ಮುಸ್ಲಿಂ ವಿರೋಧಿ ಪೋಸ್ಟ್ ತೆಗೆಯಲು ನಕಾರ: ಮೋದಿ ಓಲೈಕೆಗೆ ನಿಂತ ಫೇಸ್‌ಬುಕ್!?

By Suvarna News  |  First Published Aug 17, 2020, 12:47 PM IST

ಫೇಸ್‌ಬುಕ್ ವಿರುದ್ಧ ಂಭೀರ ಆರೋಪ| ವರದಿಯ ಆಧಾರದ ಮೇಲೆ ಕಮಲ ನಾಯಕರ ವಿರುದ್ಧ ಸಿಡಿದೆದ್ದ ಕಾಂಗ್ರೆಸ್| ಈ ಬೆಳವಣಿಗೆ ಬೆನ್ನಲ್ಲೇ ಫೇಸ್‌ಬುಕ್ ಸ್ಪಷ್ಟಣೆ


ನವದೆಹಲಿ(ಆ.17): ಅಮೆರಿಕಾದ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯಲ್ಲಿ ಫೇಸ್‌ಬುಕ್ ಭಾರತದಲ್ಲಿ ಬಿಜೆಪಿ ನಾಯಕ ದ್ವೇಷದ ಮಾತುಗಳನ್ನು ನಿರ್ಲಕ್ಷಿಸುತ್ತದೆ ಎಂದು ಆರೋಪದ ಬಗ್ಗೆ ತಿಳಿಸಲಾಗಿತ್ತು. ಆದರೀಗ ಈ ವರದಿ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಹಾಗೂ ಇಂಟರ್ನೆಟ್‌ನ ದಿಗ್ಗಜ ಕಂಪನಿ ಫೇಸ್‌ಬುಕ್‌ ಈ ಸಂಬಂಧ ಸ್ಪಷ್ಟನೆ ನೀಡಿದೆ. ಫೇಸ್‌ಬುಕ್ ನೀಡಿರುವ ಸ್ಪಷ್ಟನೆಯಲ್ಲಿ ನಮ್ಮ ನೀತಿ ಯಾವುದೇ ಪಕ್ಷಬೇದ ಮಾಡುವುದಿಲ್ಲ ಎಂದು ಉತ್ತರಿಸಿದೆ.

'ಬೆಂಗಳೂರು ಗಲಭೆಯನ್ನೇಕೆ ರಾಹುಲ್ ಗಾಂಧಿ ಖಂಡಿಸಿಲ್ಲ? ಧೈರ್ಯವಿಲ್ಲವೇ?'

Tap to resize

Latest Videos

ಕಂಪನಿಯ ವಕ್ತಾರರೊಬ್ಬರು ಈ ಸಂಬಂಧ ಹೇಳಳಿಕೆ ನೀಡಿದ್ದು, 'ನಾವು ದ್ವೇಷದ ಮಾತುಗಳನ್ನು ಹಾಗೂ ಹಿಂಸಾಚಾರ ಹಬ್ಬುವ ಪೋಸ್ಟ್‌ಗಳನ್ನು ನಿಷೇಧಿಸುತ್ತೇವೆ. ಈ  ನೀತಿಗಳು ಪಕ್ಷ, ರಾಜಕಾರಣಿ ಹಾಗೂ ಹುದ್ದೆಗಳನ್ನು ನೋಡದೆ ಎಲ್ಲರಿಗೂ ಅನ್ವಯವಾಗುತ್ತವೆ. ನಮಗಿನ್ನೂ ಬಹಳಷ್ಟು ಮಾಡೋದಿದೆ ಎಂದು ನಮಗೆ ಗೊತ್ತು. ನಿಷ್ಪಕ್ಷಪಾತವಾಗಿರುವ ನಿಟ್ಟಿನಲ್ಲಿ ನಾವು ಈ ನಿಯಮಗಳನ್ನು ಪಾಲಿಸುತ್ತಿದ್ದೇವೆ' ಎಂದಿದ್ದಾರೆ.

ಇನ್ನು 'Wall Street Journal'ನಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಭಾರತದಲ್ಲಿ ಫೇಸ್‌ಬುಕ್ ಅಧಿಕಾರದಲ್ಲಿರುವ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ದ್ವೇಷಭರಿತ ಮಾತುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತದೆ ಎಂದಿದ್ದಾರೆ. ಅಲ್ಲದೇ ಈ ಲೇಖನದಲ್ಲಿ ಫೇಸಸ್‌ಬುಕ್‌ನಲ್ಲಿ ಸೇವೆ ಸಲ್ಲಿಸುವ ಅಧಿಕಾರಿಯ ಮಾತುಗಳಳನ್ನೂ ಹಾಕಲಾಗಿದ್ದು, ಬಿಜೆಪಿ ಕಾರ್ಯಕರ್ತರ ಪೋಸ್ಟ್‌ ನಿಷೇಧಿಸಿದರೆ ಭಾರತದಲ್ಲಿ ಕಂಪನಿಯ ಉದ್ಯಮದ ಮೇಲೆ ಜೊಡೆತ ಬೀಳುತ್ತದೆ ಎಂದಿದ್ದಾರೆ.

ಬಿಜೆಪಿಯ ಹಳೆ ಸ್ಲೋಗನ್ ಇಟ್ಟುಕೊಂಡು ಮೋದಿ ತಿವಿದ ರಾಹುಲ್

ಸದ್ಯ ಈ ವಿಚಾರ ಗಂಭೀರ ಸ್ವರೂಪ ಪಡೆದಿದ್ದು, ಕಾಂಗ್ರೆಸ್ ಕೂಡಾ ಬಿಜೆಪಿ ವಿರುದ್ಧ ಕಿಡಿ ಕಾರಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಲೇಖನವನ್ನು ಆಧಾರವಾಗಿಟ್ಟುಕೊಂಡು 'ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಈಗ ಫೇಸ್‌ಬುಕ್ ಹಾಗೂ ವಾಟ್ಸಾಪ್ ಕೂಡಾ ನಿಯಂತ್ರಿಸಲಾರಂಭಿಸಿದೆ' ಎಂದಿದ್ದರು.

click me!