ಸಭೆ ವೇಳೆ ಕುಸಿದು ಬಿದ್ದ ವ್ಯಕ್ತಿ : ಭಾಷಣ ನಿಲ್ಲಿಸಿ ತನ್ನ ವೈದ್ಯರಿಗೆ ತಪಾಸಣೆಗೆ ಸೂಚಿಸಿದ ಪ್ರಧಾನಿ

Published : Aug 27, 2023, 10:57 AM ISTUpdated : Aug 27, 2023, 11:06 AM IST
ಸಭೆ ವೇಳೆ ಕುಸಿದು ಬಿದ್ದ ವ್ಯಕ್ತಿ : ಭಾಷಣ ನಿಲ್ಲಿಸಿ ತನ್ನ ವೈದ್ಯರಿಗೆ  ತಪಾಸಣೆಗೆ ಸೂಚಿಸಿದ ಪ್ರಧಾನಿ

ಸಾರಾಂಶ

ಪಾಲಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗ ಸಭೆಯಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದ ಘಟನೆ ನಡೆದಿದೆ. ಇದನ್ನು ಗಮನಿಸಿದ ಪ್ರಧಾನಿ ಮೋದಿ ತಕ್ಷಣವೇ ತಮ್ಮ ಭಾಷಣ ನಿಲ್ಲಿಸಿ ತಮ್ಮ ವೈಯಕ್ತಿಕ ವೈದ್ಯಕೀಯ ಸಿಬ್ಬಂದಿಗೆ ವ್ಯಕ್ತಿಯ ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಿದರು.

ನವದೆಹಲಿ: ಇಲ್ಲಿನ ಪಾಲಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗ ಸಭೆಯಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದ ಘಟನೆ ನಡೆದಿದೆ. ಇದನ್ನು ಗಮನಿಸಿದ ಪ್ರಧಾನಿ ಮೋದಿ ತಕ್ಷಣವೇ ತಮ್ಮ ಭಾಷಣ ನಿಲ್ಲಿಸಿ ತಮ್ಮ ವೈಯಕ್ತಿಕ ವೈದ್ಯಕೀಯ ಸಿಬ್ಬಂದಿಗೆ ವ್ಯಕ್ತಿಯ ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಿದರು. ತಮ್ಮ ವಿದೇಶ ಪ್ರವಾಸ ಹಾಗೂ ಬೆಂಗಳೂರಿನಲ್ಲಿ ಇಸ್ರೋ ಕಚೇರಿಗೆ ಭೇಟಿ ನೀಡಿ ದೆಹಲಿಗೆ ಮರಳಿದ ಪ್ರಧಾನಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ಈ ವೇಳೆ ಸಭೆಯಲ್ಲಿ ನಡೆದ ಘಟನೆ ಬಗ್ಗೆ ಪ್ರಧಾನಿ ತೋರಿದ ಮಾನವೀಯತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ನಾನು ಸ್ವಲ್ಪ ಬೇಗ ಜನಿಸಿಬಿಟ್ಟೆ: ಗಗನಯಾತ್ರೆ ಮಾಡಿದ ಮೊದಲ ಭಾರತೀಯನ ನುಡಿ

ನವದೆಹಲಿ: ಬಾಹ್ಯಾಕಾಶ ಯಾನ ಕೈಗೊಂಡ ಮೊದಲ ಭಾರತೀಯ ಎಂಬ ಹಿರಿಮೆ ಹೊಂದಿರುವ ರಾಕೇಶ್‌ ಶರ್ಮಾ ಅವರು ಇಸ್ರೋ ಚಂದ್ರಯಾನ-3 ಯಶಸ್ಸಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಬೆಳವಣಿಗೆಯಿಂದ ದೇಶದಲ್ಲಿ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮಗಳ ಗಮನಾರ್ಹ ಶಕೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ತಾವು ಯುವಕರಾಗಬೇಕಿತ್ತು ಎಂದು ಅವರು ಹೇಳಿದ್ದಾರೆ. 

ಅಂತರಿಕ್ಷಕ್ಕೆ ಶೀಘ್ರ ಮಹಿಳಾ ರೋಬೋಟ್‌ ವ್ಯೋಮಮಿತ್ರ ಕಳಿಸಲಿರುವ ISRO

ಇಸ್ರೋ ಯಶಸ್ಸಿನಿಂದ ನನಗೆ ಆಶ್ಚರ್ಯವಾಗಿಲ್ಲ. ಇಸ್ರೋದ ಬಗ್ಗೆ ಆಳವಾಗಿ ಗೊತ್ತಿದೆ. ಹೀಗಾಗಿ ಅವರು ಈ ಬಾರಿ ಯಶಸ್ವಿಯಾಗುತ್ತಾರೆ ಎಂಬುದು ತಿಳಿದಿತ್ತು. ನಾನೊಬ್ಬ ಹೆಮ್ಮೆಯ ಭಾರತೀಯ. ಈಗ ಹೆಮ್ಮೆ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು 'ನ್ಯಾಷನಲ್‌ ಜಿಯೋಗ್ರಾಫಿಕ್‌' ವಾಹಿನಿಗೆ ತಿಳಿಸಿದ್ದಾರೆ. ನನಗೀಗ ವಯಸ್ಸು 75. ಪ್ರಾಯಶಃ ನಾನು ಬೇಗ ಜನಿಸಿಬಿಟ್ಟೆ. ಈಗ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮಗಳ ಶಕೆ ಆರಂಭವಾಗಿದೆ. ಹೀಗಾಗಿ ಭಾರತೀಯನಾಗಿ ನಾನು ಇಸ್ರೋದ ಮಹಾನ್‌ ಯಶಸ್ಸಿಗೆ ಧನ್ಯವಾದ ಹೇಳಬಹುದಷ್ಟೆ ಎಂದಿದ್ದಾರೆ.

ರೋವರ್‌ನ ಮತ್ತೊಂದು ವಿಡಿಯೋ ಬಿಡುಗಡೆ: ಪ್ರಜ್ಞಾನ್‌ ಸಂಚರಿಸುತ್ತಿರುವ ದೃಶ್ಯ ಲಭ್ಯ 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!