
1 ರೂಪಾಯಿಯಿಂದ 2 ಸಾವಿರ ರೂಪಾಯಿವರೆಗಿನ ನೋಟುಗಳನ್ನು ನೀವು ಸಾಮಾನ್ಯವಾಗಿ ನೋಡಿರುತ್ತಿರಿ. ನಾವೆಲ್ಲರೂ ನಮ್ಮ ಅಗತ್ಯಗಳನ್ನು ಪೂರೈಸಲು ಭಾರತದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುದ್ರಿಸಿದ ಈ ನೋಟುಗಳನ್ನು ಬಳಸುತ್ತೇವೆ. ಆದರೆ ದೇಶದಲ್ಲಿ ಶೂನ್ಯ ರೂಪಾಯಿ ನೋಟು ಕೂಡ ಮುದ್ರಣಗೊಂಡಿತ್ತು ಎಂದರೆ ನೀವು ನಂಬುತ್ತೀರಾ? ಯಸ್ ಈ ಶೂನ್ಯ ರೂಪಾಯಿ ನೋಟಿನ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಅದರ ಬಗ್ಗೆ ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು. ಈ ನೋಟಿನ ಹಿಂದಿನ ಇತಿಹಾಸವೇನು? ಇಲ್ಲಿದೆ ಮಾಹಿತಿ
ಶೂನ್ಯ ರೂಪಾಯಿ ನೋಟು ಮುದ್ರಿಸಿದ್ದು ಏಕೆ?: ಶೂನ್ಯ ರೂಪಾಯಿ ನೋಟಿನ ಮೇಲೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತ್ರವನ್ನು ಮುದ್ರಿಸಲಾಗಿದೆ. ಇದು ಇತರ ನೋಟುಗಳಂತೆಯೇ ಕಾಣುತ್ತದೆ. ಆದರೆ ಈಗ ಶೂನ್ಯ ರೂಪಾಯಿ ನೋಟುಗಳನ್ನು ಏಕೆ ಮುದ್ರಿಸಲಾಯಿತು? ಈ ನೋಟುಗಳು ಉಪಯೋಗವಾದರೇನು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುತ್ತಿರಬಹುದು. ವಾಸ್ತವವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ನೋಟುಗಳನ್ನು ಮುದ್ರಿಸಿಲ್ಲ. ಭ್ರಷ್ಟಾಚಾರದ ವಿರುದ್ಧದ ಅಭಿಯಾನವಾಗಿ ಈ ನೋಟು ಮುದ್ರಿಸಲಾಗಿತ್ತು.
ಈ ಶೂನ್ಯ ರೂಪಾಯಿ ನೋಟನ್ನು ಮುದ್ರಿಸುವ ಆಲೋಚನೆ ದಕ್ಷಿಣ ಭಾರತದ ಎನ್‌ಜಿಒನಿಂದ ಬಂದಿದೆ. 2007 ರಲ್ಲಿ, ಈ ನೋಟನ್ನು ಭ್ರಷ್ಟಾಚಾರದ ವಿರುದ್ಧದ ಅಸ್ತ್ರವಾಗಿ ಬಳಸಲಾಗಿತ್ತು. ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಎನ್‌ಜಿಒ ಸುಮಾರು 5 ಲಕ್ಷ ಶೂನ್ಯ ರೂಪಾಯಿ ನೋಟುಗಳನ್ನು ಮುದ್ರಿಸಿತ್ತು. ಈ ನೋಟುಗಳನ್ನು ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ, ಒಟ್ಟು ನಾಲ್ಕು ಭಾಷೆಗಳಲ್ಲಿ ಮುದ್ರಿಸಿ ಜನರಲ್ಲಿ ವಿತರಿಸಲಾಯಿತು.
ಕೇಳಿದ್ದಕ್ಕಿಂತ ಐದು ಪಟ್ಟು ಹೆಚ್ಚು ದುಡ್ಡು ನೀಡ್ತಿದ್ದ ಎಟಿಎಂ ಮುಂದೆ ಮುಗಿಬಿದ್ದ ಜನ
ನೋಟುಗಳು ಮೇಲೆ ಬರೆಯಲಾಗಿತ್ತು ವಿಶೇಷ ಸಂದೇಶ: ಭ್ರಷ್ಟಾಚಾರದ ವಿರುದ್ಧ ಹಲವು ಸಂದೇಶಗಳನ್ನು ಈ ನೋಟುಗಳಲ್ಲಿ ಬರೆಯಲಾಗಿತ್ತು. ಈ ನೋಟುಗಳಲ್ಲಿ 'ಭ್ರಷ್ಟಾಚಾರವನ್ನು ಕೊನೆಗಾಣಿಸಿ', 'ಯಾರಾದರೂ ಲಂಚ ಕೇಳಿದರೆ, ಈ ನೋಟು ನೀಡಿ ಮತ್ತು ವಿಷಯದ ಬಗ್ಗೆ ನಮಗೆ ತಿಳಿಸಿ' ಎಂದು ಬರೆಯಲಾಗಿತ್ತು. ನಾನು ತೆಗೆದುಕೊಳ್ಳುವುದಿಲ್ಲ ಅಥವಾ ಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತೇನೆ. ಈ ನೋಟಿನಲ್ಲಿ ಎನ್‌ಜಿಓನ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೋಟಿನ ಕೆಳಗೆ ನೀಡಲಾಗಿತ್ತು.ಸ್ವಯಂ ಸೇವಾ ಸಂಸ್ಥೆಯೇ ಈ ಶೂನ್ಯ ರೂಪಾಯಿ ನೋಟನ್ನು ತಯಾರಿಸಿ ಲಂಚ ಕೇಳಿದವರಿಗೆ ನೀಡುತ್ತಿತ್ತು. ಶೂನ್ಯ ರೂಪಾಯಿ ನೋಟು ಭ್ರಷ್ಟಾಚಾರದ ವಿರುದ್ಧದ ಸಂಕೇತವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ