ಹನುಮಾನ್ ಪ್ರತಿಮೆಗೆ ನಿರಂತರ ಸುತ್ತು ಹೊಡೆದು ಸುದ್ದಿಯಾಗಿದ್ದ ನಾಯಿ ಅಸ್ವಸ್ಥ: ಪಶುಆಸ್ಪತ್ರೆಗೆ ದಾಖಲು

Published : Feb 06, 2026, 02:26 PM IST
A dog circling a Hanuman statue

ಸಾರಾಂಶ

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಹನುಮಾನ್ ದೇಗುಲದ ಪ್ರತಿಮೆಗೆ ನಿರಂತರ ಪ್ರದಕ್ಷಿಣೆ ಹಾಕುತ್ತಿದ್ದ ಶ್ವಾನ ನಿರ್ಜಲೀಕರಣದಿಂದ ಅಸ್ವಸ್ಥಗೊಂಡಿದ್ದು, ಆ ಶ್ವಾನವನ್ನು ಪ್ರಾಣಿಪ್ರಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ವಾನವು ಈಗ ಚೇತರಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

ಹನುಮಾನ್ ದೇಗುಲಕ್ಕೆ ಸುತ್ತು ಬರುತ್ತಿದ್ದ ಶ್ವಾನ ಅಸ್ವಸ್ಥ:

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಶ್ವಾನವೊಂದು ಹನುಮಾನ್ ದೇಗುಲದಲ್ಲಿ ಪ್ರತಿಮೆಯೊಂದಕ್ಕೆ ನಿರಂತರ ಸುತ್ತು ಬರುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಅನೇಕರು ಈ ಅಪರೂಪದ ದೃಶ್ಯವನ್ನು ನೋಡುವುದಕ್ಕೆ ಅಲ್ಲಿಗೆ ಆಗಮಿಸುತ್ತಿದ್ದರು. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ ಈಗ ಆ ಶ್ವಾನವನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ. ಈ ಶ್ವಾನವೂ ತೀವ್ರವಾದ ನಿರ್ಜಲೀಕರಣ ಸಮಸ್ಯೆ ಹಾಗೂ ಕಡಿಮೆ ರಕ್ತದೊತ್ತಡ, ನಿಧಾನ ಹೃದಯ ಬಡಿತದ ಸಮಸ್ಯೆಯಿಂದ ಬಳಲುತ್ತಿದೆ ಎಂದು ವೈದ್ಯರು ಹೇಳಿದ್ದು, ಆ ಶ್ವಾನಕ್ಕೀಗ ನೋಯ್ಡಾದ ಪಶು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲ ದಿನಗಳ ಹಿಂದೆ ವೀಡಿಯೋವೊಂದು ವೈರಲ್ ಆಗಿತ್ತು. ವೀಡಿಯೋದಲ್ಲಿ ಶ್ವಾನವೊಂದು ಹನುಮಾನ್ ಪ್ರತಿಮೆಗೆ ನಿರಂತರ ಸುತ್ತು ಬರುವ ಮೂಲಕ ಎಲ್ಲರ ಗಮನ ಸೆಳೆದಿತ್ತು.. ಇದು ಕೇವಲ 1 ದಿನಕ್ಕೆ ಸೀಮಿತವಾಗಿರಲಿಲ್ಲ, ಶ್ವಾನ ನಿರಂತರ ಮೂರು ದಿನಗಳ ಕಾಲ ಹನುಮಾನ್ ಪ್ರತಿಮೆಗೆ ಸುತ್ತು ಹೊಡೆದಿದ್ದು ನೋಡಿ ಜನ ಅಚ್ಚರಿಗೊಂಡಿದ್ದರು. ಅನೇಕರು ಇದನ್ನು ದೇವರ ಮೇಲೆ ಶ್ವಾನದ ಭಕ್ತಿ ಎಂದು ಬಣ್ಣಿಸಿದ್ದರು. ಬಿಜ್ನೋರ್‌ನ ನಗೀನಾ ಪ್ರದೇಶದ ನಂದಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಹಳೆಯ ದೇವಾಲಯದೊಳಗೆ ಬೀದಿ ನಾಯಿಯೊಂದು ಹನುಮಾನ್ ಮತ್ತು ಮಾ ದುರ್ಗಾ ದೇವರ ವಿಗ್ರಹಗಳನ್ನು ಪದೇ ಪದೇ ಸುತ್ತುತ್ತಿರುವುದನ್ನು ಸ್ಥಳೀಯರು ಗಮನಿಸಿದರು. ನಂತರ ಆ ನಾಯಿಗೆ ಭೈರವ ಎಂದು ಜನರು ನಾಮಕರಣವನ್ನೂ ಮಾಡಿದ್ದರು. ಸುಮಾರು 3 ದಿನಗಳ ಕಾಲ ನಾಯಿ ಹೀಗೆ ವಿಗ್ರಹಕ್ಕೆ ನಿರಂತರ ಪ್ರದಕ್ಷಿಣೆ ಹಾಕಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆದವು.

ಇದನ್ನೂ ಓದಿ: ಮೃತಪಟ್ಟ ವ್ಯಕ್ತಿ 48 ಗಂಟೆಗಳ ನಂತರ ಶವಾಗಾರದಲ್ಲಿ ಕಿರುಚುತ್ತಲ್ಲೇ ಎದ್ದ: ಸತ್ತು ಬದುಕಿದವನಿಗೆ ಕಾದಿತ್ತು ಮತ್ತೊಂದು ಆಘಾತ

ಅನೇಕರು ಇದನ್ನು ಶ್ವಾನದ ಭಕ್ತಿ ಎಂದು ಬಣ್ಣಿಸಿದ್ದರು. ಅಲ್ಲಿ ಜನಸಂದಣಿ ಇದ್ದರೂ ಈ ಶ್ವಾನ ಮಾತ್ರ ಸುತ್ತುಬರುವ ತನ್ನ ಕಾರ್ಯದಲ್ಲಿ ನಿರಂತರವಾಗಿತ್ತು. ಅದರು ಯಾರ ಮೇಲೂ ದಾಳಿಗೂ ಹೋಗುತ್ತಿರಲಿಲ್ಲ, ಯಾರನ್ನು ಗಮನಿಸುತ್ತಲೂ ಇರಲಿಲ್ಲ, ಅದು ತನ್ನ ಪಾಡಿಗೆ ತಾನು ದೇಗುಲವನ್ನು ಸುತ್ತುತ್ತಲೇ ಇತ್ತು. ಆದರೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪ್ರಾಣಿಪ್ರಿಯರು ಈ ಶ್ವಾನದಲ್ಲಿ ಏನೋ ಸಮಸ್ಯೆ ಇರುವುದನ್ನು ಗಮನಿಸಿದರು. ಅದರ ಪ್ರದಕ್ಷಿಣೆಯ ಹಿಂದೆ ಅವರಿಗೆ ಆಧ್ಮಾತ್ಮ ಕಾಣಿಸಲಿಲ್ಲ. ಬದಲಾಗಿ ಏನೋ ಅನಾರೋಗ್ಯದ ಅನುಮಾನ ಕಾಡಿತ್ತು. ಹೀಗಾಗಿ ಅವರು ಅದನ್ನು ನೋಯ್ಡಾದ ಮ್ಯಾಕ್ಸ್‌ಪೆಟ್‌ಝಡ್‌ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ಪಶುವೈದ್ಯರು ಶ್ವಾನಕ್ಕೆ ಸಂಪೂರ್ಣ ತಪಾಸಣೆ ಮಾಡಿದ್ದು, ಈ ವೇಳೆ ಶ್ವಾನವೂ ತೀವ್ರವಾಗಿ ನಿರ್ಜಲೀಕರಣಗೊಂಡಿದೆ ಮತ್ತು ಕಡಿಮೆ ರಕ್ತದೊತ್ತಡ, ನಿಧಾನ ಹೃದಯ ಬಡಿತ ಮತ್ತು ವೀಡಿಯೊಗಳಲ್ಲಿ ಕಂಡುಬರುವ ನಿರಂತರ ವೃತ್ತಾಕಾರದ ಚಲನೆಗೆ ಕಾರಣವಾದ ನರವೈಜ್ಞಾನಿಕ ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಅದಕ್ಕೆ ಚಿಕಿತ್ಸೆ ನೀಡದಿದ್ದರೆ ಶ್ವಾನದ ಸ್ಥಿತಿ ಬೇಗನೆ ಹದಗೆಡುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ ಅಮೆರಿಕಾ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಕರೆ ಬಹಳ ಅಗತ್ಯವಾಗಿತ್ತು: ಜೈಶಂಕರ್ ಪುತ್ರ ಧ್ರುವ್ ಜೈಶಂಕರ್

ಎನ್‌ಜಿಒ ಒಂದರ ಸಂಜಯ್ ಮೊಹಾಪಾತ್ರ ಎಂಬುವವರು ಈ ಶ್ವಾನವನ್ನು ರಕ್ಷಿಸಿ ಚಿಕಿತ್ಸೆಗಾಗಿ ಕರೆತಂದಿದ್ದು, ಶ್ವಾನವೂ ಈಗ ಗುಣಮುಖವಾಗಿದೆ ಎಂದು ವರದಿಯಾಗಿದೆ. ಈ ಅನುಭವ ತುಂಬಾ ವೈಯಕ್ತಿಕ ಭೈರವನ ರಕ್ಷಣೆ ಮತ್ತು ಆರೈಕೆ ಮಾಡುವ ಅವಕಾಶ ಸಿಕ್ಕಿದ್ದು ಗೌರವದ ಸಂಗತಿ. ಹನುಮಾನ್ ಜಿಯ ಭಕ್ತರ ಸೇವೆ ಮಾಡುವುದು ನಮಗೆ ಆಶೀರ್ವಾದ ಎಂದು ನಾವು ಪರಿಗಣಿಸುತ್ತೇವೆ ಎಂದು ಅವರು ಹೇಳಿದರು. ಅಲ್ಲದೇ ಮುಂದಿನ ಕೆಲ ದಿನಗಳ ಆರೈಕೆಯ ನಂತರ ಈಗ ಶ್ವಾನ ಬೈರವ ಚೇತರಿಸಿಕೊಂಡಿದ್ದಾನೆ. ಆತನ ಆರೋಗ್ಯ ಸುಧಾರಿಸಿದೆ. ನೋಯ್ಡಾದಿಂದ ಬಿಜ್ನೋರ್‌ನ ತನ್ನ ಊರಿಗೆ ಮರಳಲಿದ್ದಾನೆ ಎಂದು ಅವರು ಹೇಳಿದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹೇಶ್ ಬಾಬುಗೆ 'ನಿಲ್ಲೋದು' ಹೇಗೆಂದು ಕಲಿಸಿದೋಕ್ಕೆ ಕೇರಳಕ್ಕೆ ಕಳಿಸಿದ ಜಕ್ಕಣ್ಣ ಎಸ್‌ಎಸ್‌ ರಾಜಮೌಳಿ!
29ರ ಅತ್ತೆ–18ರ ಸೋದರಳಿಯ ಲವ್ವಿ ಡವ್ವಿ ವೈರಲ್ ಆಗ್ತಿದ್ದಂತೆ ಮನೆ ಬಿಟ್ಟು ಪರಾರಿ