ಅತ್ಯಂತ ಅಪರೂಪವೆನಿಸಿದ ಎರಡು ತಲೆಯ ಹಾವೊಂದು ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಕಾಣಿಸಿಕೊಂಡಿದ್ದು ರಕ್ಷಣೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಹಾವು ರಕ್ಷಕ ನಿಕ್ ಇವಾನ್ಸ್ (Nick Evans) ಅವರು ಹಾವುಗಳಲ್ಲಿ ಅಪಾಯಕಾರಿ ಅಲ್ಲದ ಎರಡು ತಲೆಯ ಸದರ್ನ್ ಬ್ರೌನ್ ಎಗ್ ಈಟರ್ ಹಾವಿನ ಫೋಟೋಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಅತ್ಯಂತ ಅಪರೂಪವೆನಿಸಿದ ಎರಡು ತಲೆಯ ಹಾವೊಂದು ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಕಾಣಿಸಿಕೊಂಡಿದ್ದು ರಕ್ಷಣೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಹಾವು ರಕ್ಷಕ ನಿಕ್ ಇವಾನ್ಸ್ (Nick Evans) ಅವರು ಹಾವುಗಳಲ್ಲಿ ಅಪಾಯಕಾರಿ ಅಲ್ಲದ ಎರಡು ತಲೆಯ ಸದರ್ನ್ ಬ್ರೌನ್ ಎಗ್ ಈಟರ್ ಹಾವಿನ ಫೋಟೋಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಎರಡು ಅಥವಾ ಹೆಚ್ಚಿನ ತಲೆಗಳೊಂದಿಗೆ ಜನಿಸಿದ ಪ್ರಾಣಿಗಳು ಅಥವಾ ಸರೀಸೃಪಗಳಿಗೆ ಪಾಲಿಸೆಫಾಲಿ ಎಂದು ಕರೆಯಲಾಗುತ್ತದೆ. ಸಸ್ತನಿಗಳಿಗಿಂತ ಸರೀಸೃಪಗಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ.
ವ್ಯಕ್ತಿಯೊಬ್ಬರ ಮನೆಯ ಗಾರ್ಡನ್‌ನಲ್ಲಿ ಹಾವೊಂದು ಪತ್ತೆಯಾಗಿತ್ತು. ಇದನ್ನು ತೆಗೆದುಕೊಂಡು ಹೋಗುವಂತೆ ಅವರು ಕರೆ ಮಾಡಿ ಹೇಳಿದಾಗ ಅಲ್ಲಿಗೆ ತೆರಳಿದ ಇವಾನ್ಸ್ ಅವರಿಗೆ ಈ ಅಪರೂಪದ ಹಾವು ಕಾಣಿಸಿಕೊಂಡಿದೆ. ಉತ್ತರ ಡರ್ಬನ್‌ನ ಪಟ್ಟಣವಾದ ನಡ್ವೆಡ್ವೆಯಲ್ಲಿ ವಾಸಿಸುವ ವ್ಯಕ್ತಿಯ ಗಾರ್ಡನ್‌ನಲ್ಲಿದ್ದ ಈ ಹಾವಿಗೆ ಯಾರೂ ಹಾನಿ ಮಾಡಬಾರದು ಎಂದು ಬಯಸಿದ ಅವರು ಈ ಹಾವನ್ನು ಬಾಟಲಿಯಲ್ಲಿ ತುಂಬಿಸಿ ಅದನ್ನು ತೆಗೆದುಕೊಂಡು ಹೋಗುವಂತೆ ಇವಾನ್ಸ್‌ಗೆ ತಿಳಿಸಿದರು.
ಈ ವಿರೂಪಗೊಂಡ ಹಾವನ್ನು ನೋಡುವುದು ಒಂದು ವಿಚಿತ್ರ ದೃಶ್ಯವಾಗಿತ್ತು ಎಂದು ಇವಾನ್ಸ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಇದು ಹಾವಿನ ಮರಿಯಾಗಿದ್ದು, ಹೇಗೆ ಚಲಿಸುತ್ತಿದೆ ಎಂದು ನೋಡುವುದಕ್ಕೆ ಆಸಕ್ತಿದಾಯಕವಾಗಿತ್ತು. ಕೆಲವೊಮ್ಮೆ, ಈ ಹಾವಿನ ಎರಡು ತಲೆಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹೋಗಲು ಪ್ರಯತ್ನಿಸುತ್ತವೆ. ಕೆಲವೊಮ್ಮೆ ಅದು ಒಂದು ತಲೆಯನ್ನು ಇನ್ನೊಂದರ ಮೇಲೆ ಇರಿಸುತ್ತದೆ ಎಂದು ಇವಾನ್ಸ್ ಹೇಳಿಕೊಂಡಿದ್ದಾರೆ.
ಗ್ಯಾನವಾಪಿ ಮಸೀದಿ ಸಮೀಕ್ಷೆ ವೇಳೆ ಪ್ರತ್ಯಕ್ಷವಾದ ನಾಗರ ಹಾವು, ವಿಡಿಯೋಗ್ರಫಿಗೆ ವಿಶೇಷ ಉಪಕರಣಗಳ ಬಳಕೆ!
ಈ ಹಾವು ಈಗ ವೃತ್ತಿಪರ ವೈದ್ಯರ ಆರೈಕೆಯಲ್ಲಿದೆ ಎಂದು ಉರಗ ರಕ್ಷಕರು ತಿಳಿಸಿದ್ದಾರೆ. ನಾವು ನೋಡುವವರೆಗೆ ಜೀವಂತವಾಗಿದ್ದ ಈ ಹಾವನ್ನು ಈಗ ಬಿಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದರು. ನನಗೆ ತಿಳಿದಿರುವಂತೆ, ಈ ಹಾವುಗಳು ಸಾಮಾನ್ಯವಾಗಿ ದೀರ್ಘಕಾಲ ಬದುಕುವುದಿಲ್ಲ. ಕಾಡಿನಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಅಲ್ಲದೇ ಇವು ತುಂಬಾ ಕಡಿಮೆ ಸಂಚಾರ ಮಾಡುತ್ತವೆ. ಅಲ್ಲದೇ ಚಲನೆಯೂ ತುಂಬಾ ನಿಧಾನವಾಗಿರುತ್ತದೆ. ಪರಭಕ್ಷಕಗಳಿಗೆ ಇವು ತುಂಬಾ ಸುಲಭದ ತುತ್ತಾಗುತ್ತದೆ ಎಂದು ಇವಾನ್ಸ್ ಹೇಳಿದರು. ಈ ಹಾವಿನ ಪೋಸ್ಟ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಸರೀಸೃಪವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂಬುದನ್ನು ತಿಳಿದು ನೋಡುಗರು ಖುಷಿ ಪಟ್ಟರು.
ಚಿತ್ರದುರ್ಗ: ರೈತನ ಜಮೀನಿನಲ್ಲಿ ವಿಚಿತ್ರ ಹಾವು: ಹೊಟ್ಟೆಯಲ್ಲಿದ್ದ 50 ಮರಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು
ಬಿಲದೊಳಗೆ ಹಾವು ಅದೆಷ್ಟು ವರ್ಷವಾದರೂ ಇರಬಲ್ಲದು. ಆದರೆ ಮುಚ್ಚಿದ ಗಾಜಿನ ಜಾರಿನೊಳಗೆ ಆಹಾರ, ಗಾಳಿ ಯಾವುದೂ ಇಲ್ಲದೆ ಇರಲು ಸಾಧ್ಯವೇ? ಸಾಧ್ಯ ಅನ್ನೋದು ಸಾಬೀತಾಗಿದೆ. ಚೀನಾದ ಹೇಲಿಯಾಂಗ್‌ಜಿಯಾಂಗ್‌ನಲ್ಲಿ ತನ್ನ ಮಗನ ದೀರ್ಘಕಾಲದ ಅನಾರೋಗ್ಯದ ಚಿಕಿತ್ಸೆಗಾಗಿ ತಂದೆಯೋರ್ವ ವಿಷಪೂರಿತ ಹಾವನ್ನು ಜಾರಿನೊಳಗೆ ಇರಿಸಿದ್ದರು. ಗಾಜಿನ ಜಾರಿನೊಳಗೆ ಮೆಡಿಸಿನಲ್ ವೈನ್ ಹಾಕಿ ಅದರೊಳಗೆ ಹಾವನ್ನು ಮುಳುಗಿಸಿ ಭದ್ರವಾಗಿ ಮುಚ್ಚಳ ಹಾಕಿ ಇಡಲಾಗಿತ್ತು. ಈ ಹಾವಿನಿಂದ ಬೇರ್ಪಡುವ ಕೆಲ ಅಂಶಗಳನ್ನು ತೆಗೆದು ಚಿಕಿತ್ಸೆ ನೀಡಲು ಈ ರೀತಿ ಮಾಡಲಾಗಿತ್ತು. ಒಂದು ವರ್ಷದಿಂದ ಔಷಧಿಯ ನೀರಿನಲ್ಲಿ ಮುಳುಗಿ ಹಾಗೂ ಯಾವುದೇ ಗಾಳಿ, ಆಹಾರವಿಲ್ಲದೆ ಗಾಜಿನ ಜಾರಿನಲ್ಲಿದ್ದ ಹಾವು ಮಚ್ಚಳ ತೆರೆಯುತ್ತಿದ್ದಂತೆ ತನ್ನ ಒಂದು ವರ್ಷದ ಆಕ್ರೋಶವನ್ನು ಹೊರಹಾಕಿದೆ. ನೇರವಾಗಿ ಆತನ ಕೈಗೆ ಕಚ್ಚಿದೆ. ಇದು ವಿಷಪೂರಿತ ಹಾವಾಗಿರುವ ಕಾರಣ ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ಮಗನ ಆರೋಗ್ಯಕ್ಕಾಗಿ ಕಸರತ್ತು ಮಾಡಿದ ತಂದೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುವಂತಾಗಿತ್ತು.