ರೈಲಿನಲ್ಲಿ ಲಗೇಜು ಕಳ್ಳತನವಾದರೆ ರೈಲ್ವೆ ಇಲಾಖೆ ಪರಿಹಾರ ಕೊಡಬೇಕು: ಗ್ರಾಹಕ ನ್ಯಾಯಾಲಯ ಆದೇಶ

Published : Apr 10, 2023, 07:31 PM ISTUpdated : Apr 10, 2023, 07:33 PM IST
ರೈಲಿನಲ್ಲಿ ಲಗೇಜು ಕಳ್ಳತನವಾದರೆ ರೈಲ್ವೆ ಇಲಾಖೆ ಪರಿಹಾರ ಕೊಡಬೇಕು: ಗ್ರಾಹಕ ನ್ಯಾಯಾಲಯ ಆದೇಶ

ಸಾರಾಂಶ

ರೈಲಿನಲ್ಲಿನ ಪ್ರಯಾಣಿಕರ ಲಗೇಜುಗಳು ಅಥವಾ ಬ್ಯಾಗ್‌ ಕಳ್ಳತನವಾದರೆ ರೈಲ್ವೆ ಇಲಾಖೆಯೇ ಹೊಣೆಯಾಗಲಿದ್ದು, ಸಂತ್ರಸ್ಥರಿಗೆ ಪರಿಹಾರ ಕೊಡುವಂತೆ ಗ್ರಾಹಕ ನ್ಯಾಯಾಲಯ ಆದೇಶಿದಿದೆ.

ನವದೆಹಲಿ (ಏ.10): ರೈಲಿನಲ್ಲಿ ಪ್ರಯಾಣ ಮಾಡುವಾಗ ಯಾವುದಾದರೂ ಲಗೇಜುಗಳು ಅಥವಾ ಬ್ಯಾಗ್‌ ಕಳ್ಳತನವಾದರೆ ಅದಕ್ಕೆ ರೈಲ್ವೆ ಇಲಾಖೆಯೇ ಹೊಣೆಯಾಗಲಿದೆ. ಇನ್ನು ಸಂತ್ರಸ್ತ ಪ್ರಯಾಣಿಕರಿಗೆ ಪರಿಹಾರವನ್ನೂ ಕೊಡಬೇಕು ಎಂದು ಚಂಡೀಘಡ ರಾಜ್ಯ ಗ್ರಾಹಕ ಆಯೋಗವು ಮಹತ್ವದ ತೀರ್ಪನ್ನು ಹೊರಡಿಸಿದೆ.

ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಮಾಡುವಾಗ ಲಗೇಜ್‌ ಕಳೆದು ಹೋಗುತ್ತದೆ ಎನ್ನುವ ಆತಂಕದಿಂದಲೇ ಪ್ರಯಾಣ ಮಾಡುತ್ತಿರುತ್ತಾರೆ. ಪ್ರಯಾಣಿಸುವಾಗ ಬೆಲೆ ಬಾಳುವ ವಸ್ತುಗಳನ್ನು ಮೈಮೇಲೆ ಹಾಕಿಕೊಂಡು ಹೋಗುವುದಿಲ್ಲ. ಒಂದು ವೇಳೆ ರೈಲಿನಲ್ಲಿ ಲಗೇಜು ಅಥವಾ ಮೈಮೇಲಿನ ಆಭರಣಗಳು ಕಳ್ಳತನವಾದರೆ ಅದಕ್ಕೆ ಸಂಬಂಧಪಟ್ಟಂತೆ ದೂರು ನೀಡಿದರೂ, ರೈಲ್ವೆ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನಿಮ್ಮ ಲಗೇಜು ನಿಮ್ಮ ಜವಾಬ್ದಾರಿ. ನಾವೇನೂ ಮಾಡಲಿಕ್ಕಾಗುವುದಿಲ್ಲ ಎಂದು ಕೈತೊಳೆದುಕೊಳ್ಳುತ್ತಿದ್ದರು. ಆದರೆ, ಈಗ ಚಂಡೀಘಡ ಗ್ರಾಹಕ ನ್ಯಾಯಾಲಯದ ಆದೇಶದಿಂದ ರೈಲ್ವೆ ಇಲಾಖೆ ಬೆಚ್ಚಿ ಬಿದ್ದಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ 14ನೇ ಕಂತು ಯಾವಾಗ ಸಿಗುತ್ತೆ? ಈ ಯೋಜನೆ ಸೇರ್ಪಡೆ ಹೇಗೆ,ಅಗತ್ಯ ದಾಖಲೆಗಳು ಯಾವುವು?

ಕಾಯ್ದಿರಿಸಿದ ಸೀಟ್‌ನಲ್ಲಿ ಕಳ್ಳತನ: ಚಂಡೀಗಢ ರಾಜ್ಯ ಗ್ರಾಹಕ ಆಯೋಗವು ರೈಲು ಪ್ರಯಾಣಿಕರ ಪರವಾಗಿ ಮಹತ್ವದ ನಿರ್ಧಾರವನ್ನು ನೀಡಿದೆ. ರೈಲಿನಲ್ಲಿ ಕಾಯ್ದಿರಿಸಿದ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಕರ ಲಗೇಜ್ ಕಳ್ಳತನವಾದರೆ, ಪ್ರಯಾಣಿಕರ ಕದ್ದ ಲಗೇಜ್‌ಗೆ ರೈಲ್ವೆ ಇಲಾಖೆಯೇ ಪರಿಹಾರವನ್ನು ನೀಡಬೇಕಾಗುತ್ತದೆ ಎಂದು ಆಯೋಗ ಆದೇಶ ನೀಡಿದೆ. ರೈಲಿನಲ್ಲಿ ಸರಗಳ್ಳತನದ ಘಟನೆಗೆ ಸಂಬಂಧಿಸಿದಂತೆ ಕುರಿತ ಪ್ರಕರಣವೊಂದರಲ್ಲಿ ಈ ಘಟನೆಯ ಬಗ್ಗೆ ರೈಲ್ವೆ ಇಲಾಖೆಯೇ ಹೊಣೆಗಾರಿಕೆ ಹೊತ್ತುಕೊಳ್ಳಬೇಕು ಎಂದು ಆದೇಶಿಸಿ ಪ್ರಯಾಣಿಕರಿಗೆ ಲಗೇಜ್‌ನ ವೆಚ್ಚವನ್ನು ಪಾವತಿಸಲು ರೈಲ್ವೆ ಇಲಾಖೆಗೆ ಸೂಚಿಸಲಾಗಿದೆ. ಈ ಮೂಲಕ ಗ್ರಾಹಕರಿಗೆ ರೈಲ್ವೆ ಇಲಾಖೆಯು 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

ಪತ್ನಿಯ ಪರ್ಸ್‌ ಕದ್ದು ಪರಾರಿ:  ಚಂಡೀಗಢದ ಸೆಕ್ಟರ್-28ರ ನಿವಾಸಿ ರಂಬೀರ್ ಎಂಬುವವರ ದೂರಿನ ಮೇರೆಗೆ ಗ್ರಾಹಕ ನ್ಯಾಯಾಲಯ ಈ ಆದೇಶ ನೀಡಿದೆ. ಚಂಡೀಘಡದ ನಿವಾಸಿ ತನ್ನ ಕುಟುಂಬದೊಂದಿಗೆ ಚಂಡೀಗಢದಿಂದ ದೆಹಲಿಗೆ ಹೋಗುತ್ತಿದ್ದರು. ಈ ವೇಳೆ ಅಂಬಾಲಾ ರೈಲು ನಿಲ್ದಾಣದಲ್ಲಿ ಅವರ ಪತ್ನಿಯ ಪರ್ಸ್ ಅನ್ನು ವ್ಯಕ್ತಿಯೊಬ್ಬ ಕಿತ್ತುಕೊಂಡು ಪರಾರಿ ಆಗಿದ್ದಾನೆ. ಪರ್ಸ್‌ನಲ್ಲಿ ಹಣ ಮತ್ತು ಬೆಲೆಬಾಳುವ ವಸ್ತುಗಳಿದ್ದವು. ಈ ಬಗ್ಗೆ ಪರ್ಸ್ ಪತ್ತೆ ಮಾಡಿಕೊಡುವಂತೆ ಮನವಿ ಮಾಡಿದರೂ ರೈಲ್ವೆ ಪೊಲೀಸರು ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿ, ರಂಬೀರ್ ರೈಲ್ವೆ ಇಲಾಖೆ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಅಲ್ಲಿ ಅವರ ಪ್ರಕರಣ ತಿರಸ್ಕೃತವಾಯಿತು. ನಂತರ, ಜಿಲ್ಲಾ ಗ್ರಾಹಕ ನ್ಯಾಯಾಲಯದ ಆದೇಶದ ವಿರುದ್ಧ ರಂಬೀರ್ ರಾಜ್ಯ ಗ್ರಾಹಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಕಂಪಾರ್ಟ್‌ಮೆಂಟ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಸಂಚಾರ: ಚಂಡೀಘಡದಿಂದ ದೆಹಲಿಗೆ ಹೋಗಲು ರಂಬೀರ್ ಅವರು ರೈಲ್ವೆ ವೆಬ್‌ಸೈಟ್‌ನಿಂದ ಗೋವಾ ಸಂಪರ್ಕ ಕ್ರಾಂತಿ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಇನ್ನು ರೈಲು 5 ನವೆಂಬರ್ 2018 ರಂದು ಚಂಡೀಗಢದಿಂದ ಹೊರಟಾಗ, ರಿಸರ್ವ್ ಕೋಚ್‌ನಲ್ಲಿ ಕೆಲವು ಅನುಮಾನಾಸ್ಪದ ಜನರು ತಿರುಗಾಡುವುದನ್ನು ನೋಡಿದ್ದಾರೆ. ಈ ವಿಷಯವನ್ನು ಅವರು ಟಿಟಿಇಗೆ ತಿಳಿಸಿದರು. ಆದರೆ, ಟಿಟಿಇ ಅವರ ಮಾತಿಗೆ ಕಿವಿಗೊಡಲಿಲ್ಲ. ಆದರೆ, ಈ ರೈಲು ಅಂಬಾಲಾ ರೈಲು ನಿಲ್ದಾಣಕ್ಕೆ ಬಂದ ಕೂಡಲೇ ಶಂಕಿತ ವ್ಯಕ್ತಿಯೊಬ್ಬ ತನ್ನ ಪತ್ನಿಯ ಪರ್ಸ್ ಕಸಿದುಕೊಂಡು ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದಾನೆ ಎಂದು ದೂರು ದಾಖಲಿಸಿದ್ದರು.

ಇಳಕಲ್‌ ಸೀರೆಯಲ್ಲಿ 'ಈ ಸಲ ಕಪ್‌ ನಮ್ದೇ' ಘೋಷವಾಕ್ಯ! ಆರ್‌ಸಿಬಿ ಅಭಿಮಾನಿ ಸೀರೆಗೆ ಮಹಿಳೆಯರ ಬೇಡಿಕೆ

1.58 ಲಕ್ಷ ರೂ. ಪಾವತಿಗೆ ಆದೇಶ: ಇನ್ನು ರೈಲ್ವೆ ಇಲಾಖೆಗೆ ತರಾಟೆ ತೆಗೆದುಕೊಂಡ ಗ್ರಾಹಕ ಆಯೋಗವು ರೈಲಿನಲ್ಲಿರುವ ಪ್ರಯಾಣಿಕರು ಮತ್ತು ಸರಕುಗಳ ಸುರಕ್ಷತೆಯ ಜವಾಬ್ದಾರಿಯನ್ನು ರೈಲ್ವೆ ಹೊಂದಿದೆ ಎಂದು ಹೇಳಿಕೊಂಡಿದೆ. ಇನ್ನು ರಂಬೀರ್ ಅವರ ಪತ್ನಿಯಿಂದ ಕಿತ್ತುಕೊಂಡ ವಸ್ತುಗಳಿಗೆ ಪರ್ಯಾಯವಾಗಿ 1.08 ಲಕ್ಷ ರೂ. ಹಣವನ್ನು ಪಾವತಿಸಬೇಕು. ಜೊತೆಗೆ ಅವರಿಗೆ ಪರಿಹಾರವಾಗಿ 50,000 ರೂ. ಗಳನ್ನು ನೀಡಬೇಕು ರೈಲ್ವೆ ಇಲಾಖೆಗೆ ಗ್ರಾಹಕ ರಕ್ಷಣಾ ಆಯೋಗವು ಆದೇಶಿಸಿದೆ. ಇನ್ನು ಪ್ರಯಾಣಿಕರ ಸರಕುಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡುತ್ತಿರುವುದು ಇದೇ ಮೊದಲಲ್ಲ. ಆದರೂ, ರೈಲ್ವೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್