Latest Videos

25 ಮಕ್ಕಳ ಬಲಿ ಪಡೆದ ಗುಜರಾತ್ ಗೇಮಿಂಗ್ ಸೆಂಟರ್ ಅಗ್ನಿ ಅನಾಹುತ: ಮೃತರ ಸಂಖ್ಯೆ 35ಕ್ಕೆ ಏರಿಕೆ

By Anusha KbFirst Published May 26, 2024, 9:53 AM IST
Highlights

ನಿನ್ನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಗೇಮಿಂಗ್ ಸೆಂಟರ್‌ ಒಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆ ಆಗಿದೆ. ನಿನ್ನೆ ರಾಜ್‌ಕೋಟ್‌ನಲ್ಲಿರುವ ಮಕ್ಕಳು ಆಟವಾಡುವ ಗೇಮಿಂಗ್ ಸೆಂಟರ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು.

ರಾಜ್‌ಕೋಟ್‌: ನಿನ್ನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಗೇಮಿಂಗ್ ಸೆಂಟರ್‌ ಒಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆ ಆಗಿದೆ. ನಿನ್ನೆ ರಾಜ್‌ಕೋಟ್‌ನಲ್ಲಿರುವ ಮಕ್ಕಳು ಆಟವಾಡುವ ಗೇಮಿಂಗ್ ಸೆಂಟರ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಗೇಮಿಂಗ್‌ ಸೆಂಟರ್‌ಗೆ ಪ್ರವೇಶಿಸುವ ಶುಲ್ಕವನ್ನು ಕೇವಲ 99 ರೂಪಾಯಿ ಆಫರ್ ಫ್ರೈಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜನರು ತಮ್ಮ ಮಕ್ಕಳನ್ನು ಕರೆದುಕೊಂಡು ಈ ಗೇಮಿಂಗ್ ಸೆಂಟರ್‌ನಲ್ಲಿ ಕಿಕ್ಕಿರಿದು ತುಂಬಿದ್ದರು.  ಈ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅನಾಹುತ ಸಂಭವಿಸಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಅನೇಕರನ್ನು ಬಲಿ ಪಡೆದಿದೆ, ರಕ್ಷಣಾ ಕಾರ್ಯಾಚರಣೆ ಇಂದೂ ಮುಂದುವರೆದಿದೆ. 

ಗೇಮಿಂಗ್ ಸೆಂಟರ್‌ನಲ್ಲಿ ಪೆಟ್ರೋಲ್ ಡಿಸೇಲ್ ಶೇಖರಣೆ:

ಈ ಗೇಮಿಂಗ್ ಸೆಂಟರ್‌ನಲ್ಲಿ ಗೋ ಕಾರ್ಟ್ ಗೇಮ್ ವ್ಯವಸ್ಥೆ ಸಹ ಮಾಡಲಾಗಿತ್ತು. ಹೀಗಾಗಿ ಗೇಮಿಂಗ್‌ಗಾಗಿ  1200 ರಿಂದ 1500 ಲೀಟರ್ ಡಿಸೇಲ್ 1000 ಲೀಟರ್ ಪೆಟ್ರೋಲ್‌ನ್ನು ಕೂಡ  ಶೇಖರಿಸಿಡಲಾಗಿತ್ತು. ದುರಾದೃಷ್ಟವಶಾತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಡಿಸೇಲ್ ಪೆಟ್ರೋಲ್ ಸಂಗ್ರಹಿಸಿದ ಸ್ಥಳಕ್ಕೂ ವ್ಯಾಪಿಸಿದ್ದು, ದೊಡ್ಡ ಮಟ್ಟದಲ್ಲಿ ಬೆಂಕಿ ಅನಾಹುತಕ್ಕೆ ಕಾರಣವಾಯ್ತು. 

ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ

ಈ ಬೆಂಕಿ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಗಾಯಾಳುಗಳ ಕುಟುಂಬಕ್ಕೆ ತಲಾ 50 ಸಾವಿರ ಪರಿಹಾರವನ್ನು ಗುಜರಾತ್ ಸರ್ಕಾರ ಘೋಷಣೆ ಮಾಡಿದೆ. 

ಗೇಮಿಂಗ್ ಸೆಂಟರ್‌ಗೆ ಅನುಮತಿಯೇ ಇರಲಿಲ್ಲ!

ಇನ್ನು ಬೆಂಕಿ ದುರಂತ ಸಂಭವಿಸಿದ ರಾಜ್‌ಕೋಟ್‌ನ ಈ ಗೇಮಿಂಗ್‌ ಸೆಂಟರ್‌ ನಡೆಸಲು ಮಾಲೀಕ ಯಾವುದೇ ಲೈಸೆನ್ಸ್‌ ಆಗಲಿ ಅಗ್ನಿ ಶಾಮಕ ದಳದಿಂದ ಎನ್‌ಒಸಿ ಆಗಲಿ ಪಡೆದಿರಲಿಲ್ಲ ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದೆ. ಪ್ರಕರಣ ಸಂಬಂಧ ಗೇಮಿಂಗ್ ಸೆಂಟರ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಯುವರಾಜ್ ಸೋಲಂಕಿ ಎಂಬಾತನಿಗೆ ಸೇರಿದ ಗೇಮಿಂಗ್ ಸೆಂಟರ್ ಇದಾಗಿತ್ತು. 

Breaking: ರಾಜ್‌ಕೋಟ್‌ನ ಗೇಮಿಂಗ್‌ ಜೋನ್‌ನಲ್ಲಿ ಅಗ್ನಿ ಅವಘಡ, 24 ಮಂದಿ ಸಾವಿನ ಶಂಕೆ! 

गुजरात मॉडल की दर्दनाक घटनाएं:-
●तक्षशिला कोचिंग हादसा : 22 बच्चों सहित 23 की मौत
●मोरबी ब्रिज हादसा: 55 बच्चों सहित 141 की मौत
●वडोदरा में हरणीबोट कांड: 13 बच्चों समेत 15 की मौत
●राजकोट गेमिंग जोन: 25 बच्चों समेत 30 की मौत।
*नोट: दोषी सभी आरोपी जमानत पर बाहर हैं। pic.twitter.com/FHLSRbGNZK

— Hansraj Meena (@HansrajMeena)

 

click me!