Fodder Scam: ಲಾಲೂ ಪ್ರಸಾದ್‌ ಯಾದವ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೆ ಮತ್ತೊಂದು ಮದುವೆ

Published : Sep 06, 2022, 02:30 PM IST
Fodder Scam: ಲಾಲೂ ಪ್ರಸಾದ್‌ ಯಾದವ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶನಿಗೆ ಮತ್ತೊಂದು ಮದುವೆ

ಸಾರಾಂಶ

ಸಿಬಿಐ ವಿಶೇಷ ಕೋರ್ಟ್‌ನ ನ್ಯಾಯಾಧೀಶರಾಗಿದ್ದ ಶಿವ್‌ ಪಾಲ್‌ ಸಿಂಗ್‌ ಬಿಜೆಪಿ ನಾಯಕಿಯನ್ನು ಮದುವೆಯಾಗಿದ್ದಾರೆ. ಇದು ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ಚರ್ಚೆಯ ವಿಷಯವಾಗಿದೆ. 

ಮೇವು ಹಗರಣದ (Fodder Scam) ಎರಡು ಪ್ರಕರಣಗಳಲ್ಲಿ ಬಿಹಾರದ ಮಾಜಿ ಸಿಎಂ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ಗೆ ಶಿಕ್ಷೆ ವಿಧಿಸಿದ ಸಿಬಿಐ ವಿಶೇಷ ಕೋರ್ಟ್‌ನಮಾಜಿ ನ್ಯಾಯಾಧೀಶರು ( CBI Special Court Ex Judge) ಬಿಹಾರದ ಬಿಜೆಪಿ ನಾಯಕಿಯನ್ನು ಮದುವೆಯಾಗಿದ್ದಾರೆ. ಸಿಬಿಐ ವಿಶೇಷ ಕೋರ್ಟ್‌ನ ಮಾಜಿ ನ್ಯಾಯಾಧೀಶ, 59 ವರ್ಷದ ಶಿವ್ ಪಾಲ್ ಸಿಂಗ್ ತನಗಿಂತ 9 ವರ್ಷ ಕಿರಿಯರಾದ ಬಿಜೆಪಿ ನಾಯಕಿ ಹಾಗೂ ವಕೀಲೆಯಾಗಿರುವ ನೂತನ್‌ ತಿವಾರಿ (50) ಅವರನ್ನು ವಿವಾಹವಾಗಿದ್ದಾರೆ. ನೂತನ್ ತಿವಾರಿ  ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದು, ಜತೆಗೆ ಈ ಪ್ರದೇಶದ ಖ್ಯಾತ ಬಿಜೆಪಿ ನಾಯಕಿಯೂ ಆಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ-1 ಆಗಿ ನೇಮಕಗೊಂಡಿರುವ ಶಿವ್ ಪಾಲ್ ಸಿಂಗ್ ಹಾಗೂ ನೂತನ್ ತಿವಾರಿ ಕೆಲವು ದಿನಗಳ ಹಿಂದೆ ಬಿಹಾರದ ದುಮ್ಕಾ (Dhumka) ಜಿಲ್ಲೆಯ ಪ್ರಸಿದ್ಧ ಬಸುಕಿನಾಥ್ ದೇವಾಲಯದಲ್ಲಿ (Basukinath Temple) ವಿವಾಹವಾದರು (Marriage) ಎಂದು ಅವರ ನಿಕಟ ವಕೀಲರು ಮಾಹಿತಿ ನೀಡಿದ್ದಾರೆ. 

ನ್ಯಾಯಾಧೀಶ ಶಿವ್‌ ಪಾಲ್‌ ಸಿಂಗ್‌ ಹಾಗೂ ಬಿಜೆಪಿ ನಾಯಕಿ ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ (Second marriage). ನ್ಯಾಯಾಧೀಶರು 2006 ರಲ್ಲಿ ಹೆಂಡತಿಯನ್ನು ಕಳೆದುಕೊಂಡಿದ್ದರು  ಮತ್ತು ಅವರಿಗೆ ಈಗಾಗಲೇ ಒಬ್ಬ ಮಗ ಮತ್ತು ಮಗಳಿದ್ದಾರೆ. ಇನ್ನೊಂದೆಡೆ, ಕೆಲವು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಬಿಜೆಪಿ ನಾಯಕಿ ನೂತನ್ ತಿವಾರಿ ತನ್ನ ಪತಿಯನ್ನು ಕಳೆದುಕೊಂಡಿದ್ದು, ಅವರಿಗೂ ಮಗಳಿದ್ದಾಳೆ. ಇಬ್ಬರೂ ತಮ್ಮ ಮಕ್ಕಳು ಮತ್ತು ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ ನಂತರ ಮದುವೆಯಾಗಲು ನಿರ್ಧರಿಸಿದರು ಎಂದು ನೂತನ್ ತಿವಾರಿ ಕುಟುಂಬದ ಆಪ್ತರು ಹೇಳಿದ್ದಾರೆ.

ರೈಲ್ವೆ ನೇಮಕಾತಿ ಹಗರಣ: ಭೂಮಿ ನೀಡಿದ 1458 ಮಂದಿ ಹೆಸರು ತೇಜಸ್ವಿ ಹಾರ್ಡ್‌ಡಿಸ್ಕಲ್ಲಿ ಪತ್ತೆ

ಇನ್ನು, ಇವರಿಬ್ಬರ ಮದುವೆ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಚರ್ಚೆಯ ವಿಷಯವಾಗಿದೆ. ವಿಧವೆ ವಕೀಲರೊಂದಿಗೆ ಅಂತರ್ಜಾತಿ ವಿವಾಹವಾದ ನ್ಯಾಯಾಧೀಶ ಶಿವ್‌ ಪಾಲ್‌ ಸಿಂಗ್ ಅವರನ್ನು ಬುದ್ಧಿಜೀವಿಗಳು ಮತ್ತು ಕಾನೂನು ಬಂಧುಗಳು ಶ್ಲಾಘಿಸಿದ್ದಾರೆ. ಉತ್ತರ ಪ್ರದೇಶ ಮೂಲದ ನ್ಯಾಯಾಧೀಶರು, ಅಧಿಕೃತ ದಾಖಲೆಗಳ ಪ್ರಕಾರ, ಮಾರ್ಚ್ 31, 2023 ರಂದು 60 ವರ್ಷಗಳನ್ನು ಪೂರೈಸಿದ ನಂತರ ಜಾರ್ಖಂಡ್ ನ್ಯಾಯಾಂಗ ಸೇವೆಯಿಂದ ನಿವೃತ್ತರಾಗಲಿದ್ದಾರೆ ಎಂದು ತಿಳಿದುಬಂದಿದೆ. 

ರಾಂಚಿ ಜಿಲ್ಲಾ ನ್ಯಾಯಾಲಯದಲ್ಲಿ ವಿಶೇಷ ಸಿಬಿಐ ನ್ಯಾಯಾಧೀಶರಾಗಿ ನೇಮಕಗೊಂಡ ಸಂದರ್ಭದಲ್ಲಿ ಶಿವ್‌ ಪಾಲ್‌ ಸಿಂಗ್ ಅವರು ಮೇವು ಹಗರಣದ 2 ಪ್ರಕರಣಗಳಲ್ಲಿ ಲಾಲೂ ಪ್ರಸಾದ್ ಅವರನ್ನು ದೋಷಿ ಎಂದು ಘೋಷಿಸಿದ್ದರು. ಒಂದು ಪ್ರಕರಣದಲ್ಲಿ ಅವರು ಲಾಲೂ ಪ್ರಸಾದ್‌ಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದರು. 1990 ರ ದಶಕದ ಆರಂಭದಲ್ಲಿ ದುಮ್ಕಾ ಖಜಾನೆಯಿಂದ 3.13 ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪದಲ್ಲಿ ಲಾಲೂ ಪ್ರಸಾದ್‌ ಯಾದವ್‌ಗೆ ಮಾರ್ಚ್ 24, 2018 ರಂದು ನ್ಯಾಯಾಧೀಶ ಸಿಂಗ್ ಅವರು 14 ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡ ವಿಧಿಸಿದರು. ಇದು ಮೇವು ಹಗರಣದ ನಾಲ್ಕನೇ ಪ್ರಕರಣವಾಗಿದೆ. ಇದಕ್ಕೂ ಮೊದಲು, 1991 ರ ನಡುವೆ ದಿಯೋಘರ್ ಖಜಾನೆಯಿಂದ 89.27 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ಹಿಂತೆಗೆದುಕೊಂಡ ಪ್ರಕರಣದಲ್ಲಿ ಲಾಲು ಪ್ರಸಾದ್‌ಗೆ ನ್ಯಾಯಾಧೀಶ ಸಿಂಗ್ 2018 ರ ಜನವರಿ 6 ರಂದು ಮೂರೂವರೆ ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಿದರು. ಇದು ಮೇವು ಹಗರಣದ ಎರಡನೇ ಪ್ರಕರಣವಾಗಿದೆ. 

ಬಿಹಾರ ಸರ್ಕಾರದಲ್ಲಿ ಲಾಲೂ ದರ್ಬಾರ್‌, ಸರ್ಕಾರಿ ಸಭೆಯಲ್ಲಿ ಹಿರಿಯ ಅಳಿಯ ಭಾಗಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!