ಮೆರವಣಿಗೆ ವೇಳೆ ಕರೆಂಟ್ ಶಾಕ್: ತನ್ನ ಮೇಲಿದ್ದವರ ಕೆಳಗುರುಳಿಸಿ ಆನೆ ಎಸ್ಕೇಪ್

Published : Oct 16, 2022, 01:00 PM IST
ಮೆರವಣಿಗೆ ವೇಳೆ ಕರೆಂಟ್ ಶಾಕ್: ತನ್ನ ಮೇಲಿದ್ದವರ ಕೆಳಗುರುಳಿಸಿ ಆನೆ ಎಸ್ಕೇಪ್

ಸಾರಾಂಶ

ಗುಜರಾತ್‌ನಲ್ಲಿ ದೇಗುಲದ ಜಾತ್ರೆಯ ಮೆರವಣಿಗೆ ವೇಳೆ ವಿದ್ಯುತ್ ಅವಘಡವೊಂದು ಸಂಭವಿಸಿದ್ದು, ದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಘಟನೆಯ ದೃಶ್ಯಾವಳಿಗಳು ಮೆರವಣಿಗೆಯಲ್ಲಿದ್ದ ಜನರ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಹ್ಮದಾಬಾದ್: ಗುಜರಾತ್‌ನಲ್ಲಿ ದೇಗುಲದ ಜಾತ್ರೆಯ ಮೆರವಣಿಗೆ ವೇಳೆ ವಿದ್ಯುತ್ ಅವಘಡವೊಂದು ಸಂಭವಿಸಿದ್ದು, ದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಘಟನೆಯ ದೃಶ್ಯಾವಳಿಗಳು ಮೆರವಣಿಗೆಯಲ್ಲಿದ್ದ ಜನರ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆನೆ ಮೇಲೆ ತೊಟ್ಟಿಲನ್ನು ಕಟ್ಟಿ ಅದರಲ್ಲಿ ಸ್ವಾಮೀಜಿಯೊಬ್ಬರು, ಮತ್ತಿಬ್ಬರು ವ್ಯಕ್ತಿಗಳು ಹಾಗೂ ತೊಟ್ಟಿಲಿನ ಹೊರಗೆ ಆನೆ ಮೇಲೆ ಮಾವುತ, ಇಷ್ಟೊಂದು ಜನ ಆನೆ ಮೇಲೆ ಕುಳಿತುಕೊಂಡು ರಸ್ತೆಯಲ್ಲಿ ಸಾಗುತ್ತಿದ್ದರೆ ಇನ್ನುಳಿದ ನೂರಾರು ಜನ ಆನೆಯ ಹಿಂದೆ ಮುಂದೆ ಹೆಜ್ಜೆ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಆದರೆ ಮೇಲೆ ಕುಳಿತವರು ಮಾಡಿದ ಅವಾಂತರದ ಪರಿಣಾಮ ಆನೆಗೆ ವಿದ್ಯುತ್ ಶಾಕ್ ತಗುಲಿ ಓಡಲು ಶುರು ಮಾಡಿದೆ.

ರಸ್ತೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿದ್ದ ವಿದ್ಯುತ್ ವೈರ್‌ಗೆ ಮೇಲೆ ಆನೆ ಮೇಲೆ ಕುಳಿತಿದ್ದ ಜನರ ಬಳಿ ಇದ್ದ ಅಲಂಕರಿಸಲ್ಪಟ್ಟ ಛತ್ರಿಯೊಂದು ತಾಗಿದ್ದು, ಇದರಿಂದ ಆನೆಗೆ ಶಾಕ್ ಹೊಡೆದಿದ್ದು, ಗಲಿಬಿಲಿಗೊಂಡ ಆನೆ ಬಿದ್ನೋ ಎದ್ನೋ ಅಂತ ಓಡಾಲು ಶುರು ಮಾಡಿದೆ. ಪರಿಣಾಮ ಆನೆ ಮೇಲೆ ಕುಳಿತ ಸ್ವಾಮೀಜಿ, ಸ್ವಾಮೀಜಿಯ ಸಹಚರರು ಕೊಡೆ ಹಿಡಿದವರು ಎಲ್ಲರೂ ಸೆಕೆಂಡ್‌ಗಳಲ್ಲಿ ರಸ್ತೆಗೆ ಬಿದ್ದಿದ್ದಾರೆ. ಗುಜರಾತ್‌ನ ಮಹೇಶನಾ (Mahesana) ಜಿಲ್ಲೆಯ ಕಸ್ವಾ ಗ್ರಾಮದ (Kasva village) ವಡ್ವಾಲಾ ದೇಗುಲದ (Vadwala temple) ಮಹಂತ ಕನಿರಾಮ್ ಬಾಪು ಅವರ ಮೆರವಣಿಗೆ ವೇಳೆ ಈ ಅನಾಹುತ ಸಂಭವಿಸಿದೆ.

 

ಕನಿರಾಮ್ ಬಾಪು ಅವರನ್ನು ದೇಗುಲದಿಂದ (Temple) ಆನೆ ಮೇಲೆ ಹೊರಗೆ ಕರೆದೊಯ್ಯುವ ವೇಳೆ ಈ ಅವಘಡ ಸಂಭವಿಸಿದೆ. ಮಹಂತ್ ಕನಿರಾಮ್ ಬಾಪು (Kaniram Bapu) ಜೊತೆಯಲ್ಲಿ, ಮಹಂತ್ ರಾಜಾ ಭುವಾ ಹಾಗೂ ಮತ್ತಿಬ್ಬರು ಆನೆಯ ಮೇಲೆ ಕುಳಿತಿದ್ದರು. ಆನೆ ಮೇಲಿದ್ದವರಿಗೆ ನೆರಳು ಒದಗಿಸಲು ಅಲಂಕರಿಸಿದ್ದ ಛತ್ರಿಯನ್ನು ಹಿಡಿದಿದ್ದಾರೆ. ಈ ವೇಳೆ ಈ ಛತ್ರಿ ಮೇಲಿದ್ದ ವಿದ್ಯುತ್ ವೈರ್‌ಗೆ ಸಿಲುಕಿ ಈ ಅವಘಡ ಸಂಭವಿಸಿದೆ. ವಿದ್ಯುತ್ ಶಾಕ್‌ಗೆ ಒಳಗಾದ ಕೂಡಲೇ ಆನೆ (elephant)  ಓಡಲು ಶುರು ಮಾಡಿದ್ದು, ಆನೆ ಮೇಲಿದ್ದ ಸ್ವಾಮೀಜಿ ಸೇರಿದಂತೆ ಎಲ್ಲರೂ ದೊಪ್ಪೆಂದು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮೆರವಣಿಗೆಯಲ್ಲಿ ಹೊರಟಿದ್ದ ಜನರೆಲ್ಲಾ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾರೆ. ಇತ್ತ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ.

ಆಹಾ ಆಹಾ... ಪಾನಿಪುರಿ ಸವಿಯುತ್ತಿರುವ ಆನೆ... ವಿಡಿಯೋ ಸಖತ್ ವೈರಲ್

ಈ ವಿಡಿಯೋ ವೈರಲ್ (Viral Video) ಆಗುತ್ತಿದ್ದಂತೆ ನೆಟ್ಟಿಗರು ತರ ತರಹದ ಕಾಮೆಂಟ್ ಮಾಡಿದ್ದಾರೆ. ಆನೆ ಕ್ಷೇಮವಾಗಿರುವುದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಆನೆ ಒಳ್ಳೆ ಕೆಲಸ ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಆನೆ ಮೇಲೆ ಕೂರಬೇಕೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಈ ಅವಘಡದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಆನೆ ಮೇಲೆ ಕುಳಿತವರು ಕೆಳಗೆ ಬಿದ್ದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿವೆ. 

ಆನೆ ಮೇಲೆ ಸುಭದ್ರವಾಗಿ ಅಂಬಾರಿ ಕಟ್ಟುವ ಕಾರ್ಯ ಯಾರದ್ದು..?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು