
ಮುಂಬೈ(ಜು.31) ಪತ್ರಾ ಚಾಳ್ ಮರು ನಿರ್ಮಾಣ ಯೋಜನೆ ಇದೀಗ ಶಿವಸೇನೆ ನಾಯಕ ಸಂಜಯ್ ರಾವತ್‌ಗೆ ತೀವ್ರ ಸಂಕಷ್ಠ ತಂದೊಡ್ಡಿದೆ. ಈ ಯೋಜನೆಯಲ್ಲಿ ಅವ್ಯವಾಹರ ಹಾಗೂ ಅಕ್ರಮ ಹಣ ವರ್ಗಾವಣೆ ನಡೆದಿದೆ ಅನ್ನೋ ಆರೋಪದಡಿ ಇಂದು ಇಡಿ ಅಧಿಕಾರಿಗಳು ರಾವತ್ ಮನೆಗೆ ದಾಳಿ ಮಾಡಿದ್ದಾರೆ. ಇಷ್ಟೇ ಅಲ್ಲ ರಾವತ್ ವಶಕ್ಕೆ ಪಡೆದಿದ್ದಾರೆ. ಸಂಜಯ್ ರಾವತ್ ಇಡಿ ವಶಕ್ಕೆ ಪಡೆಯುವ ಮೊದಲು ಮಗನ ತಬ್ಬಿದ ವಿಡಿಯೋ ವೈರಲ್ ಆಗಿದೆ. ಸಂಜಯ್ ರಾವತ್ ತಬ್ಬಿ ಹಿಡಿದ ತಾಯಿ ಧೈರ್ಯ ತುಂಬಿದ್ದಾರೆ. ಇದು ಕೇಂದ್ರದ ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಎಂದು ಶಿವಸೇನೆ ಆರೋಪಿಸಿದೆ. ಇಂತಹ ತಂತ್ರಕ್ಕೆ ಬೆದರುವುದಿಲ್ಲ. ಶಿವಸೇನೆ ಇತಿಹಾಸದಲ್ಲಿ ಯಾವುದಕ್ಕೂ ಭಯಪಟ್ಟಿಲ್ಲ. ಎಲ್ಲವನ್ನೂ ಹುಲಿಗಳಂತೆ ಎದುರಿಸಿದ್ದೇವೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹೇಳಿದೆ.
ಮುಂಬೈನ ಗಲ್ಲಿ ಗಲ್ಲಿಗಳನ್ನು ಮರುನಿರ್ಮಾಣ ಮಾಡುವ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಅವ್ಯವಹಾರವನ್ನು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಸಂಜಯ್ ರಾವತ್ ಮನೆ ಮೇಲೆ ಇಂದು ದಾಳಿ ನಡೆಸಿತ್ತು. ಭಾರಿ ಭದ್ರತೆಯೊಂದಿಗೆ ಸಂಜಯ್ ರಾವತ್ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಂಜೆ ವೇಳೆ ಸಂಜಯ್ ರಾವತ್ ವಶಕ್ಕೆ ಪಡೆದಿದ್ದಾರೆ. ಇಡಿ ಅಧಿಕಾರಿಗಳ ಜೊತೆ ತೆರಳಲು ಹೊರಬರುವ ವೇಳೆ ರಾವತ್ ತಾಯಿ ಮಗನ ತಬ್ಬಿದ್ದಾರೆ. ಧೈರ್ಯ ತುಂಬಿ ಕಳುಹಿಸಿದ್ದಾರೆ.
ಭೂ ಹಗರಣ ಕೇಸ್: ಶಿವಸೇನಾ ನಾಯಕ ಸಂಜಯ್ ರಾವುತ್ ವಶಕ್ಕೆ ಪಡೆದ ಇಡಿ ಅಧಿಕಾರಿಗಳು
ಇಡಿ ಅಧಿಕಾರಿಗಳು ಸತತ 10 ಗಂಟೆ ಸಂಜಯ್ ರಾವತ್ ಮನೆ ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ ಮನೆಯಲ್ಲೇ ಸಂಜಯ್ ರಾವತ್‌ಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಇದೇ ವೇಳೆ ದಾಖಲೆ ಇಲ್ಲದ 11.5 ಲಕ್ಷ ರೂಪಾಯಿ ಹಣವನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಡಿ ದಾಳಿ ಹಾಗೂ ಸಂಜಯ್ ರಾವತ್ ವಶಕ್ಕೆ ಪಡೆದಿರುವ ಪ್ರಕರಣ ಇದೀಗ ಭಾರಿ ರಾಜಕೀ ಕೋಲಾಹಲಕ್ಕೆ ಕಾರಣವಾಗಿದೆ.
ಪತ್ರಾ ಚಾಳ್ ನವೀಕರಣ ಯೋಜನೆಯಲ್ಲಿ 1039 ಕೋಟಿ ರು. ಹಗರಣ ನಡೆದಿದ್ದು, ಇದರಲ್ಲಿ ಸಂಜಯ್ ರಾವುತ್ ಅವರ ಪತ್ನಿ ಮತ್ತು ರಾವುತ್‌ರ ಕೆಲ ಉದ್ಯಮ ಸ್ನೇಹಿತರು ಭಾಗಿಯಾಗಿದ್ದಾರೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪವಿದೆ. ಈ ಹಗರಣದ ಸಂಬಂಧ ರಾವುತ್‌ರ ಪತ್ನಿ ಮತ್ತು ಉದ್ಯಮ ಸ್ನೇಹಿತರಿಗೆ ಸೇರಿದ 12 ಕೋಟಿ ಮೌಲ್ಯದ ಆಸ್ತಿಯನ್ನು ಇತ್ತೀಚೆಗೆ ಇ.ಡಿ.ಜಪ್ತಿ ಮಾಡಿತ್ತು. ಈ ಪ್ರಕರಣದಲ್ಲಿ ರಾವುತ್ ಪಾತ್ರದ ಬಗ್ಗೆ ಇ.ಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಜು.1ರಂದು ಮೊದಲ ಬಾರಿಗೆ ವಿಚಾರಣೆಗೆ ಹಾಜರಾಗಿದ್ದ ರಾವುತ್ ನಂತರ 2 ಬಾರಿ ಸಮನ್ಸ್ ನೀಡಿದ ಹೊರತಾಗಿಯೂ ಸಂಸತ್ ಅಧಿವೇಶನದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು. ಹೀಗಾಗಿ ದಾಳಿ ನಡೆದಿದೆ.
ಶಿಂಧೆ ಬಣಕ್ಕೆ ಮತ್ತಷ್ಟು ಬಲ: ಸಂಜಯ್ ರಾವುತ್ ಸೋದರನಿಂದಲೂ ಬಂಡಾಯ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ