
ಚೆನ್ನೈ (ಏ.29) ಪಂಚ ರಾಜ್ಯಗಳ ಚುನಾವಣೆ ಪೈಕಿ ತಮಿಳುನಾಡು ಅತ್ಯಂತ ಕುತೂಹಲಕ್ಕೆ ಕಾರಣಾಗಿತ್ತು. ಬಿಜೆಪಿ ಹೊಸ ಅಲೆ ಸೃಷ್ಟಿಸಿ ಚುನಾವಣೆ ಸಮೀಪಿಸುತ್ತಿದ್ದಂತೆ ಸೈಡ್‌ಲೈನ್ ಆಗಿತ್ತು. ಡಿಎಂಕೆ, ಎಐಎಡಿಂಕೆ ಅಲೆ ನಡುವೆ ನಟ ವಿಜಯ್ ಜೊಸೆಫ್ ಟಿವಿಕೆ ಪಕ್ಷ ಹೊಸ ಸಂಚಲನ ಸೃಷ್ಟಿಸಿತ್ತು. ಪಂಚ ರಾಜ್ಯಗಳ ಮತದಾನ ಅಂತ್ಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಅತೀ ದೊಡ್ಡ ಪಕ್ಷವಾಗಿ ಅಧಿಕಾರ ಮುಂದುವರಿಸಲಿದೆ ಎಂದಿದೆ. ವಿಶೇಷ ಅಂದರೆ ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ 16 ರಿಂದ 20 ಸ್ಥಾನ ಗೆದ್ದುಕೊಳ್ಳಲಿದೆ ಎಂದಿದೆ. ಆದರೆ ಇವರ ಅಬ್ಬರದಲ್ಲಿ ಬಿಜೆಪಿ ಹೇಳ ಹೆಸರಿಲ್ಲದಂತಾಗಿದೆ.
ಡಿಎಂಕೆ ಹಾಗೂ ಮಿತ್ರ ಪಕ್ಷ ; 122–132 ಸ್ಥಾನ
ಎಐಎಡಿಂಕೆ ಹಾಗ ಮಿತ್ರ ಪಕ್ಷ ; 87 -100 ಸ್ಥಾನ
ಟಿವಿಕೆ; 10 -12 ಸ್ಥಾನ
ಡಿಎಂಕೆ ; 125 ರಿಂದ 145 ಸ್ಥಾನ
ಎಐಎಡಿಂಕೆ ; 65 ರಿಂದ 80 ಸ್ಥಾನ
ಟಿವಿಕೆ ; 18 ರಿಂದ 24 ಸ್ಥಾನ
ಇತರರ ; 2 ರಿಂದ 6 ಸ್ಥಾನ
ಡಿಎಂಕೆ ಹಾಗೂ ಮಿತ್ರ ಪಕ್ಷ ; 125 ರಿಂದ 145 ಸ್ಥಾನ
ಎಐಎಡಿಂಕೆ ಹಾಗೂ ಮಿತ್ರ ಪಕ್ಷ ; 65 ರಿಂದ 85 ಸ್ಥಾನ
ಟಿವಿಕೆ ; 16 ರಿಂದ 26 ಸ್ಥಾನ
ನಟ ವಿಜಯ್ ಜೊಸೆಫ್ ಅವರ ಟಿವಿಕೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ. ಬಹುತೇಕ ಸಮೀಕ್ಷೆಗಳು 16 ರಿಂದ 20 ಸ್ಥಾನ ಗೆಲ್ಲಲಿದೆ ಎಂದಿದೆ. ಪಕ್ಷ ಸ್ಥಾಪಿಸಿ ಒಂದೇ ವರ್ಷದಲ್ಲಿ 16 ರಿಂದ 20 ಸ್ಥಾನ ಗೆಲ್ಲುವುದು ಸುಲಭದ ಮಾತಲ್ಲ. ಅದರಲ್ಲೂ ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆಯೇ ಸೃಷ್ಟಿಯಾಗಲಿದೆ. ವಿಜಯ್ ಜೊಸೆಫ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ