ಪ್ರಸ್ತುತ ಜಗತ್ತಿನಲ್ಲಿ ಈ ತಾಕತ್ತಿರುವುದು ಭಾರತದ ಪ್ರಧಾನಿಗೆ ಮಾತ್ರ: ಮೋದಿ ಹೊಗಳಿದ ಚಿಲಿ ಅಧ್ಯಕ್ಷ

Published : Apr 02, 2025, 12:10 PM ISTUpdated : Apr 02, 2025, 12:20 PM IST
ಪ್ರಸ್ತುತ  ಜಗತ್ತಿನಲ್ಲಿ ಈ ತಾಕತ್ತಿರುವುದು ಭಾರತದ ಪ್ರಧಾನಿಗೆ ಮಾತ್ರ:  ಮೋದಿ ಹೊಗಳಿದ ಚಿಲಿ ಅಧ್ಯಕ್ಷ

ಸಾರಾಂಶ

ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್, ಪ್ರಧಾನಿ ಮೋದಿಯವರನ್ನು ಜಾಗತಿಕ ರಾಜಕೀಯ ನಾಯಕ ಎಂದು ಹಾಡಿ ಹೊಗಳಿದ್ದಾರೆ. 

ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಪ್ರಧಾನಿಯವರು ವಿಶ್ವದ ಯಾವುದೇ ದೇಶದ ನಾಯಕನೊಂದಿಗೆ ಮಾತನಾಡಬಲ್ಲ, ಸಾಮರ್ಥ್ಯ ಹೊಂದಿರುವ ಮಹತ್ವದ ಜಿಯೋಪಾಲಿಟಿಕಲ್ (ಭೌಗೋಳಿಕ ರಾಜಕೀಯ) ಆಟಗಾರ ಎಂದು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕೆ ಹೇಳಿದ್ದಾರೆ. ಅವರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಉಕ್ರೇನ್ ಅಧ್ಯಕ್ಷ ವ್ಲೊಡಿಮಿರ್ ಝೆಲೆನ್ಸಕಿ ಸೇರಿದಂತೆ ವಿಶ್ವದ ಪ್ರತಿಯೊಬ್ಬ ನಾಯಕನ ಜೊತೆ ಮಾತನಾಡಬಲ್ಲರು. 

ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ  ರಾಷ್ಟ್ರಪತಿ ಭವನದಲ್ಲಿ  ಮಾತನಾಡಿದ ಚಿಲಿ ಅಧ್ಯಕ್ಷ ಗೇಬ್ರಿಯಲ್, ಪ್ರಧಾನಿ ಮೋದಿಯವರ ರಾಜತಾಂತ್ರಿಕ ಪ್ರಭಾವವನ್ನು ಶ್ಲಾಘಿಸಿದರು. 'ಅಧ್ಯಕ್ಷ ಮೋದಿಯವರೇ ನೀವು ಇಂದು ವಿಶ್ವದ ಯಾವುದೇ ನಾಯಕನ ಜೊತೆ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದೀರಿ. ನೀವು ಟ್ರಂಪ್, ಝೆಲೆನ್ಸ್ಕಿ, ಯುರೋಪಿಯನ್ ಒಕ್ಕೂಟ, ಗ್ರೀಸ್ ಅಥವಾ ಇರಾನ್‌ನಲ್ಲಿರುವ ಲ್ಯಾಟಿನ್ ಅಮೆರಿಕನ್ ನಾಯಕರ ಜೊತೆಗೂ ಮಾತನಾಡಬಲ್ಲಿರಿ.  ಜಗತ್ತಿನ ಯಾವುದೇ ನಾಯಕರಿಗೂ ಈಗ ಸಾಧ್ಯವಾಗದ ಕೆಲಸ ಅದು. ಆದ್ದರಿಂದ ನೀವು ಜಾಗತಿಕ ರಾಜಕೀಯದಲ್ಲಿ ಪ್ರಮುಖ ಆಟಗಾರರಾಗಿದ್ದೀರಿ ಎಂದು ಗೇಬ್ರಿಯಲ್ ಬೋರಿಕ್ ಫಾಂಟ್ ಅವರು ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. 

ಈ ಪ್ರದೇಶದಲ್ಲಿ 400 ವರ್ಷಗಳಿಂದ ಮಳೆಯೇ ಆಗಿಲ್ಲ; ಮಂಗಳ ಗ್ರಹದಂತೆ ಕಾಣೋ ಮರಭೂಮಿ ಎಲ್ಲಿದೆ?

ಭಾರತದಲ್ಲಿ ತಮಗೆ ದೊರೆತ ಆತ್ಮೀಯ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಇದು ಭಾರತಕ್ಕೆ ನನ್ನ ಮೊದಲ ಭೇಟಿಯಾಗಿದೆ. ಇಲ್ಲಿ ನಮಗೆ ದೊರೆತ ಅದ್ಭುತವಾದ ಸ್ವಾಗತಕ್ಕೆ ಧನ್ಯವಾದ ಹೇಳುತ್ತೇನೆ. ಕಳೆದ 16 ವರ್ಷಗಳಿಂದ ಚಿಲಿಯಿಂದ ಭಾರತಕ್ಕೆ ಯಾರು ಬಂದಿಲ್ಲ, ಮತ್ತು ಆ 16 ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಬದಲಾಗಿದೆ ಎಂದು ಗೇಬ್ರಿಯಲ್ ಹೇಳಿದ್ದಾರೆ. ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಅವರನ್ನು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಅವರು ಭಾರತದ ಬಗ್ಗೆ ಪ್ರಧಾನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ದೇಶದ ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ಮಾತನಾಡಿದ ಅವರು ಚಿಲಿಯೂ ಈಗ ಇಡೀ ಜಗತ್ತಿನೊಂದಿಗೆ ಸಂಪರ್ಕ ಹೊಂದಿದೆ. ಕೇವಲ ಒಂದು ದೇಶವನ್ನು ಎಲ್ಲದಕ್ಕೂ ಅವಲಂಬಿಸಿಲ್ಲ, ಚೀನಾ, ಅಮೆರಿಕಾ, ಯುರೋಪ್ ಒಕ್ಕೂಟ, ಲ್ಯಾಟಿನ್ ಅಮೆರಿಕ, ಏಷ್ಯಾ ಫೆಸಿಫಿಕ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ದೇಶಗಳೊಂದಿಗೆ ಸಂಬಂಧವನ್ನು ಹೊಂದಿದ್ದೇವೆ. ಈಗ ನಾವು ಭಾರತದ ಜೊತೆಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಭದ್ರಪಡಿಸಲು ಆಳವಾಗಿ ಕೆಲಸ ಮಾಡುತ್ತೇವೆ ಎಂದು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಹೇಳಿದರು. 

ಸೆಪ್ಟೆಂಬರ್‌ನಲ್ಲಿ ಮೋದಿ ನಿವೃತ್ತಿ, ನಾಯಕತ್ವ ಬದಲಾವಣೆಗೆ ಸಂಘ ನಿರ್ಧಾರ: ಸಂಜಯ್ ರಾವುತ್‌

ಏಪ್ರಿಲ್‌ 1 ರಿಂದ ಆರಂಭವಾಗಿರುವ ಚಿಲಿ ಅಧ್ಯಕ್ಷರ ಭಾರತ ಭೇಟಿ ಏಪ್ರಿಲ್ 5ರವರೆಗೆ ಇರಲಿದೆ. ಇದು ಭಾರತ ಹಾಗೂ ಚಿಲಿ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ 75ನೇ ವಾರ್ಷಿಕೋತ್ಸವದ ಭಾಗವಾಗಿದೆ.

 

ಮೋದಿ, ಸಚಿನ್, ಕಾಮತ್;ಎಲ್ಲರೂ ಘಿಬ್ಲಿ ಇಮೇಜ್ ಹಿಂದೆ ಓಡಿದ ಕಾರಣ ಮೊದಲ ಬಾರಿ ChatGPT ಡೌನ್

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!