Fact Check: ಭಾರತದ ಕೋವಿಡ್ ಲಸಿಕೆ ದಾಖಲೆ: ಕೇಂದ್ರ ಸರ್ಕಾರದಿಂದ 3 ತಿಂಗಳ Free Recharge?

By Suvarna NewsFirst Published Dec 17, 2021, 10:45 AM IST
Highlights

*ಕೋವಿಡ್‌ ಲಸಿಕೆ ವಿತರಣೆಯಲ್ಲಿ ಮಹತ್ವದ ಮೈಲುಗಲ್ಲು
*ಕೇಂದ್ರ ಸರ್ಕಾರದಿಂದ 3 ತಿಂಗಳ Free Recharge
*ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿ
*ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ  Fact Check

ನವದೆಹಲಿ(ಡಿ. 17): ಜಿಯೋ ಏರ್ಟೆಲ್‌ ಸೇರಿದಂತೆ ಬಹುತೇಕ ಟೆಲಿಕಾಂ ಕಂಪನಿಗಳು (Telecom) ತಮ್ಮ ಪ್ರಿಪೇಡ್ ಪ್ಯಾಕ್‌ಗಳ ದರವನ್ನು ಹೆಚ್ಚಿಸಿವೆ. ಈ ಮಧ್ಯೆ ಕೋವಿಡ್‌ ಲಸಿಕೆ ವಿತರಣೆಯಲ್ಲಿ ಮಹತ್ವದ ಮೈಲುಗಲ್ಲು ತಲುಪಿರುವ ಸಂಭ್ರಮಾಚರಣೆ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಭರ್ಜರಿ ಫ್ರೀ ರಿಚಾರ್ಜ್ ಆಫರ್‌‌ (Free Recharge Offer) ನೀಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದೆ. ವಿಶೇಷವಾಗಿ ವಾಟ್ಸ್‌ಪ್‌ನಲ್ಲಿ ಈ ಸಂದೇಶ ಹರಿಬಿಡಲಾಗಿದ್ದು ಮಸೇಜ್‌ನಲ್ಲಿ ನೀಡಲಾಗಿರುವ ಲಿಂಕ್‌ ಕ್ಲಿಕ್‌ ಮಾಡಿ ಆಫರ್‌ ಪಡೆಯಿರಿ ಎಂದು ಹೇಳಲಾಗಿದೆ.

‌ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿ ಹಿಂದಿಯಲ್ಲಿದ್ದೂ "ಕೋವಿಡ್‌ ಲಸಿಕೆ ವಿತರಣೆಯಲ್ಲಿ (Covid 19 Vaccination) ಮಹತ್ವದ ಮೈಲುಗಲ್ಲು ತಲುಪಿರುವ ಸಂಭ್ರಮಾಚರಣೆ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಭರ್ಜರಿ ಆಫರ್‌ ನೀಡಿದೆ ರಿಲಯನ್ಸ್‌ ಜಿಯೋ, ಭಾರತಿ ಏರ್‌ಟೆಲ್‌, ವೊಡಾಫೋನ್‌ ಐಡಿಯಾ ಗ್ರಾಹಕರಿಗೆ 3 ತಿಂಗಳು ಉಚಿತವಾಗಿ ಮೊಬೈಲ್‌ ರೀಚಾರ್ಜ್ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಉಚಿತವಾಗಿ ನಿಮ್ಮ ಮೊಬೈಲ್‌ ಸಂಖ್ಯೆಗೆ (Mobile Number) ರೀಚಾರ್ಜ್ ಮಾಡಲು ಈ ಕೆಳಗಿನ ಲಿಂಕ್‌ ಮೇಲೆ ಕ್ಲಿಕ್‌ (Click on Link) ಮಾಡಿ. ಈ ಆಫರ್‌ ಡಿಸೆಂಬರ್‌ 20ರ ವರೆಗೂ ಮಾತ್ರ ಅಸ್ತಿತ್ವದಲ್ಲಿರುತ್ತದೆ’ ಎಂದು ಹೇಳಲಾಗಿದೆ. ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಬೆನ್ನಲ್ಲೇ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ (Press Information Bureau) ‘ಕೇಂದ್ರ ಸರ್ಕಾರ ಇಂಥ ಯಾವುದೇ ಘೋಷಣೆಯನ್ನೂ ಹೊರಡಿಸಿಲ್ಲ. ಇದು ಸುಳ್ಳುಸುದ್ದಿ. ಇಂಥ ಸಂದೇಶವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಮತ್ತು ನಕಲಿ ಸಂದೇಶದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ’ ಎಂದು ಮನವಿ ಮಾಡಿದೆ. ಭಾರತದಲ್ಲಿ ಈವರೆಗೆ 133 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಣೆ ಮಾಡಲಾಗಿದೆ.

 

दावा:देश में रिकॉर्ड वैक्सीनेशन होने की खुशी में भारत सरकार सभी भारतीय यूज़र्स को 3 महीने का रिचार्ज फ्री में दे रही है

☑️भारत सरकार द्वारा ऐसी कोई घोषणा नहीं की गयी है
☑️ऐसे किसी फर्जी मैसेज के लिंक पर अपनी कोई निजी जानकारी साझा न करें और न ही इन्हें फॉरवर्ड करें pic.twitter.com/Hln90XTlyM

— PIB Fact Check (@PIBFactCheck)

 

ಲಿಂಕ್‌ಗಳನ್ನು ಕ್ಲಿಕ್‌ ಮಾಡಿದರೆ ವಂಚಕರ ಬಲೆಗೆ!

ಸೋಷಿಯಲ್‌ ಮೀಡಿಯಾಗಳಲ್ಲಿ ಸಹಜವಾಗಿ ಇಂಥಹ ಫ್ರೀ ರಿಚಾರ್ಜ್‌ ಅಥವಾ ಫ್ರೀ ಗಿಫ್ಟ್‌ನಂತಹ ಸಂದೇಶಗಳು ಫಾರ್‌ವರ್ಡ್ (WhatsApp Forward) ಆಗುತ್ತವೆ. ಆದರೆ ಇಂಥಹ ಲಿಂಕ್‌ಗಳನ್ನು ಕ್ಲಿಕ್‌ ಮಾಡುವುದರ ಮೂಲಕ ಆನ್‌ಲೈನ್ ವಂಚಕರ ಬಲೆಗೆ ಬೀಳುವ ಸಾಧ್ಯತಗಳೇ ಹೆಚ್ಚು. ಅಪರಿಚಿತ ವ್ಯಕ್ತಿಗಳಿಂದ ಕಳುಹಿಸಲಾದ ಲಿಂಕ್‌ ಅಥವಾ ವಾಟ್ಸಪ್‌ ಗ್ರೂಪ್‌ಗಳಲ್ಲಿ ಫಾರ್‌ವರ್ಡ್ ಮಾಡಲಾದ ಮೇಸೆಜ್‌ಗಳನ್ನು ಓಪನ್‌ ಮಾಡದಿರುವುದು ಒಳಿತು. 

ಜತೆಗೆ ನೀವು ಲಾಟರಿ ವಿನ್‌ ಆಗಿದ್ದೀರಿ ಎಂದು ವಾಟ್ಸಪ್‌ ಮೂಲಕ ಬರುವ ಸಂದೇಶಗಳನ್ನು ಕಡೆಗಣಿಸಿ ಅಂಥಹ ಕಾಂಟ್ಯಾಕ್ಟ್‌ ನಂಬರ್‌ಗಳನ್ನು ಬ್ಲಾಕ್‌ ಮಾಡಿದರೆ ವಂಚಕರಿಂದ ಸೇಫ್‌ ಆಗಿರಬಹುದು. ಅಲ್ಲದೇ ಯಾವುದೇ ಅಪರಿಚಿತ ವ್ಯಕ್ತಿಗೆ ಫೋನ್‌ ಕರೆಯಲ್ಲಾಗಲಿ ಅಥವಾ ಸಂದೇಶದ ಮೂಲಕ ನಿಮ್ಮ ಜನ್ಮ ದಿನ, ಬ್ಯಾಂಕ್‌ ಖಾತೆ ನಂಬರ್‌, ನಿಮ್ಮ ಮನೆ ವಿಳಾಸ ಸೇರಿದಂತೆ ಯಾವುದೇ ವೈಯಕ್ತಿಕ ಮಾಹಿತಿ ನೀಡುವ ಮುನ್ನ ಎರಡು ಬಾರಿ ಯೋಚನೆ ಮಾಡಿದರೆ ಒಳಿತು. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ತಂತ್ರಜ್ಞಾನವನ್ನೇ ಬಳಸಿಕೊಂಡು ಜನರಿಗೆ ಮೋಸ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹಾಗಾಗಿ ಸರ್ಕಾರದ ನೋಡಲ್‌ ಸಂಸ್ಥೆ ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ ಆಗಾಗ್ಗೆ ಇಂಥಹ ಫೇಕ್‌ ಸುದ್ದಿಗಳ ಬಗ್ಗೆ ಮಾಹಿತಿ ನೀಡುತ್ತದೆ.

ಇದನ್ನೂ ಓದಿ:

1) Fact Check: ಕಪ್ಪು ಮೈಬಣ್ಣಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ಬರೆದ ಮಾಡೆಲ್ ?

2) Fact Check: ಮುಸ್ಲಿಂ ಮಹಿಳೆಯರು ಮಸೀದಿಯಲ್ಲಿ ರಾಮ ಭಜನೆ ಹಾಡಿದ್ರಾ? ಮತ್ತೆ ವೈರಲ್‌ ಆಯ್ತು ಹಳೆ ವಿಡಿಯೋ!

3) Fact Check: ವಿವೇಕಾನಂದರು ಕ್ರಿಕೆಟ್‌ ಆಡಿದ್ದ ಫೋಟೋನಾ ಇದು.?

click me!