ಫಾರೆಸ್ಟ್ ಗಾರ್ಡ್ ಅಥವಾ ಅರಣ್ಯ ವೀಕ್ಷಕನ ಹುದ್ದೆಗಾಗಿ ನಡೆಸಲ್ಪಡುವ ವಾಕ್ ಟೆಸ್ಟ್ ಅಥವಾ ನಡೆಯುವ ಪರೀಕ್ಷೆ ನಡುವೆಯೇ ಅಸ್ವಸ್ಥಗೊಂಡ ಯುವಕನೋರ್ವ ಬಳಿಕ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬಾಲಘಾಟ್: ಫಾರೆಸ್ಟ್ ಗಾರ್ಡ್ ಅಥವಾ ಅರಣ್ಯ ವೀಕ್ಷಕನ ಹುದ್ದೆಗಾಗಿ ನಡೆಸಲ್ಪಡುವ ವಾಕ್ ಟೆಸ್ಟ್ ಅಥವಾ ನಡೆಯುವ ಪರೀಕ್ಷೆ ನಡುವೆಯೇ ಅಸ್ವಸ್ಥಗೊಂಡ ಯುವಕನೋರ್ವ ಬಳಿಕ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಾಕ್ ಟೆಸ್ಟ್ ಮಧ್ಯೆಯೇ ಅಸ್ವಸ್ಥಗೊಂಡಿದ್ದ ಯುವಕನನ್ನು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆತ ಶನಿವಾರ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೃತ ಯುವಕನನ್ನು ಶಿವಪುರಿ ಜಿಲ್ಲೆಯ 27 ವರ್ಷದ ಸಲೀಂ ಮೌರ್ಯ ಎಂದು ಗುರುತಿಸಲಾಗಿದೆ. ಅರಣ್ಯ ಇಲಾಖೆಯ ವನರಕ್ಷಕ ಹುದ್ದೆಗೆ ಲಿಖಿತ ಪರೀಕ್ಷೆಯ ನಂತರ 108 ಜನ ಹುದ್ದೆ ಆಕಾಂಕ್ಷಿಗಳು ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಈ ದೈಹಿಕ ಪರೀಕ್ಷೆಯೂ 25 ಕಿಲೋ ಮೀಟರ್ ನಡೆದಾಟ(ವಾಕ್) ವನ್ನು ಕೂಡ ಹೊಂದಿತ್ತು. ಈ 25 ಕಿಲೋ ಮೀಟರ್ ವಾಕ್ ಅನ್ನು 4 ಗಂಟೆಯಲ್ಲಿ ಪೂರ್ಣಗೊಳಿಸಬೇಕಿತ್ತು ಎಂದು ವಿಭಾಗೀಯ ಅರಣ್ಯ ಅಧಿಕಾರಿ ಅಭಿನವ್ ಪಲ್ಲವ್ ಹೇಳಿದ್ದಾರೆ.
undefined
ರೈಲ್ವೆಯಲ್ಲಿ ಅಗ್ನಿವೀರರಿಗೆ ಶೇ.15ರಷ್ಟು ಮೀಸಲು: ದೈಹಿಕ ಪರೀಕ್ಷೆಯಿಂದಲೂ ವಿನಾಯಿತಿ
ಹೀಗಾಗಿ ಬೆಳಗ್ಗೆ 6 ಗಂಟೆಗೆ ಈ ವಾಕ್ ಟೆಸ್ಟ್ ಅನ್ನು ಆರಂಭಿಸಲಾಗಿತ್ತು. ಮರಳಿ ಬರುವ ವೇಳೆ ಸಲೀಂ ಮೌರ್ಯ ಅವರ ಸ್ಥಿತಿ ವಿಷಮಿಸಿದ್ದು, ಇನ್ನೇನು 25 ಕಿಲೋ ಮೀಟರ್ ವಾಕ್ ಸಂಪೂರ್ಣಗೊಳಿಸಲು ಕೇವಲ 3 ಕಿಲೋ ಮೀಟರ್ ಬಾಕಿ ಇರುವಷ್ಟರಲ್ಲಿ ಅವರು ಅಸ್ವಸ್ಥಗೊಂಡಿದ್ದರು. ಕೂಟಲೇ ಮೌರ್ಯ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದರು. ಆದರೆ ವಾಕ್‌ನಲ್ಲಿ ಭಾಗಿಯಾದ ಇತರ 108 ಹುದ್ದೆ ಆಕಾಂಕ್ಷಿಗಳಲ್ಲಿ 104 ಜನ ತಮಗೆ ನೀಡಿದ ಸಮಯದೊಳಗೆ ಈ ಪರೀಕ್ಷೆ ಪೂರ್ಣಗೊಳಿಸಿದರು ಎಂದು ವಿಭಾಗೀಯ ಅರಣ್ಯ ಅಧಿಕಾರಿ ಅಭಿನವ್ ಪಲ್ಲವ್ ಹೇಳಿದ್ದಾರೆ.
ಲಿಖಿತ ಪರೀಕ್ಷೆ ಪೂರ್ಣಗೊಳಿಸಿದ ನಂತರ ಯುವಕ ಮೌರ್ಯ ತನ್ನ ಊರಾದ ಶಿವಪುರಿಯಿಂದ ಬಾಲಾಘಾಟ್‌ಗೆ ಮೇ 23 ರಂದು ದಾಖಲೆಗಳ ವೆರಿಫಿಕೇಷನ್ ಹಾಗೂ ದೈಹಿಕ ಪರೀಕ್ಷೆಗಾಗಿ ಆಗಮಿಸಿದ್ದ. ಆದರೆ ವಾಕ್ ನಂತರ ಆತ ಅಸ್ವಸ್ಥಗೊಂಡಿದ್ದ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಆತ ಸಾವನ್ನಪ್ಪಿದ ಎಂದು ಆತನ ಸಂಬಂಧಿ ಯುವಕ ವಿನೋಧ್ ಜಾಟವ್ ಹೇಳಿದ್ದಾರೆ.
ಐಟಿಬಿಪಿ ನೇಮಕಾತಿಯ ವೈದ್ಯಕೀಯ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿ ಬಲೆಗೆ, ಅಸಲಿ ಪರಾರಿ!