'ಬೈಕಲ್ಲಿ ಪೆಟ್ರೋಲ್ ಕಡಿಮೆ ಇದೆ': ಸವಾರನಿಗೆ ₹250 ಟ್ರಾಫಿಕ್ ದಂಡ?

By Suvarna NewsFirst Published Jul 31, 2022, 11:07 PM IST
Highlights

Kerala Traffic Challan Viral photo: ಕಡಿಮೆ ಪೆಟ್ರೋಲ್‌ ಜತೆಗೆ ಮೋಟಾರ್‌ಸೈಕಲ್ ಚಲಾಯಿಸಿದ್ದಕ್ಕಾಗಿ ಕೇರಳದ ವ್ಯಕ್ತಿಯೊಬ್ಬರು ಚಲನ್ ಸ್ವೀಕರಿಸಿದ್ದು ಆಶ್ಚರ್ಯಚಕಿತರಾದಗಿದ್ದಾರೆ.  

ಕೇರಳ (ಜು. 31): ಕಡಿಮೆ ಪೆಟ್ರೋಲ್‌ ಜತೆಗೆ ಮೋಟಾರ್‌ಸೈಕಲ್ ಚಲಾಯಿಸಿದ್ದಕ್ಕಾಗಿ ಕೇರಳದ ವ್ಯಕ್ತಿಯೊಬ್ಬರು ಚಲನ್ ಸ್ವೀಕರಿಸಿದ್ದು, ಇದನ್ನು ಕಂಡು ಆಶ್ಚರ್ಯಚಕಿತರಾದಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕ್‌ ಚಲನ್‌ (Traffic Challan) ಚಿತ್ರ ವೈರಲ್‌ ಆಗಿದೆ. ಟ್ರಾಫಿಕ್ ಚಲನ್‌ನಲ್ಲಿ ವ್ಯಕ್ತಿಯ ಹೆಸರನ್ನು ಬೆಸಿಲ್ ಶ್ಯಾಮ್ (Basil Syam) ಎಂದು ನಮೂದಿಸಲಾಗಿದೆ. ಚಲನ್ ರಶೀದಿಯಲ್ಲಿ "driving without sufficient fuel with passengers"(ಸಾಕಷ್ಟು ಇಂಧನವಿಲ್ಲದೆ ಪ್ರಯಾಣಿಕರೊಂದಿಗೆ ಚಾಲನೆ ಮಾಡಿದ್ದಕ್ಕಾಗಿ) ರೂ. 250 ದಂಢ ವಿಧಿಸಲಾಗಿದೆ ಎಂದು ಬರೆಯಲಾಗಿದೆ  

ಶ್ಯಾಮ್ ತಮ್ಮ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ನಲ್ಲಿ (Royal Enfield Classic 350) ತಮ್ಮ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದಾಗ ಒನ್‌ ವೇಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ಪೋಲೀಸ್ ಅವರನ್ನು ತಡೆದಿದ್ದರು. ಇನ್ನು ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸ್ 250 ರೂ.ಗಳ ದಂಡವನ್ನು ಪಾವತಿಸುವಂತೆ ತಿಳಿಸಿದ್ದು, ಶ್ಯಾಮ್‌ ದಂಡ ಪಾವತಿಸಿದ್ದರು. ಈ ಬಗ್ಗೆ ಶ್ಯಾಮ್  ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆಫೀಸಿಗೆ  ತಡವಾಗುತ್ತಿದ್ದರಿಂದ ರಸೀದಿ ತೆಗೆದುಕೊಂಡು ಶ್ಯಾಮ್ ಹಾಗೇಯೆ ತೆರಳಿದ್ದರು. ಅವರ ಕಚೇರಿ ತಲುಪಿದ ನಂತರವೇ ಅವರು ರಸೀದಿಯನ್ನು ನೋಡಿದರು. ರಸೀದಿ ನೋಡುತ್ತಿದ್ದಂತೆಯೇ ಅವರಿಗೆ ಆಶ್ಚರ್ಯವಾಗಿತ್ತು. ಬಳಿಕ ಶ್ಯಾಮ್ ಒಂದೆರಡು ವಕೀಲರನ್ನು ಸಂಪರ್ಕಿಸಿದ್ದರು. ಆದರೆ ಇಂಥಹ ಯಾವುದೇ ಅಪರಾಧವಿಲ್ಲ ಎಂದು ವಕೀಲರು ಸ್ಪಷ್ಟಪಡಿಸಿದ್ದರು. 

ಕೆಲವು ದಿನಗಳ ನಂತರ ಮೋಟಾರು ವಾಹನ ಇಲಾಖೆಯ ಅಧಿಕಾರಿಯೊಬ್ಬರು ಅವರಿಗೆ ಕರೆ ಮಾಡಿ ವಿಚಾರಿಸಿದರು. ತಮಗೆ ವಿಧಿಸಿರುವ ದಂದಡ ಬಗ್ಗೆ ಶ್ಯಾಮ್ ಅವರಿಗೆ ತಿಳಿಸಿದರು. ಬಳಿಕ "ಸಾಕಷ್ಟು ಇಂಧನವಿಲ್ಲದೆ ಪ್ರಯಾಣಿಕರೊಂದಿಗೆ ಚಾಲನೆ ಮಾಡುವುದು" ಎಂಬ ಅಪರಾಧವಿದ್ದು ಇದು ಖಾಸಗಿ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಅಧಿಕಾರಿ ತಿಳಿಸಿದರು. 

ಎರಡು ಕೈಯಲ್ಲಿ ಎರಡು ಫೋನ್, ಬೈಕ್‌ನಲ್ಲಿ ಸಾಹಸಕ್ಕೆ ಬಿತ್ತು ದುಬಾರಿ ಫೈನ್!

ಕೇರಳ ಸಾರಿಗೆ ಕಾನೂನಿನ ಪ್ರಕಾರ, ಇಂಧನ ಸಂಬಂಧಿತ ಅಪರಾಧವು ವಾಣಿಜ್ಯ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ, ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ಪ್ರಯಾಣಿಸುವ ಮೊದಲು ಇಂಧನ ಖಾಲಿಯಾದರೆ, ವಾಹನದ ಚಾಲಕ ಅಥವಾ ವಾಹನದ ಮಾಲೀಕರು ರೂ 250 ದಂಡವನ್ನು ಪಾವತಿಸಬೇಕಾಗುತ್ತದೆ.

"ಇದು ಈ ಚಲನ್ ಬರೆದ ಅಧಿಕಾರಿಗಳಿಂದ ಕೇವಲ ಟೈಪಿಂಗ್ ದೋಷವಾಗಿದೆ" ಎಂದು ಶ್ಯಾಮ್ ಹೇಳಿದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಶ್ಯಾಮ್, "ನಾನು ದಾರಿಯಲ್ಲಿ ಹೋಗುವಾಗ ನನ್ನ ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾಗಿಲ್ಲ, ಅದಕ್ಕಾಗಿ ಯಾವ ಪೊಲೀಸರೂ ದಂಡ ಹಾಕಿಲ್ಲ" ಎಂದು ತಿಳಿಸಿದ್ದಾರೆ. ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಈ ಚಲನ್‌ ವೈರಲ್‌ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ

click me!