ಸೊರೊಸ್‌ನಿಂದ ಕೋಟ್ಯಾಂತರ ರೂ ನೆರವು: ಇಡಿ ಸ್ಕ್ಯಾನರ್‌ ಅಡಿ ಬೆಂಗಳೂರು ಮೂಲದ 3 ಕಂಪನಿಗಳು

ಜಾರ್ಜ್ ಸೊರೊಸ್ ನಿಧಿಯ ತನಿಖೆಗೆ ಸಂಬಂಧಿಸಿದಂತೆ ಬೆಂಗಳೂರಿನ ಮೂರು ಸಂಸ್ಥೆಗಳು ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಟ್ಟಿವೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ಈ ತನಿಖೆ ನಡೆಯುತ್ತಿದೆ.


ವಿದೇಶಗಳಲ್ಲಿ ಎಡಪಂಥೀಯ ಉದಾರವಾದ ಹಬ್ಬಲು ಹಣಕಾಸು ಸಹಾಯ ಮಾಡಿದ್ದಾರೆ ಎಂದು ಟ್ರಂಪ್ ಆಡಳಿತದಿಂದ ವ್ಯಾಪಕ ಟೀಕೆಗೆ ಗುರಿಯಾಗಿರುವ ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಎಐಡಿ) ನ ಹೆಡ್ಜ್ ಫಂಡ್ ಆಪರೇಟರ್ ಆಗಿರುವ ಜಾರ್ಜ್ ಸೊರೊಸ್ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಬೆಂಗಳೂರಿನ ಮೂರು ಸಂಸ್ಥೆಗಳು ಈಗ ಜಾರಿ ನಿರ್ದೇಶನಾಲಯದ ಸ್ಕ್ಯಾನರ್‌ನಲ್ಲಿವೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ಬೆಂಗಳೂರು ಮೂಲದ ಮೂರು ಕಂಪನಿಗಳಾದ ASAR ಸೋಷಿಯಲ್ ಇಂಪ್ಯಾಕ್ಟ್ ಅಡ್ವೈಸರ್, ರೂಟ್‌ಬ್ರಿಡ್ಜ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ರೂಟ್‌ಬ್ರಿಡ್ಜ್ ಅಕಾಡೆಮಿ ಲಿಮಿಟೆಡ್ ಮೇಲೆ ಈಗ ಜಾರಿ ನಿರ್ದೇಶನಾಲಯ ತನಿಖೆಗೆ ಮುಂದಾಗಿದೆ. ಈ ಕಂಪನಿಗಳು ಸೊರೊಸ್ ಸ್ಥಾಪಿಸಿದ ಓಪನ್ ಸೊಸೈಟಿ ಫೌಂಡೇಶನ್ಸ್‌ನ ಪ್ರಭಾವ ಹೂಡಿಕೆ ವಿಭಾಗವಾದ ಸೊರೊಸ್ ಎಕನಾಮಿಕ್ ಡೆವಲಪ್‌ಮೆಂಟ್ ಫಂಡ್ (SEDF) ನಿಂದ 25 ಕೋಟಿ ರೂ.ಗಳನ್ನು ಪಡೆದಿವೆ ಎಂದು ವರದಿಯಾಗಿದೆ. ಈ ಹಣವನ್ನು 2021 ಮತ್ತು 2024 ರ ನಡುವೆ ವರ್ಗಾಯಿಸಲಾಗಿದೆ.

Latest Videos

ತನಿಖೆಯ ಸಮಯದಲ್ಲಿ, ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ, 2022-23 ರಲ್ಲಿ ASAR ಸಾಮಾಜಿಕ ಪರಿಣಾಮ ಸಲಹೆಗಾರ USAIDನಿಂದ 8 ಕೋಟಿ ರೂ.ಗಳನ್ನು ವಿದೇಶಿ ಒಳಮುಖ ರವಾನೆಯಾಗಿ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.  ದೆಹಲಿ ಮೂಲದ ಸಾರ್ವಜನಿಕ ನೀತಿ ಚಿಂತಕರ ಚಾವಡಿ, ಇಂಧನ, ಪರಿಸರ ಮತ್ತು ನೀರಿನ ಮಂಡಳಿ (CEEW) ಗೆ ಒದಗಿಸಲಾದ ಸೇವೆಗಳಿಗೆ USAID ನಿಧಿಯು ಮರುಪಾವತಿಯಾಗಿದೆ ಎಂದು ASAR ಆಡಳಿತ ಮಂಡಳಿಯು ಇಡಿಗೆ ತಿಳಿಸಿದೆ ಎಂದು ವರದಿಯಾಗಿದೆ. ಅದರ ವೆಬ್‌ಸೈಟ್ ಪ್ರಕಾರ, CEEW "ಭಾರತದ ಅಭಿವೃದ್ಧಿಯ ಮೇಲಿನ ಜಾಗತಿಕ ಸವಾಲುಗಳು ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದರ" ಮೇಲೆ ತನ್ನ ಗುರಿ ಕೇಂದ್ರೀಕರಿಸುತ್ತದೆ. ಆದರೆ CEEW ಗೆ ನೀಡಲಾಗುವ ಸೇವೆಗಳ ನಿಖರ ಸ್ವರೂಪ ಅಥವಾ USAID ಜೊತೆಗಿನ ಅದರ ಸಂಬಂಧವನ್ನು ASAR ಸ್ಪಷ್ಟಪಡಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.

ಜಾರ್ಜ್ ಸೊರೊಸ್ ಅಥವಾ ಓಪನ್ ಸೊಸೈಟಿ ಫೌಂಡೇಶನ್‌ಗಳಿಗೆ ಯಾವುದೇ ಲಿಂಕ್ ಇಲ್ಲ: CEEW

ಈ ವಿವಾದಕ್ಕೆ ಸಂಬಂಧಿಸಿದಂತೆ, CEEW ಏಷ್ಯಾನೆಟ್ ನ್ಯೂಸೆಬಲ್‌ಗೆ ನೀಡಿದ ಅಧಿಕೃತ ಹೇಳಿಕೆಯಲ್ಲಿ ಜಾರ್ಜ್ ಸೊರೊಸ್ ಅಥವಾ ಓಪನ್ ಸೊಸೈಟಿ ಫೌಂಡೇಶನ್‌ಗಳೊಂದಿಗೆ CEEWಗೆ ಯಾವುದೇ ಸಂಬಂಧ ಇಲ್ಲ ಸಿಇಇಡಬ್ಲ್ಯು ಎಂದಿಗೂ ಜಾರ್ಜ್ ಸೊರೊಸ್ ಅಥವಾ ಓಪನ್ ಸೊಸೈಟಿ ಫೌಂಡೇಶನ್‌ಗಳ ಜೊತೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಅಥವಾ ಯಾವುದೇ ಹಣವನ್ನು ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಶುದ್ಧ ಗಾಳಿಗೆ ಸಂಬಂಧಿಸಿದ USAID ಯೋಜನೆಗೆ ನಿರ್ದಿಷ್ಟ ಸೇವೆಗಳನ್ನು ಒದಗಿಸಲು CEEWಯೂ ASAR ಸಾಮಾಜಿಕ ಪರಿಣಾಮ ಸಲಹೆಗಾರರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆ ಈಗಾಗಲೇ ಕೊನೆಗೊಂಡಿದೆ. ಈ ಹಂತದಲ್ಲಿ CEEW ASAR ನೊಂದಿಗೆ ಯಾವುದೇ ಪ್ರಸ್ತುತ ಸಂಬಂಧವನ್ನು ಹೊಂದಿಲ್ಲ. CEEW ASAR ಗೆ ಸಂಬಂಧಿಸಿದ ಯಾವುದೇ ಸರ್ಕಾರಿ ಅಧಿಕಾರಿಗಳಿಂದ ಯಾವುದೇ ಪ್ರಶ್ನೆಗಳನ್ನು ಸ್ವೀಕರಿಸಿಲ್ಲ. ಮೂರನೇ ವ್ಯಕ್ತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಯಾವುದೇ ತನಿಖೆಯ ಬಗ್ಗೆ ಪ್ರತಿಕ್ರಿಯಿಸಲು ನಮಗೆ ಯಾವುದೇ ಕಾರಣವಿಲ್ಲ ಅಥವಾ ಯಾವುದೇ ಆಧಾರವಿಲ್ಲ ಎಂದು ಅದು ಹೇಳಿದೆ.

ಭಾರತದ ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸಲು ಸ್ವತಂತ್ರ, ಕಠಿಣ ಸಂಶೋಧನೆ ನಡೆಸುವ ತನ್ನ ಧ್ಯೇಯಕ್ಕೆ CEEW ಸಮರ್ಪಿತವಾಗಿದೆ. ಭಾರತದಲ್ಲಿನ ಸರ್ಕಾರಗಳು ವಿವಿಧ ಹಂತಗಳಲ್ಲಿ ವಿವರಿಸಿರುವ ಅಭಿವೃದ್ಧಿ ಆದ್ಯತೆಗಳೊಂದಿಗೆ ನಾವು ಹೊಂದಿಕೊಂಡಿದ್ದೇವೆ ಮತ್ತು ಈ ಮನೋಭಾವದಲ್ಲಿ ಪುರಾವೆ ಆಧಾರಿತ ನೀತಿ ನಿರೂಪಣೆ ಮತ್ತು ಅನುಷ್ಠಾನವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ಎಲ್ಲಾ ಕೆಲಸಗಳು ಪಾರದರ್ಶಕವಾಗಿ, ಸಂಬಂಧಿತ ನಿಯಮಗಳಿಗೆ ಸಂಪೂರ್ಣ ಅನುಸರಣೆಯಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಪೂರೈಸುವ ನಮ್ಮ ಪ್ರಮುಖ ಧ್ಯೇಯಕ್ಕೆ ಹೊಂದಿಕೆಯಾಗುತ್ತವೆ ಎಂದು ನಾವು ಒತ್ತಿ ಹೇಳಲು ಬಯಸುತ್ತೇವೆ ಎಂದು ಹೇಳಿಕೆಯಲ್ಲಿ CEEW ತಿಳಿಸಿದೆ.

ಕಾಶ್ಮೀರ ಭಾರತದ ಭಾಗವಲ್ಲ ಎನ್ನುತ್ತಿದ್ದ ಜಾರ್ಜ್ ಸೊರೊಸ್ ಜೊತೆ ಸೋನಿಯಾ ಆತ್ಮೀಯತೆ?

ಈಗ ತನಿಖೆಗಿಳಿದಿರುವ ಜಾರಿ ನಿರ್ದೇಶನಾಲಯವೂ ಯುಎಸ್‌ಎಐಡಿ ಮಾಡಿದ ಈ ಪಾವತಿಗಳ ಉದ್ದೇಶ ಏನು ಎಂಬುದನ್ನು ಹುಡುಕುತ್ತಿದೆ. 'ಅನಪೇಕ್ಷಿತ ಚಟುವಟಿಕೆಗಳು' ಎಂಬ ಕಾರಣಕ್ಕೆ 2016 ರಲ್ಲಿ ಗೃಹ ಸಚಿವಾಲಯವು ಓಪನ್ ಸೊಸೈಟಿ ಫೌಂಡೇಶನ್ಸ್ ಅನ್ನು 'ಪೂರ್ವ ಉಲ್ಲೇಖ ವರ್ಗ'ದ ಅಡಿಯಲ್ಲಿ(prior reference category)ಸೇರಿಸಿದೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಭಾರತೀಯ ಲಾಭರಹಿತ ಸಂಸ್ಥೆಗೆ ಹಣವನ್ನು ದೇಣಿಗೆ ನೀಡಲು ಸಚಿವಾಲಯದಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. 

ಸೊರೋಸ್ ನೆರವಿನ ಸಂಸ್ಥೆ ಜೊತೆ ಸೋನಿಯಾ ಗಾಂಧಿಗೆ ನಂಟು: ಬಿಜೆಪಿಸೊರೋಸ್ ನೆರವಿನ ಸಂಸ್ಥೆ ಜೊತೆ ಸೋನಿಯಾ ಗಾಂಧಿಗೆ ನಂಟು: ಬಿಜೆಪಿ

ASAR ಮತ್ತು ಬೆಂಗಳೂರು ಮೂಲದ ಇತರ ಎರಡು ಸಂಸ್ಥೆಗಳಿಗೆ ಸಂಬಂಧಿಸಿದಂತೆ, OSF ಕಡ್ಡಾಯ ನಿಯಮಗಳನ್ನು ಪಾಲಿಸಿದೆಯೇ ಎಂಬುದನ್ನು ಜಾರಿ ನಿರ್ದೇಶನಾಲಯದ ತನಿಖೆ ಪರಿಶೀಲಿಸುತ್ತದೆ. ವಿದೇಶಿ ನೇರ ಹೂಡಿಕೆಗಳ ಹೆಸರಿನಲ್ಲಿ ಭಾರತೀಯ ನಾಗರಿಕ ಹಕ್ಕುಗಳ ಸಂಘಟನೆಗಳು, ಚಿಂತಕರ ಚಾವಡಿಗಳು ಮತ್ತು ಇತರ ಸಂಸ್ಥೆಗಳಿಗೆ ಸೊರೊಸ್ ನೀಡಿದ ಹಣಕಾಸು ನೆರವಿನ ಬಗ್ಗೆಯೂ ಸಂಸ್ಥೆ ತನಿಖೆ ನಡೆಸುತ್ತಿದೆ.

click me!