ಪಾಕ್‌ ಜೈಲಿನಿಂದ ಕುಲ್ದೀಪ್ ಬಿಡುಗಡೆ: 28 ವರ್ಷಗಳ ಬಳಿಕ ಕುಟುಂಬ ಸೇರಿದ ಯಾದವ್‌

By Anusha KbFirst Published Sep 2, 2022, 3:21 PM IST
Highlights

ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನ ಜೈಲು ಪಾಲಾಗಿದ್ದ ಗುಜರಾತ್‌ನ ವ್ಯಕ್ತಿಯೊಬ್ಬರು ಕೊನೆಗೂ ಬಿಡುಗಡೆಯಾಗಿದ್ದು, ಬರೋಬ್ಬರಿ 28 ವರ್ಷಗಳ ಬಳಿಕ ತಮ್ಮ ಕುಟುಂಬವನ್ನು ಸೇರಿದ್ದಾರೆ.

ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನ ಜೈಲು ಪಾಲಾಗಿದ್ದ ಗುಜರಾತ್‌ನ ವ್ಯಕ್ತಿಯೊಬ್ಬರು ಕೊನೆಗೂ ಬಿಡುಗಡೆಯಾಗಿದ್ದು, ಬರೋಬ್ಬರಿ 28 ವರ್ಷಗಳ ಬಳಿಕ ತಮ್ಮ ಕುಟುಂಬವನ್ನು ಸೇರಿದ್ದಾರೆ. ಗೂಢಾಚರ್ಯೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಅಧಿಕಾರಿಗಳು  1994ರಲ್ಲಿ ಅವರನ್ನು ಬಂಧಿಸಿದ್ದರು. ಗುಜರಾತ್‌ ಮೂಲದ 59 ವರ್ಷದ ಕುಲ್ದೀಪ್ ಯಾದವ್‌ ಅವರು 28 ವರ್ಷಗಳ ಕಾಲ ಪಾಕಿಸ್ತಾನದ ಜೈಲಿನ ಕಂಬಿಗಳ ಹಿಂದೆ ತಮ್ಮ ದಿನಗಳನ್ನು ಕಳೆದಿದ್ದರು. ಬೇಹುಗಾರಿಕೆ ಆರೋಪದಡಿ ಪಾಕಿಸ್ತಾನದ ಕೋರ್ಟ್ ಕುಲ್‌ದೀಪ್ ಯಾದವ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಪ್ರಸ್ತುತ ತನ್ನ ಕುಟುಂಬವನ್ನು ಸೇರಿದ ಕುಲ್‌ದೀಪ್ ಯಾದವ್ ಅವರು ಈಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನೆರೆಯ ದೇಶದ ಜೈಲುಗಳಲ್ಲಿ ಕೊಳೆಯುತ್ತಿರುವ  ದೇಶದ ಇತರ ಪ್ರಜೆಗಳನ್ನು  ಮರಳಿ ಕರೆತರಲು ಸಹಾಯ ಮಾಡುವಂತೆ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. 

1994ರಲ್ಲಿ ಪಾಕಿಸ್ತಾನ ಜೈಲು ಸೇರಿದ್ದ ಕುಲ್ದೀಪ್ ಯಾದವ್ (Kuldeep Yadav) 2013ರಲ್ಲಿ ತಮ್ಮ ಕುಟುಂಬದ ಸಂಪರ್ಕವನ್ನೇ ಕಳೆದುಕೊಂಡಿದ್ದರು. ಈಗ ಅವರು ತಮ್ಮ ಪುನರ್ವಸತಿಗೆ (rehabilitation) ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ತನ್ನ ಬಳಿ ಈಗ ಏನೂ ಉಳಿದಿಲ್ಲ. ತನ್ನ ಜೀವನ ನಿರ್ವಹಣೆಗಾಗಿ ಕುಟುಂಬವನ್ನು ಅವಲಂಬಿಸಲಾಗದು. ನನ್ನ ಸಹೋದರ ಸಹೋದರಿಯರನ್ನು ಎಷ್ಟು ದಿನ ಅವಲಂಬಿಸಲಿ. ನನ್ನ ಧರಿಸಿರುವ ಬಟ್ಟೆಯೂ ಪಾಕಿಸ್ತಾನದ್ದೇ, ನನಗೆ ಕನಿಷ್ಠ ನನ್ನದೇ ಉಡುಪು ಕೂಡ ಇಲ್ಲ ಎಂದು ಅವರು ಹೇಳಿದರು.

ಸರಬ್ಜಿತ್ ಸಿಂಗ್ ಬಿಡುಗಡೆಗೆ ಹೋರಾಡಿದ್ದ ಸಹೋದರಿ ದಲ್ಬಿರ್ ಕೌರ್ ನಿಧನ

ನೆರೆಯ ದೇಶದ ಜೈಲಿನಲ್ಲಿರುವ ಭಾರತೀಯರ ದುಃಸ್ಥಿತಿಯನ್ನು ಅರ್ಥಮಾಡಿಕೊಂಡು ಅವರನ್ನು ದೇಶಕ್ಕೆ ಕರೆತರಲು ಸಹಾಯ ಮಾಡುವಂತೆ  ಅವರು ಪಾಕಿಸ್ತಾನದಲ್ಲಿರುವ ಭಾರತೀಯ ಹೈ ಕಮೀಷನ್‌ಗೂ (Indian High Commission) ಮನವಿ ಮಾಡಿದರು. ಪಾಕಿಸ್ತಾನದ ಜೈಲುಗಳಲ್ಲಿ ಕೊಳೆಯುತ್ತಿರುವ ಎಲ್ಲಾ ಭಾರತೀಯ ಕೈದಿಗಳನ್ನು ಮರಳಿ ಕರೆತರಬೇಕು, ಅವರು ಕೂಡ ತಮ್ಮ ಕುಟುಂಬದೊಂದಿಗೆ ಸಂತಸದಿಂದ ಇರಬೇಕು ಎಂದು ನಾನು ಬಯಸುತ್ತೇನೆ. ಭಾರತೀಯ ಜೈಲಿನಲ್ಲಿರುವ ಪಾಕಿಸ್ತಾನಿಯರನ್ನು ಭಾರತ ಸರ್ಕಾರ (Indian government) ಬಿಡುಗಡೆ ಮಾಡಬೇಕು. ಪ್ರತಿಯಾಗಿ ಪಾಕಿಸ್ತಾನವೂ ಭಾರತದ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. 

1994 ರ ಮಾರ್ಚ್‌ 23 ರಂದು ಪಾಕಿಸ್ಥಾನದ ಅಧಿಕಾರಿಗಳು ಕುಲ್ದೀಪ್ ಯಾದವ್ ಅವರನ್ನು ಬಂಧಿಸಿ ಮೂರು ವರ್ಷಗಳ ಕಾಲ ಬಂಧನದಲ್ಲಿರಿಸಿದ್ದರು. ಇದಾದ ಬಳಿಕ ಪಾಕಿಸ್ತಾನದ ಕೋರ್ಟ್‌ ಅವರಿಗೆ ಬೇಹುಗಾರಿಕೆ ಆರೋಪದಡಿ 25 ವರ್ಷಗಳ ಜೈಲು ಶಿಕ್ಷೆ ನೀಡಿತ್ತು. 1996ರಲ್ಲಿ ಕೋಟ್ ಲಖ್ಪತ್ ಜೈಲಿಗೆ (Lakhpat Jail) ಅವರನ್ನು ಸ್ಥಳಾಂತರಿಸಲಾಗಿತ್ತು. 

ವಶದಲ್ಲಿದ್ದ ಉಗ್ರ ಅಜರ್‌ನನ್ನು ರಹಸ್ಯವಾಗಿ ಹೊರಬಿಟ್ಟ ಪಾಕ್‌! 

ಪ್ರೇಯಸಿ ನೋಡಲು ಅಕ್ರಮವಾಗಿ ಪಾಕ್ ಪ್ರವೇಶಿಸಿದ ಮುಂಬೈ ಟೆಕ್ಕಿ ರಿಲೀಸ್!
2018ರಲ್ಲಿ ಅಂತರ್ಜಾಲದಲ್ಲಿ ಪರಿಚಿತಗೊಂಡಿದ್ದ ತನ್ನ ಪ್ರಿಯತಮೆಯನ್ನು ಭೇಟಿ ಮಾಡಲು ನಕಲಿ ಪಾಸ್‌ಪೋರ್ಟ್‌ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದ ಮುಂಬೈ ಮೂಲದ ಹಮೀದ್‌ ನಿಹಾಲ್‌ ಅನ್ಸಾರಿಯನ್ನು ಪಾಕಿಸ್ತಾನ ಸರ್ಕಾರ  ಬಿಡುಗಡೆ ಮಾಡಿತ್ತು. 3 ವರ್ಷಗಳ ಹಿಂದೆ ಅಂದರೆ 2015 ರಲ್ಲಿ ಅನ್ಸಾರಿ, ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಆಫ್ಘಾನಿಸ್ತಾನದ ಮೂಲಕ ಪಾಕ್‌ಗೆ ತೆರಳಿದ್ದ. ಆದರೆ ಈತ ಭಾರತೀಯ ಗುಪ್ತಚರ ಎಂದು ಬಂಧಿಸಿದ ಪಾಕ್‌ 3 ವರ್ಷ ಜೈಲಿಗೆ ಅಟ್ಟಿತ್ತು. ನಂತರ 2018 ರಲ್ಲಿ ಶಿಕ್ಷೆಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಕೋರ್ಟ್‌ ಆದೇಶದಂತೆ  ಬಿಡುಗಡೆ ಮಾಡಲಾಗಿತ್ತು.

click me!