ಮೋದಿ ಘೋಷಣೆ ಬೆನ್ನಲ್ಲೇ 173 ಜಿಲ್ಲೆಗೆ ಎನ್‌ಸಿಸಿ ವಿಸ್ತರಣೆ!

By Suvarna NewsFirst Published Aug 17, 2020, 11:39 AM IST
Highlights

ಮೋದಿ ಘೋಷಣೆ ಬೆನ್ನಲ್ಲೇ 173 ಜಿಲ್ಲೆಗೆ ಎನ್‌ಸಿಸಿ ವಿಸ್ತರಣೆ| 1 ಲಕ್ಷ ಮಂದಿಗೆ ತರಬೇತಿ: ರಾಜನಾಥ್‌ ಸಮ್ಮತಿ

ನವದೆಹ(ಆ.17): ನ್ಯಾಷನಲ್‌ ಕೆಡೆಟ್‌ ಕೋರ್‌ (ಎನ್‌ಸಿಸಿ) ಅನ್ನು 173 ಗಡಿ ಹಾಗೂ ಕರಾವಳಿ ಜಿಲ್ಲೆಗಳಿಗೆ ವಿಸ್ತರಿಸುವ ಪ್ರಸ್ತಾವಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅನುಮೋದನೆ ನೀಡಿದ್ದಾರೆ. ಈ ಕಾರ್ಯಕ್ರಮದ ಅನ್ವಯ 1 ಲಕ್ಷ ಹೊಸ ಕೆಡೆಟ್‌ಗಳಿಗೆ ಗಡಿ ಹಾಗೂ ಕರಾವಳಿ ಜಿಲ್ಲೆಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ.

ಕೆಂಪು ಕೋಟೆಯಲ್ಲಿ ಪ್ರಧಾನಿ ಧ್ವಜಾರೋಹಣ; ಇಲ್ಲಿದೆ ಈ ಭಾರಿಯ ಸ್ವಾತಂತ್ರ್ಯ ದಿನಾಚರಣೆಯ ವಿಶೇಷತೆ!

ಎನ್‌ಸಿಸಿ ವಿಸ್ತರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನೋತ್ಸವ ಭಾಷಣದಲ್ಲಿ ಶನಿವಾರ ಹೇಳಿದ್ದರು. ಇದರ ಬೆನ್ನಲ್ಲೇ ಪ್ರಸ್ತಾವಕ್ಕೆ ಅನುಮೋದನೆ ದೊರಕಿದೆ. ಭವಿಷ್ಯದಲ್ಲಿ ಯುವಕರು ಸೇನೆ ಹಾಗೂ ನೌಕಾಪಡೆ ಸೇರಲು ಇದರಿಂದ ಅನುಕೂಲವಾಗಲಿದೆ. ಸಶಸ್ತ್ರ ಪಡೆಗಳನ್ನು ಸೇರಲು ಎನ್‌ಸಿಸಿ ‘ವೇದಿಕೆ’ಯಂತೆ ಕಾರ್ಯನಿರ್ವಹಿಸಲಿದೆ.

ಪೊಲೀಸರಿಗೆ ಕೊರೋನಾ ಬಂದರೆ ಭದ್ರತೆಗೆ ಬೇರೆ ವ್ಯವಸ್ಥೆ ಮಾಡಿ: ಕೇಂದ್ರದ ಸೂಚನೆ!

ಈ ಬಗ್ಗೆ ಭಾನುವಾರ ಹೇಳಿಕೆ ನೀಡಿರುವ ರಕ್ಷಣಾ ಸಚಿವಾಲಯ, ‘ಎನ್‌ಸಿಸಿ ಯೋಜನೆಯ ವಿಸ್ತರಣೆಗೆ 173 ಗಡಿ ಹಾಗೂ ಕರಾವಳಿ ಜಿಲ್ಲೆಯ 1000 ಶಾಲೆ-ಕಾಲೇಜುಗಳನ್ನು ಗುರುತಿಸಲಾಗಿದೆ. ಇಲ್ಲಿನ ಎನ್‌ಸಿಸಿ ಕೆಡೆಟ್‌ಗಳಿಗೆ ವಿಕೋಪ ಪರಿಹಾರ ಹಾಗೂ ಸೇನೆ ಸೇರಲು ಅನುಕೂಲ ಆಗುವಂಥ ತರಬೇತಿ ನೀಡಲಾಗುತ್ತದೆ. ಇದೇ ವೇಳೆ 83 ಎನ್‌ಸಿಸಿ ಘಟಕಗಳನ್ನು (53 ಸೇನೆ, 20 ನೌಕಾಪಡೆ, 10 ವಾಯುಪಡೆ ಘಟಕಗಳು) ತರಬೇತಿಗಾಗಿ ಉನ್ನತೀಕರಣಗೊಳಿಸಲಾಗುತ್ತದೆ’ ಎಂದು ತಿಳಿಸಿದೆ.

‘ಗಡಿ ಜಿಲ್ಲೆಗಳಲ್ಲಿ ತರಬೇತಿಗೆ ಸೇನೆ ಕೂಡ ಸಹಾಯ ಮಾಡಲಿದೆ. ಕರಾವಳಿ ಭಾಗಗಳಲ್ಲಿ ನೌಕಾಪಡೆ ನೆರವಾಗಲಿದೆ. ರಾಜ್ಯ ಸರ್ಕಾರಗಳ ಸಹಭಾಗಿತ್ವ ಕೂಡ ಇರಲಿದೆ’ ಎಂದು ಅದು ಹೇಳಿದೆ.

click me!