
ಚೆನ್ನೈ (ಏ.29) ಪಂಚ ರಾಜ್ಯಗಳ ಮತದಾನ ಅಂತ್ಯಗೊಂಡು ಇದೀಗ ಚುನಾಣೋತ್ತರ ಸಮೀಕ್ಷೆಗಳು ಹೊರಬಿದ್ದಿದೆ. ಈ ಪೈಕಿ ತಮಿಳುನಾಡು ಚುನಾವಣೆ ಸಮೀಕ್ಷೆ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಆಡಳಿತ ವಿರೋಧಿ ಅಲೆಯನ್ನು ನಟ ವಿಜಯ್ ಜೊಸೆಫ್ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಹೇಳಿದೆ. ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ನಟ ವಿಜಯ್ ಅವರ ಟಿವಿಕೆ ಪಕ್ಷ ಈ ಬಾರಿ 98 ರಿಂದ 120 ಸ್ಥಾನ ಗೆದ್ದುಕೊಳ್ಳಲಿದೆ ಎಂದಿದೆ.
ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಹೊಸ ಪಕ್ಷ ಟಿವಿಕೆ. ಆದರೆ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷ ತಮಿಳುನಾಡು ರಾಜಕೀಯವನ್ನೇ ಬುಡಮೇಲು ಮಾಡುವ ಸಾಧ್ಯತೆಯನ್ನು ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಹೇಳಿದೆ. ನಟ ವಿಜಯ್ ಜೊಸೆಫ್ ಅಲೆ ತಮಿಳುನಾಡಿನಲ್ಲಿ ವರ್ಕ್ ಆಗಿದೆ. ಎಂಕೆ ಸ್ಟಾಲಿನ್ ಹಾಗೂ ಡಿಎಂಕೆ ಆಡಳಿತದಿಂದ ಬೇಸತ್ತ ಜನ ಬಿಜೆಪಿ ಅಥವಾ ಎನ್‌ಡಿಎ ಬದಲು ನೇರವಾಗಿ ಟಿವಿಕೆ ಪಕ್ಷದ ಕೈಹಿಡಿದಿದ್ದಾರೆ ಎಂದಿದೆ.
ಟಿವಿಕೆ: 98 ರಿಂದ 120 ಸ್ಥಾನ
ಡಿಎಂಕೆ: 92 ರಿಂದ 110 ಸ್ಥಾನ
ಎಐಡಿಎಂಕೆ, ಮೈತ್ರಿ : 22 ರಿಂದ 32 ಸ್ಥಾನ
ತಮಿಳುನಾಡು ವಿಧಾನಸಭೆಯಲ್ಲಿನ 234 ಸ್ಥಾನಗಳ ಪೈಕಿ ಸರ್ಕಾರ ರಚಿಸಲು 118 ಸ್ಥಾನಗಳಲ್ಲಿ ಗೆಲುವು ದಾಖಲಿಸಿಬೇಕು. ಎಕ್ಸಿಸ್ ಮೈ ಇಂಡಿಯಾ ಪ್ರಕಾರ ನಟ ವಿಜಯ್ ಮ್ಯಾಜಿಕ್ ನಂಬರ್ ಹತ್ತಿರ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಇತರ ಸಮೀಕ್ಷೆಗಳಲ್ಲಿ ಡಿಎಂಕೆ ಸರಳ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದಿದೆ.
ತಮಿಳುನಾಡು ಸಿಎಂ ಯಾರಾಗಬೇಕು ಅನ್ನೋ ಪ್ರಶ್ನೆಯನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು. ವಿಶೇಷ ಅಂದರೆ ಶೇಕಡಾ 37 ರಷ್ಟು ಮಂದಿ ನಟ ವಿಜಯ್ ಜೊಸೆಫ್ ಎಂದಿದ್ದಾರೆ. ಹಾಲಿ ಸಿಎಂ ಎಂಕೆ ಸ್ಟಾಲಿನ್ ಮುಖ್ಯಮಂತ್ರಿಯಾಗಿ ಮುಂದುವರಿಯ ಬೇಕು ಎಂದು ಶೇಕಡಾ 35ರಷ್ಟು ಮಂದಿ ಹೇಳಿದ್ದಾರೆ. ಎಡಪ್ಪಾಡಿ ಕೆ ಪಳನಿಸ್ವಾಮಿಗೆ ಶೇಕಡಾ 22ರಷ್ಟು ಮಂದಿ ಮತ ಹಾಕಿದ್ದರೆ, ಬಿಜೆಪಿ ಯುವ ನಾಯಕ ಅಣ್ಣಾಮಲೈಯನ್ನು ಶೇಕಡಾ 2ರಷ್ಟು ಮಂದಿ ಮುಖ್ಯಮಂತ್ರಿಯಾಗಿ ನೋಡಲು ಬಯಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ