Latest Videos

ಕಂಠಪೂರ್ತಿ ಕುಡಿದು ಡ್ರೈನೇಜ್‌ ಪೈಪ್‌ನಲ್ಲಿ ಸಿಲುಕಿಕೊಂಡ ಕುಡುಕ, ವೀಡಿಯೋ ವೈರಲ್‌!

By Vinutha PerlaFirst Published May 26, 2024, 10:41 AM IST
Highlights

ಕುಡುಕರು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಿ ಅನಾಹುತ ಸೃಷ್ಟಿಸುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾಮಾನ್ಯವಾಗಿದೆ. ಇತ್ತೀಚೆಗೆ ನೋಯ್ಡಾದಲ್ಲಿ ಕುಡುಕನೊಬ್ಬ ಡ್ರೈನ್‌ಪೈಪ್‌ನೊಳಗೆ ಬಿದ್ದಿರುವ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರು ಹರ ಸಾಹಸ ಮಾಡಿ ರಕ್ಷಿಸಿದ್ದಾರೆ.

ಕುಡುಕರು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಿ ಅನಾಹುತ ಸೃಷ್ಟಿಸುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾಮಾನ್ಯವಾಗಿದೆ. ಇಂಥಾ ಕುಡುಕರ ವಿರುದ್ಧ ಸ್ಥಳೀಯರು ಆಗಾಗ ದೂರು ನೀಡುತ್ತಲೇ ಇರುತ್ತಾರೆ. ಆದರೆ ಕೆಲವೊಮ್ಮೆ ಪರಿಸ್ಥಿತಿ ಕೈ ಮೀರಿದಾಗ ಪೊಲೀಸರು ಮಧ್ಯ ಪ್ರವೇಶಿಸಬೇಕಾಗುತ್ತದೆ. ಇತ್ತೀಚೆಗೆ ನೋಯ್ಡಾದಲ್ಲಿ ಕುಡುಕನೊಬ್ಬ ಡ್ರೈನ್‌ಪೈಪ್‌ನೊಳಗೆ ಬಿದ್ದಿರುವ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರು ಹರ ಸಾಹಸ ಮಾಡಿ ರಕ್ಷಿಸಿದ್ದಾರೆ.

ನೋಯ್ಡಾದ ಅಧಿಕೃತ ಪೋಲೀಸ್ ಹ್ಯಾಂಡಲ್ ರಕ್ಷಣಾ ಕಾರ್ಯಾಚರಣೆಯ ವೀಡಿಯೊವನ್ನು ಹಂಚಿಕೊಂಡಿದೆ. 'ಮುಂಜಾನೆ ಪೊಲೀಸ್ ಠಾಣೆಗೆ ಕರೆ ಬಂದಿತ್ತು. 30 ಅಡಿ ಉದ್ದದ ಡ್ರೈನ್‌ಪೈಪ್‌ನಲ್ಲಿ ಕುಡುಕನೊಬ್ಬ ಬಿದ್ದಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದರು. ನೋಯ್ಡಾಪೊಲೀಸ್ ಕೂಡಲೇ ಸ್ಥಳಕ್ಕೆ ತಲುಪಿ ಸ್ಥಳೀಯರ ಸಹಾಯದಿಂದ ಯಶಸ್ವಿಯಾಗಿ ರಕ್ಷಿಸಿದ್ದಾರೆ.' ಎಂದು ಟ್ವೀಟ್ ಮಾಡಲಾಗಿದೆ.

ಹೆಚ್ಚು ಕಿಕ್ ಕೊಡುತ್ತೆಂದು ಎಕ್ಸ್‌ಪೈರಿ ಡೇಟ್‌ ಆಗಿರೋ ಓಲ್ಡ್ ಬೀಯರ್ ಕುಡಿಬೇಡಿ, ಸಾಯ್ತೀರಿ ಅಷ್ಟೇ!

ವೀಡಿಯೋದಲ್ಲಿ, ವ್ಯಕ್ತಿಯನ್ನು ರಕ್ಷಿಸಲು ಒಂದೆರಡು ಅಧಿಕಾರಿಗಳು ಪ್ರಯತ್ನಿಸುತ್ತಿರುವಾಗ ಚರಂಡಿಯ ಸುತ್ತಲೂ ಜನಸಂದಣಿಯನ್ನು ಕಾಣಬಹುದು. ವರದಿಯ ಪ್ರಕಾರ, ಸ್ಥಳೀಯರು ಡ್ರೈನ್‌ಪೈಪ್‌ನ ಒಳಗಿರುವ ವ್ಯಕ್ತಿಯನ್ನು ಮೊದಲು ಹಗ್ಗದ ಮೂಲಕ ಮೇಲೆತ್ತಲು ಯತ್ನಿಸಿದರು. ಆದರೆ ಇದು ಸಾಧ್ಯವಾಗದಿದ್ದಾಗ ಸ್ವತಃ ಪೊಲೀಸರೇ ಕೆಳಗಿಳಿದು ದಾರಿಯನ್ನು ಮಾಡಿಕೊಟ್ಟು ವ್ಯಕ್ತಿಯನ್ನು ಮೇಲಕ್ಕೆತ್ತಿದರು. ಹಲವಾರು ನಿಮಿಷಗಳ ಪ್ರಯತ್ನದ ನಂತರ, ಪೊಲೀಸರು ಅಂತಿಮವಾಗಿ ಕುಡಿದ ವ್ಯಕ್ತಿಯನ್ನು ಚರಂಡಿಯಿಂದ ಮೇಲಕ್ಕೆತ್ತಿದರು.

ಸಾಮಾಜಿಕ ಮಾಧ್ಯಮ ಬಳಕೆದಾರರು ತಕ್ಷಣವೇ ವೀಡಿಯೊಗೆ ಪ್ರತಿಕ್ರಿಯಿಸಿದರು, ಸಂಕಷ್ಟದ ಕರೆಗೆ ಇಲಾಖೆಯ ತ್ವರಿತ ಪ್ರತಿಕ್ರಿಯೆಯನ್ನು ಶ್ಲಾಘಿಸಿದರು. ಒಬ್ಬ ಬಳಕೆದಾರ 'ಸ್ಥಳೀಯ ಜನರು ಮತ್ತು ಪೊಲೀಸರಿಂದ ಉತ್ತಮ ಕಾರ್ಯ' ಎಂದು ಹೊಗಳಿದ್ದಾರೆ. ಇನ್ನೊಬ್ಬ ಬಳಕೆದಾರ, 'ಕುಡುಕನನ್ನು ರಕ್ಷಿಸಿದ ಕ್ರೆಡಿಟ್ ಸ್ಥಳೀಯರಿಗೆ ಸಲ್ಲುತ್ತದೆ.. ಅವರು ವ್ಯಕ್ತಿಯನ್ನು ರಕ್ಷಿಸಿದರು. ಪೊಲೀಸರು ವೀಡಿಯೊಗೆ ಮಾತ್ರ ಪೋಸ್ ನೀಡುತ್ತಿದ್ದಾರೆ. ಭಾರತೀಯ ಪೊಲೀಸರು ಅಧಿಕಾರವನ್ನು ಹೊಂದಿದ್ದಾರೆ ಆದರೆ ಅವರು ಜನರನ್ನು ಉಳಿಸುವುದಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. 'ಪೊಲೀಸರಿಗೆ ಸಹಾಯ ಮಾಡಿದ ಸ್ಥಳೀಯರು ನಿಜವಾದ ಹೀರೋಗಳು' ಎಂದು ಇನ್ನೊಬ್ಬರು ಹೇಳಿದ್ದಾರೆ.

ಪಾನಿ ಬದಲು ಆಲ್ಕೋಹಾಲ್…ಮದ್ಯಪ್ರೇಮಿಗಳ ಬಾಯಲ್ಲಿ ನೀರು ಬರಿಸೋ ಪಾನಿ ಪುರಿ ಇದು!

ಇಂತಹ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಜನರನ್ನು ರಕ್ಷಿಸಿರುವುದು ಇದೇ ಮೊದಲಲ್ಲ. ಏಪ್ರಿಲ್‌ನಲ್ಲಿ, ಕಾನ್ಪುರದ ರಾಮಲೀಲಾ ಪಾರ್ಕ್‌ನ ಬೆಂಚಿನ ಅಂತರದ ನಡುವೆ ಕುಡಿದ ವ್ಯಕ್ತಿಯೊಬ್ಬ ತನ್ನ ಕುತ್ತಿಗೆಯನ್ನು ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ. ಈ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ರಕ್ಷಿಸಿದ್ದರು.

 
 
 
 
 
 
 
 
 
 
 
 
 
 
 

A post shared by UP POLICE (@uppolice)

click me!