ಮೂರು ತಿಂಗಳ ಪ್ರಾಯದ ನಾಯಿಮರಿಯೊಂದು ನಾಪತ್ತೆಯಾಗಿದ್ದು, ಈ ನಾಯಿಮರಿಯನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ನಾಯಿಯ ಮಾಲೀಕರು ನಗರದೆಲ್ಲೆಡೆ ಪೋಸ್ಟರ್ ಅಂಟಿಸಿದ್ದಾರೆ
ಜೈಪುರ: ಮೂರು ತಿಂಗಳ ಪ್ರಾಯದ ನಾಯಿಮರಿಯೊಂದು ನಾಪತ್ತೆಯಾಗಿದ್ದು, ಈ ನಾಯಿಮರಿಯನ್ನು ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ನಾಯಿಯ ಮಾಲೀಕರು ನಗರದೆಲ್ಲೆಡೆ ಪೋಸ್ಟರ್ ಅಂಟಿಸಿದ್ದಾರೆ. ಪಾಪ್‌ಕಾರ್ನ್ ಹೆಸರಿನ ಈ ಪುಟ್ಟ ಶ್ವಾನಕ್ಕಾಗಿ ಎಲ್ಲೆಡೆ ಮಾಲೀಕರು ಶೋಧ ನಡೆಸಿದ್ದರು ನಾಯಿಮರಿ (Puppy) ಮಾತ್ರ ಸಿಕ್ಕಿಲ್ಲ, ಇದರಿಂದ ಬೇಜಾರಾದ ಮಾಲೀಕ ಈ ಭಾರಿ ಮೊತ್ತದ ಬಹುಮಾನ ಘೋಷಿಸಿದ್ದಾರೆ. ಮೂರು ದಿನಗಳ ಹಿಂದೆ ಈ ನಾಯಿಮರಿ ಜೈಪುರ ನಗರದಲ್ಲಿ (Jaipur city) ತಪ್ಪಿಸಿಕೊಂಡಿದೆ. ನಾಯಿ ಮರಿಯ ಶೋಧಕ್ಕಾಗಿ ಇಡೀ ನಗರದಲ್ಲಿ ಮಾಲೀಕ ಪೋಸ್ಟರ್ ಕೂಡ ಅಂಟಿಸಿದ್ದಾರೆ. ಜೈಪುರ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಿಸಿರುವ ಮಾಲೀಕರು ನಾಯಿ ಮರಿ ಹುಡುಕಿ ಕೊಟ್ಟವರಿಗೆ 1 ಲಕ್ಷ ರೂಪಾಯಿ ನಗದು ಹಣ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಅಲ್ಲದೇ ಒಂದು ಸಿಸಿಟಿವಿ ದೃಶ್ಯಾವಳಿಯನ್ನು (Cctv Footage) ಕೂಡ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೈಪುರದ ಮಾಳವೀಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ವಾಸಿಸುವ ಅನಿತಾ ದಾಸ್ ಎಂಬುವವರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. ಅನಿತಾ ದಾಸ್ ಅವರು ವಿದೇಶಿ ತಳಿಯ ನಾಯಿಯೊಂದನ್ನು ಸಾಕಿದ್ದರು. ಎರಡು ದಿನಗಳ ಹಿಂದೆ ಇವರ ಮನೆಯ ಕೆಲಸಗಾರರು ಈ ಶ್ವಾನವನ್ನು ವಾಕಿಂಗ್ ಕರೆದೊಯ್ದಿದ್ದಾರೆ. ನಾಯಿ ವಾಕ್ ಹೋಗುತ್ತಿದ್ದ ಮಾರ್ಗದಲ್ಲಿ ಕಾರೊಂದು ನಿಂತಿದ್ದು, ನಾಯಿಯನ್ನು ನೋಡಿ ಕಾರಿನಲ್ಲಿದ್ದ ಇಬ್ಬರು ಯುವಕರು ಕೆಳಗಿಳಿದಿದ್ದಾರೆ. ಅಷ್ಟೇ ಅಲ್ಲ ಈ ವಿದೇಶಿ ತಳಿಯ (foreign breed Dog) ಶ್ವಾನವನ್ನು ಮುದ್ದು ಮಾಡಲು ನೋಡಿದ್ದಾರೆ. ಅಲ್ಲದೇ ನಾಯಿಯ ಜೊತೆಯೇ ಇವರು ನಡೆಯಲು ಆರಂಭಿಸಿದ್ದಾರೆ.
ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದ ಮೀಮ್ಸ್ ನಾಯಿ ‘ಚೀಮ್ಸ್’ ಇನ್ನಿಲ್ಲ: ನೆಟ್ಟಿಗರ ಸಂತಾಪ
ಈ ವೇಳೆ ನಾಯಿಯನ್ನು ನೋಡಿಕೊಳ್ಳುತ್ತಿದ್ದವರು ಈ ಯುವಕರು ನಾಯಿಯನ್ನು ಮುದ್ದು ಮಾಡುತ್ತಿದ್ದಾರೆ ಎಂದು ಭಾವಿಸಿದ್ದಾರೆ. ಆದರೆ ಈ ಖತರ್ನಾಕ್ ನಾಯಿ ಕಳ್ಳರು, ನಾಯಿಯನ್ನು ಹಿಡಿದು ಮೇಲೆತ್ತಿಕೊಂಡಿದ್ದು, ಬಳಿಕ ಮಡಿಲಲ್ಲಿ ಕೂರಿಸಿ ನಿಧಾನಕ್ಕೆ ಕಾರಿನತ್ತ ಕರೆದೊಯ್ದಿದ್ದಾರೆ. ಬಳಿಕ ಕಾರಿನಲ್ಲಿ ಕುಳಿತು ಮೆಲ್ಲನೇ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಲೀಕರು ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಕೂಡ ಪೊಲೀಸರಿಗೆ ಒದಗಿಸಿದ್ದಾರೆ. ಹೀಗಾಗಿ ನಾಯಿ ಮಾಲೀಕರು ಬೇಸರಗೊಂಡಿದ್ದು, ನಗರದೆಲ್ಲೆಡೆ ಪೋಸ್ಟರ್ ಅಂಟಿಸಿರುವ ಜೊತೆ ಹುಡುಕಿ ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
Kolar: ಕೊಲೆ ಮಾಡಿ ಅವಿತು ಕುಳಿತಿದ್ದ ಆರೋಪಿಯನ್ನ 24 ಗಂಟೆಯಲ್ಲಿ ಪತ್ತೆ ಹಚ್ಚಿದ ಶ್ವಾನ!