*ಬಾಂಬೆ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ್ದ ಸುಪ್ರೀಂ
*ಜ.20ರಂದು ವಿವಾದಿತ ತೀರ್ಪು ನೀಡಿದ್ದ ನ್ಯಾ. ಪುಷ್ಪಾ ಗನೇಡಿವಾಲಾ
**ಫೆಬ್ರವರಿಯಲ್ಲಿ ಜಿಲ್ಲಾ ನ್ಯಾಯಾಧೀಶೆ ಹುದ್ದೆಗೆ ವಾಪಸ್!
ನವದೆಹಲಿ (ಡಿ. 17): ‘ಚರ್ಮದಿಂದ ಚರ್ಮಕ್ಕೆ ಸ್ಪರ್ಶವಾದರೆ ಮಾತ್ರ ಅದು ಲೈಂಗಿಕ ದೌರ್ಜನ್ಯ (Sexual Assault) ಎನ್ನಿಸಿಕೊಳ್ಳುತ್ತದೆ’ ಎಂಬ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲಾಗೆ (Pushpa Ganediwala) ಕಾಯಂ ನ್ಯಾಯಾಧೀಶ ಸ್ಥಾನಮಾನ ದೊರಕುವುದಿಲ್ಲ ಎಂದು ಮೂಲಗಳು ಹೇಳಿವೆ. ಪುಷ್ಪಾ ಅವರನ್ನು ಕಾಯಂ ನ್ಯಾಯಾಧೀಶರನ್ನಾಗಿ ಮಾಡುವ (Permanent Judge) ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ (Suprȩme Court) ಕೊಲಿಜಿಯಂ ಎರಡನೇ ಬಾರಿ ತಿರಸ್ಕರಿಸಿದೆ. ಇದರಿಂದಾಗಿ ಅವರು ಹೆಚ್ಚುವರಿ ನ್ಯಾಯಾಧೀಶ ಹುದ್ದೆಯ 1 ವರ್ಷ ಅವಧಿ ಪೂರ್ತಿಗೊಂಡ ಬಳಿಕ (2022ರ ಫೆಬ್ರವರಿಯಲ್ಲಿ) ಜಿಲ್ಲಾ ನ್ಯಾಯಾಧೀಶ ಹುದ್ದೆಗೆ ಮರಳಬೇಕಿದೆ ಎಂದು ಅವು ತಿಳಿಸಿವೆ. ಪುಷ್ಪಾ ಹಾಲಿ ಬಾಂಬೆ ಹೈಕೋರ್ಟ್‌ನ (Bombay High Court) ನಾಗಪುರ ಪೀಠದಲ್ಲಿ ಕಾರ‍್ಯನಿರ್ವಹಿಸುತ್ತಿದ್ದಾರೆ.
ವ್ಯಕ್ತಿಯೊಬ್ಬ ಅಪ್ರಾಪ್ತೆಯ ಮುಂದೆ ತನ್ನ ಪ್ಯಾಂಟ್ ಜಿಪ್ ಬಿಚ್ಚಿದರೆ ಅಥವಾ ಉಡುಪು ಧರಿಸಿದ್ದ ಮಹಿಳೆಯ ಉಡುಪು ತೆಗೆಯದೇ ಆಕೆಯನ್ನು ಸ್ಪರ್ಶಿಸಿದರೆ ‘ಚರ್ಮದಿಂದ ಚರ್ಮ ಸ್ಪರ್ಶ’ (Skin To Skin Contact) ಎನ್ನಲಾಗದು ಎಂದು ಹೇಳಿದ್ದ ನ್ಯಾ. ಪುಷ್ಪಾ, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿಯ ಕೇಸು ರದ್ದುಗೊಳಿಸಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಈ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
Murder Case : ಲೈಂಗಿಕ ದೌರ್ಜನ್ಯ ನೀಡಿದ ಸ್ವಂತ ತಂದೆ : ಸ್ನೇಹಿತರಿಂದ ಅಪ್ಪನ ಕೊಲ್ಲಿಸಿದ ಮಗಳು
ಬಟ್ಟೆಯ ಮೇಲಿಂದಲೇ ಅಪ್ರಾಪ್ತೆಯ ಗುಪ್ತಾಂಗ ಮುಟ್ಟುವುದು ಪೋಕ್ಸೋ ಕಾಯ್ದೆಯಡಿ (Pocso Act(2012)) ಲೈಂಗಿಕ ಕಿರುಕುಳ ಎನ್ನಿಸಿಕೊಳ್ಳುವುದಿಲ್ಲ ಎಂದು ಜ.20ರಂದು ವಿವಾದಿತ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್‌ನ ನ್ಯಾ. ಪುಷ್ಪಾ ಗನೇಡಿವಾಲಾ, ಜ.15ರಂದು ಕೂಡಾ ಇದೇ ರೀತಿಯ ಮತ್ತೊಂದು ವಿವಾದಾತ್ಮಕ ತೀರ್ಪು ನೀಡಿದ್ದರು.
ಸುಪ್ರೀಂ ಮಹತ್ವದ ಆದೇಶ!
ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ(sexual assault) ಪ್ರಕರಣವೊಂದರಲ್ಲಿ ‘ಚರ್ಮಕ್ಕೆ ಚರ್ಮ ತಾಗಿಲ್ಲ’(skin-to-skin contact) ಎಂಬ ಕಾರಣ ನೀಡಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ(Bombay High Court) ಬಹುಚರ್ಚಿತ ವಿವಾದಿತ ತೀರ್ಪನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ‘ಪೋಕ್ಸೋ ಕಾಯ್ದೆಯಡಿ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸಾಬೀತುಪಡಿಸುವಲ್ಲಿ ಆರೋಪಿಯ ಲೈಂಗಿಕ ಉದ್ದೇಶ ಮುಖ್ಯವೇ ಹೊರತು ಚರ್ಮಕ್ಕೆ ಚರ್ಮ ತಾಗುವುದಲ್ಲ’ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.
ಗುಪ್ತಾಂಗಗಳನ್ನು ಸ್ಪರ್ಶಿಸುವುದು ಅಥವಾ ಇನ್ನಾವುದೇ ರೀತಿಯ ದೈಹಿಕ ಸ್ಪರ್ಶವು ಲೈಂಗಿಕ ಉದ್ದೇಶದಿಂದ(sexual intent) ಕೂಡಿದ್ದಾಗಿದ್ದರೆ ಅದು ಪೋಕ್ಸೋ ಕಾಯ್ದೆಯ(POCSO Act) ಸೆಕ್ಷನ್ 7ರಡಿ ಲೈಂಗಿಕ ದೌರ್ಜನ್ಯವಾಗುತ್ತದೆ. ಕಾಯ್ದೆಯ ಉದ್ದೇಶವು ಸ್ಪಷ್ಟವಾಗಿದ್ದು, ಅದರಲ್ಲಿ ಕೋರ್ಟ್‌ಗಳು ಗೊಂದಲ ಹುಡುಕಬಾರದು ಎಂದೂ ಸುಪ್ರೀಂಕೋರ್ಟ್(Supreme Court) ತಿಳಿಸಿದೆ.
Domestic violence:ರಾಜ್ಯದಲ್ಲಿ ಹೆಚ್ಚಿದ ಕೌಟುಂಬಿಕ ಹಿಂಸೆ... ಹೆಲ್ತ್ ಸರ್ವೇ ತಿಳಿಸಿದ ಭೀಕರ ಸತ್ಯ
ನ್ಯಾಯಮೂರ್ತಿ ಯುಯು ಲಲಿತ್, ಎಸ್ ರವೀಂದ್ರ ಭಟ್, ಬೇಲಾ ತ್ರಿವೇದಿ ಒಳಗೊಂಡ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ. ಚರ್ಮಕ್ಕೆ ಚರ್ಮ ಸ್ಪರ್ಶಿಸಿದರೆ ಅನ್ನೋ ವ್ಯಾಖ್ಯಾನ ಸಂಪೂರ್ಣವಾಗಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಉದ್ದೇಶವನ್ನೇ ಮರೆ ಮಾಚುತ್ತಿದೆ. ಕೆಟ್ಟ ಉದ್ದೇಶದಿಂದ, ಕಾಮದಿಂದ ಸ್ಪರ್ಶಿಸುವುದು ಲೈಂಗಿಕ ಅಪರಾಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಬಾಂಬೈ ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿರುವ ಸ್ಪರ್ಶ ಎಂಬ ಪದ ತಡೆ ಕಾಯ್ದೆಯ ವ್ಯಾಖ್ಯಾನವನ್ನೇ ಬದಲಿಸುತ್ತಿದೆ. ಇದರಿಂದ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಬದಲು ಅವರನ್ನೇ ಶಿಕ್ಷಿಸಿದಂತಾಗುತ್ತದೆ. ಲೈಂಗಿಂಕ ಉದ್ದೇಶದಿಂದ ಸ್ಪರ್ಶಿಸುವ ಯಾವುದೇ ಸ್ಪರ್ಶ ಕಾನೂನು ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.