ರು. ಅಸಲು ಪಾವತಿ ಮಾಡಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಏರ್ ಇಂಡಿಯಾ ಎಡವಟ್ಟು, ಮುರಿದ ಸೀಟಲ್ಲಿ ಒಂದೂವರೆ ತಾಸು ಕುಳಿತು ಪ್ರಯಾಣಿಸಿದ ಕೇಂದ್ರ ಕೃಷಿ ಸಚಿವ ಚೌಹಾಣ್, ತನಿಖೆಗೆ ಆದೇಶ
ಗುಜರಾತ್‌ನ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ಅಮಿತ್ ಚಾವಡಾ, ಬಿಜೆಪಿಯು ಸಾಲ ಮಾಡಿ ತುಪ್ಪ ತಿನ್ನುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ 2027-28ರ ವೇಳೆಗೆ ಸರ್ಕಾರದ ಅಂದಾಜಿನ ಪ್ರಕಾರವೇ ಸಾಲದ ಮೊತ್ತವು 5.78 ಲಕ್ಷ ಕೋಟಿ ರು.ಗೆ ಏರಿಕೆಯಾಗಲಿದೆ. ಆಗ ನವಜಾತ ಶಿಶು ಮೇಲೆ ಮೇಲೆ 89,000 ರು. ಹೊರೆ ಬೀಳಲಿದೆ ಎಂದು ಕಿಡಿಕಾರಿದರು.
ಮಾ.11, 12ರಂದು ಮಾರಿಷಸ್‌ಗೆ ಮೋದಿ ಪ್ರವಾಸ
ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಮಾರಿಷಸ್‌ನ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿದ್ದು, 2 ದಿನಗಳ (ಮಾ.11 ಹಾಗೂ 12) ಆ ದೇಶದ ಪ್ರವಾಸ ಕೈಗೊಳ್ಳಲಿದ್ದಾರೆ.ಈ ಕುರಿತು ಮಾರಿಷಸ್ ಅಧ್ಯಕ್ಷ ನವಿನ್ ರಾಮಗುಲಾಂ ಸಂಸತ್ತಿನಲ್ಲಿ ಹೇಳಿಕೆ ನೀಡಿ ‘ನನ್ನ ಆಮಂತ್ರಣವನ್ನು ಸ್ವೀಕರಿಸಿ ಮೋದಿ, ತಮ್ಮ ವ್ಯಸ್ತ ವೇಳಾಪಟ್ಟಿಯ ನಡುವೆಯೂ ನಮ್ಮ 57ನೇ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಇದು ಉಭಯ ದೇಶಗಳ ನಡುವಿನ ಸ್ನೇಹದ ಸಂಕೇತ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
1968ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನೆನಪಾರ್ಥ ಮಾ.12ನ್ನು ಮಾರಷಸ್ ಪ್ರತಿ ವರ್ಷ ರಾಷ್ಟ್ರೀಯ ದಿನವನ್ನಾಗಿ ಅಚರಿಸಿಕೊಂಡು ಬರುತ್ತಿದ್ದು, ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅತಿಥಿಯಾಗಿ ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ