
ತಿರುವನಂತಪುರಂ (ಏ.29): ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಮೊದಲ ಹಂತದಲ್ಲಿ ನಡೆದಿfದದ ಕೇರಳದ ಚುನಾವಣೋತ್ತರ ಸಮೀಕ್ಷೆಗಳು ಕೂಡ ಪ್ರಕಟಗೊಂಡಿವೆ. ಬಹುತೇಕ ಎಲ್ಲಾ ಪ್ರಮುಖ ಸಮೀಕ್ಷೆಗಳ ಪ್ರಕಾರ, ಕೇರಳದಲ್ಲಿ ಈ ಬಾರಿ ಆಡಳಿತಾರೂಢ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ (LDF) ಅಧಿಕಾರ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಕೇರಳ ವಿಧಾನಸಭೆಯ ಒಟ್ಟು 140 ಸ್ಥಾನಗಳಲ್ಲಿ ಬಹುಮತಕ್ಕೆ 70 ಸ್ಥಾನಗಳ ಅಗತ್ಯವಿದೆ.
ಯುಡಿಎಫ್‌ಗೆ ಅತಿ ದೊಡ್ಡ ಬಹುಮತವನ್ನು ಈ ಸಮೀಕ್ಷೆ ಭವಿಷ್ಯ ನುಡಿದಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 78-90 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಈ ಸಮೀಕ್ಷೆಯು ಕೂಡ ಯುಡಿಎಫ್ ಸುಲಭವಾಗಿ ಅಧಿಕಾರ ಹಿಡಿಯುವುದನ್ನು ಖಚಿತಪಡಿಸಿದೆ.
ಪಿ-ಮಾರ್ಕ್ ಪ್ರಕಾರ ಯುಡಿಎಫ್ ಮ್ಯಾಜಿಕ್ ನಂಬರ್ ದಾಟಲಿದೆ.
ಮ್ಯಾಟ್ರಿಜ್ ಸಮೀಕ್ಷೆಯು ಯುಡಿಎಫ್‌ಗೆ ಸರಳ ಬಹುಮತದ ಮುನ್ಸೂಚನೆ ನೀಡಿದೆ.
ಎಲ್ಲಾ ಪ್ರಮುಖ ಸಮೀಕ್ಷೆಗಳ ಸರಾಸರಿಯನ್ನು ಗಮನಿಸಿದರೆ ಕೇರಳದ ಚಿತ್ರಣ ಹೀಗಿದೆ:
ಸಮೀಕ್ಷೆಗಳ ಪ್ರಕಾರ ಕೇರಳದ ಮತದಾರ ಈ ಬಾರಿ 'ಬದಲಾವಣೆ'ಗೆ ನಾಂದಿ ಹಾಡಿದ್ದಾನೆ. ಕಳೆದ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಅಧಿಕಾರ ಹಿಡಿದು ಇತಿಹಾಸ ಬರೆದಿದ್ದ ಎಲ್‌ಡಿಎಫ್‌ಗೆ ಈ ಬಾರಿ ಆಡಳಿತ ವಿರೋಧಿ ಅಲೆ ತಟ್ಟಿರುವ ಸಾಧ್ಯತೆಯಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಪುನರಾಗಮನ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಬಿಜೆಪಿಯು 0-5 ಸ್ಥಾನಗಳ ನಡುವೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಅಂತಿಮವಾಗಿ ಮೇ 4ರಂದು ಹೊರಬೀಳಲಿರುವ ಅಧಿಕೃತ ಫಲಿತಾಂಶವು ಈ ಸಮೀಕ್ಷೆಗಳನ್ನು ನಿಜವಾಗಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
ಸೂಚನೆ: ಎಕ್ಸಿಟ್ ಪೋಲ್‌ಗಳು ತಮ್ಮ ಮತ ಚಲಾಯಿಸಿದ ನಂತರ ಪೋಲಿಂಗ್ ಬೂತ್‌ಗಳಿಂದ ಹೊರಬಂದ ಜನರ ನಡುವೆ ನಡೆಸಿದ ಸಮೀಕ್ಷೆಗಳನ್ನು ಆಧರಿಸಿವೆ. ಎಕ್ಸಿಟ್ ಪೋಲ್‌ಗಳು ಮತದಾರರ ಒಲವನ್ನು ಊಹಿಸುವ ಗುರಿಯನ್ನು ಹೊಂದಿವೆ, ಆದರೆ ಅವುಗಳ ಮುನ್ಸೂಚನೆಗಳು ತಪ್ಪಾಗುವ ಸಾಧ್ಯತೆಯೂ ಇರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ