ಇನ್ನು 10 ವರ್ಷ ಕಳೆದರೂ ನಂದಿನಿಗೆ ನಾವು ಸ್ಪರ್ಧೆ ನೀಡಲಾಗದು: ಅಮುಲ್‌

Published : Apr 10, 2023, 08:55 PM IST
ಇನ್ನು 10 ವರ್ಷ ಕಳೆದರೂ ನಂದಿನಿಗೆ ನಾವು ಸ್ಪರ್ಧೆ ನೀಡಲಾಗದು: ಅಮುಲ್‌

ಸಾರಾಂಶ

‘ಇನ್ನು ಹತ್ತು ವರ್ಷ ಕಳೆದರೂ ಕರ್ನಾಟಕದಲ್ಲಿ ನಾವು ನಂದಿನಿ ಬ್ರ್ಯಾಂಡ್‌ಗೆ ಸ್ಪರ್ಧೆ ನೀಡಲು ಆಗದು. ಏಕೆಂದರೆ ನಂದಿನಿ ಉತ್ಪನ್ನಗಳು ಹಾಗೂ ಅಮುಲ್‌ ಉತ್ಪನ್ನಗಳ ಬೆಲೆಯಲ್ಲಿ ಬಹಳ ವ್ಯತ್ಯಾಸವಿದೆ. ಹೀಗಾಗಿ ನಾವು ನಂದಿನಿಗೆ ಸ್ಪರ್ಧೆ ನೀಡಲು ಕರ್ನಾಟಕಕ್ಕೆ ಬರುತ್ತಿಲ್ಲ, ಬದಲಿಗೆ ನಂದಿನಿಯ ಜೊತೆ ಇರಲು ಬರುತ್ತಿದ್ದೇವೆ.’

ನವದೆಹಲಿ (ಏ.11): ‘ಇನ್ನು ಹತ್ತು ವರ್ಷ ಕಳೆದರೂ ಕರ್ನಾಟಕದಲ್ಲಿ ನಾವು ನಂದಿನಿ ಬ್ರ್ಯಾಂಡ್‌ಗೆ ಸ್ಪರ್ಧೆ ನೀಡಲು ಆಗದು. ಏಕೆಂದರೆ ನಂದಿನಿ ಉತ್ಪನ್ನಗಳು ಹಾಗೂ ಅಮುಲ್‌ ಉತ್ಪನ್ನಗಳ ಬೆಲೆಯಲ್ಲಿ ಬಹಳ ವ್ಯತ್ಯಾಸವಿದೆ. ಹೀಗಾಗಿ ನಾವು ನಂದಿನಿಗೆ ಸ್ಪರ್ಧೆ ನೀಡಲು ಕರ್ನಾಟಕಕ್ಕೆ ಬರುತ್ತಿಲ್ಲ, ಬದಲಿಗೆ ನಂದಿನಿಯ ಜೊತೆ ಇರಲು ಬರುತ್ತಿದ್ದೇವೆ.’

ಹೀಗೆಂದು ಇತ್ತೀಚಿನ ‘ಅಮುಲ್‌ ವರ್ಸಸ್‌ ನಂದಿನಿ’(Amul Vs Nandini) ವಿವಾದಕ್ಕೆ ಅಮುಲ್‌ ವ್ಯವಸ್ಥಾಪಕ ನಿರ್ದೇಶಕ ಜಯೇನ್‌ ಮೆಹ್ತಾ(Jayen Mehta) ಪ್ರತಿಕ್ರಿಯೆ ನೀಡಿದ್ದಾರೆ. ಅಮುಲ್‌ ಬಹಿಷ್ಕಾರಕ್ಕೆ ಕರ್ನಾಟಕ(Karnataka)ದಲ್ಲಿ ದೊಡ್ಡಮಟ್ಟದ ಕೂಗೆದ್ದಿರುವ ಹಿನ್ನೆಲೆಯಲ್ಲಿ ಅವರು ಪತ್ರಿಕೆಯೊಂದಕ್ಕೆ ಈ ಸ್ಪಷ್ಟನೆ ನೀಡಿದ್ದಾರೆ.

ಅಮುಲ್‌ನಿಂದ ನಂದಿನಿಗೆ ನಷ್ಟವಿಲ್ಲ: ಪೈಪೋಟಿ ಎದುರಿಸಲು ನಾವು ಸಮರ್ಥವೆಂದ ಕೆಎಂಎಫ್‌

‘ಇದು ಅಮುಲ್‌ ವರ್ಸಸ್‌ ನಂದಿನಿ ವಿಚಾರ ಅಲ್ಲ, ಬದಲಿಗೆ ಇದು ಅಮುಲ್‌ ಮತ್ತು ನಂದಿನಿಗೆ ಸಂಬಂಧಿಸಿದ ವಿಚಾರ. ನಾವಿಬ್ಬರೂ ರೈತರ ಮಾಲಿಕತ್ವದ ಸಹಕಾರ ಸಂಸ್ಥೆಗಳು. ಇಬ್ಬರೂ ಸಮಾನ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಕರ್ನಾಟಕಕ್ಕೆ ನಂದಿನಿಯ ಜೊತೆ ಸ್ಪರ್ಧಿಸಲು ಬರುತ್ತಿಲ್ಲ, ಬದಲಿಗೆ ನಂದಿನಿಯ ಜೊತೆ ಇರಲು ಬರುತ್ತಿದ್ದೇವೆ’ ಎಂದು ಹೇಳಿದ್ದಾರೆ.

ನಂದಿನಿ ಜೊತೆ ಅಮುಲ್‌ ಸ್ನೇಹ:

ನಂದಿನಿಯ ಜೊತೆ ನಾವು ಈಗಾಗಲೇ ಬೇರೆ ಬೇರೆ ರೀತಿಯಲ್ಲಿ ಬಹಳ ಹತ್ತಿರದಿಂದ ಕೆಲಸ ಮಾಡುತ್ತಿದ್ದೇವೆ. ಕಳೆದೊಂದು ದಶಕದಿಂದ ಬೆಂಗಳೂರಿನಲ್ಲಿರುವ ಮದರ್‌ ಡೈರಿ ಘಟಕದಲ್ಲಿ ನಂದಿನಿ ಹಾಲು ಬಳಸಿಕೊಂಡು ಅಮುಲ್‌ ಐಸ್‌ಕ್ರೀಂ ತಯಾರಿಸುತ್ತಿದ್ದೇವೆ. ನಮಗೆ ಚೀಸ್‌ನ ಕೊರತೆಯುಂಟಾದಾಗ ನಂದಿನಿಯಿಂದ ಚೀಸ್‌ ಖರೀದಿಸಿದ್ದೇವೆ. ಈಗ ಎದ್ದಿರುವ ವಿವಾದದಿಂದ ನಂದಿನಿಯ ಜೊತೆ ನಮಗಿರುವ ಸ್ನೇಹಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ಜಯೇನ್‌ ತಿಳಿಸಿದ್ದಾರೆ.

ಚಿಲ್ಲರೆ ಮಾರುಕಟ್ಟೆಗೆ ಬರೋದಿಲ್ಲ:

ಇಷ್ಟಕ್ಕೂ ನಾವು ಕರ್ನಾಟಕಕ್ಕೆ ಈಗ ಹೊಸತಾಗಿ ಕಾಲಿಡುತ್ತಿಲ್ಲ. ಕಳೆದ ಏಳೆಂಟು ವರ್ಷಗಳಿಂದ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ನಾವು ಅಮುಲ್‌ ಹಾಲು ಮತ್ತು ಮೊಸರಿನ ಪ್ಯಾಕೆಟ್‌ ಮಾರುತ್ತಿದ್ದೇವೆ. ಈಗಲೂ ನಾವು ಬೆಂಗಳೂರಿನಲ್ಲಿ ಹಾಲು ಮತ್ತು ಮೊಸರನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಿಲ್ಲ. ಕೇವಲ ಇ-ಕಾಮರ್ಸ್‌ ಹಾಗೂ ಕ್ವಿಕ್‌ ಕಾಮರ್ಸ್‌ ವೇದಿಕೆಗಳಲ್ಲಿ ಮಾತ್ರ ಹಾಲು, ಮೊಸರು ಮಾರಾಟ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

Nandini VS Amul: ಅಣ್ಣಾವ್ರು ನಟಿಸಿದ್ದು ಒಂದೇ ಜಾಹೀರಾತು, ಅಂಥಾ ನಂದಿನಿಗೆ ಬಂದಿತೇಕೆ ಆಪತ್ತು?

ಜನರು ಸಚ್‌ರ್‍ ಮಾಡಿದ್ದಕ್ಕೆ ಬಂದೆವು:

ನಾವು ಬೆಂಗಳೂರಿನಲ್ಲಿ ಹಾಲು ಮತ್ತು ಮೊಸರಿನ ಮಾರಾಟಕ್ಕಿಳಿಯಲು ಪ್ರಮುಖ ಕಾರಣವೇ ಗ್ರಾಹಕರು ಇ-ಕಾಮರ್ಸ್‌ ವೇದಿಕೆಗಳಲ್ಲಿ ಅಮುಲ್‌ ಡೈರಿ ಉತ್ಪನ್ನಗಳಿಗೆ ಸಚ್‌ರ್‍ ಮಾಡುತ್ತಿರುವುದು. ಅಮುಲ್‌ ಹಾಲು ಮತ್ತು ಮೊಸರಿಗೆ ಬೆಂಗಳೂರು ಮತ್ತು ದಕ್ಷಿಣ ಭಾರತದಲ್ಲಿ ಆನ್‌ಲೈನ್‌ನಲ್ಲಿ ಸಚ್‌ರ್‍ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿಗೆ ಬಂದಿದ್ದೇವೆ. ನಮಗೆ ಬೆಂಗಳೂರಿನಲ್ಲಿ ಘಟಕವಿಲ್ಲದ ಕಾರಣ ಹತ್ತಿರದ ಘಟಕವಾದ ಆಂಧ್ರಪ್ರದೇಶದ ಮದನಪಲ್ಲಿ ಘಟಕದಿಂದ ಹಾಲು ಮತ್ತು ಮೊಸರು ತಂದು ಮಾರಾಟ ಮಾಡುತ್ತೇವೆ ಎಂದೂ ಜಯೇನ್‌ ಮೆಹ್ತಾ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!