ವೈದ್ಯೋ ನಾರಾಯಣೋ ಹರಿ ಅಂತಾರೆ. ಅಂದರೆ ವೈದ್ಯರು ದೇವರಿಗೆ ಸಮಾನ ಎಂಬ ಅರ್ಥ, ಆದರೆ ಇಲ್ಲೊಬ್ಬ ವೈದ್ಯ ಕಣ್ಣು ಕಾಣಿಸದ ದಂಪತಿಯ ಮಗುವನ್ನು 50 ಸಾವಿರ ರೂಪಾಯಿಗೆ ಬೇರೆಯವರಿಗೆ ಮಾರಿದ ಘಟನೆ ನಡೆದಿದೆ.
ಮುಂಬೈ: ವೈದ್ಯೋ ನಾರಾಯಣೋ ಹರಿ ಅಂತಾರೆ. ಅಂದರೆ ವೈದ್ಯರು ದೇವರಿಗೆ ಸಮಾನ ಎಂಬ ಅರ್ಥ, ಆದರೆ ಇಲ್ಲೊಬ್ಬ ವೈದ್ಯ ಕಣ್ಣು ಕಾಣಿಸದ ದಂಪತಿಯ ಮಗುವನ್ನು 50 ಸಾವಿರ ರೂಪಾಯಿಗೆ ಬೇರೆಯವರಿಗೆ ಮಾರಿದ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ವೈದ್ಯರನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಮಹಾರಾಷ್ಟ್ರದ ಕಲ್ಯಾಣದ ಅಂಬಿವ್ಲಿಯಲ್ಲಿರುವ ನರ್ಸಿಂಗ್ ಹೋಮ್‌ನಲ್ಲಿ ಈ ಘಟನೆ ನಡೆದಿದೆ.
ಕಣ್ಣು ಕಾಣದ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, ಪತ್ನಿ ಮೂರನೇ ಬಾರಿ ಗರ್ಭಿಣಿಯಾಗಿದ್ದರು. ಆದರೆ ಈ ಮೂರನೇ ಮಗುವನ್ನು ದಂಪತಿ ಬಯಸಿದರ ಕಾರಣ, ಬಯಸದೇ ಆದ ಗರ್ಭಧಾರಣೆಯನ್ನು ದಂಪತಿ ಅಬಾರ್ಷನ್ ಮಾಡಿಸಲು ಮುಂದಾಗಿದ್ದರು. ಆದರೆ ಆದರೆ ಮಹಿಳೆ ಅಬಾರ್ಷನ್ ಮಾಡಿಸುವ ಹಂತ ದಾಟಿ ಹೋಗಿದ್ದರು. ಅವರಿಗೆ ಗರ್ಭಪಾತ ಮಾಡಿಸಲು ಸಾಧ್ಯವಿರಲಿಲ್ಲ, ಹೀಗಾಗಿ ವೈದ್ಯರು ದಂಪತಿಗೆ ನೀವು ಮಗುವಿಗೆ ಜನ್ಮ ನೀಡಿ ಮಗುವನ್ನು ನನಗೆ ಕೊಡಿ ಎಂದು ಸಲಹೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಆಸ್ಪತ್ರೆ ನಿಮ್ಮ ಎಲ್ಲಾ ವೈದ್ಯಕೀಯ ವೆಚ್ಚವನ್ನು ಭರಿಸುವುದು ಹಾಗೂ ಇವರಿಗಿದ್ದ ಇನ್ನಿಬ್ಬರು ಮಕ್ಕಳ ಶೈಕ್ಷಣಿಕ ವೆಚ್ಚಕ್ಕೂ ಸಹಾಯ ಮಾಡುವುದಾಗಿ ವೈದ್ಯರು ಈ ಕಣ್ಣು ಕಾಣಿಸದ ದಂಪತಿಗೆ ಸಲಹೆ ನೀಡಿದ್ದಾರೆ.
undefined
ಲೈಂಗಿಕ ಕಾರ್ಯಕರ್ತೆಯ ಹತ್ಯೆ: ಶವ ಪೀಸ್ ಪೀಸ್ ಮಾಡಿ ಟ್ರಾಲಿಗೆ ತುಂಬಿ ಎಸೆದ ಪಾಪಿ
ಈ ವಿಶೇಷ ಚೇತನ ದಂಪತಿಗೆ ಐದು ವರ್ಷದ ಮಗಳು ಹಾಗೂ ಮೂರು ವರ್ಷದ ಮಗನಿದ್ದಾನೆ. ಪಶ್ಚಿಮ ಕಲ್ಯಾಣದ ಮೊಹಾನೆಯಲ್ಲಿ ಈ ದಂಪತಿ ವಾಸ ಮಾಡುತ್ತಿದ್ದರು. ಪತಿ ಮುಂಬೈನ ರೈಲುಗಳಲ್ಲಿ ಭಿಕ್ಷಾಟನೆಯ ಜೊತೆಗೆ ಇತರ ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಮೂಲಕ ಕುಟುಂಬವನ್ನು ಸಾಕುತ್ತಿದ್ದರು. ಇತ್ತ ಮಹಿಳೆಗೆ ತಾನು ಗರ್ಭಿಣಿಯಾಗಿರುವ ವಿಚಾರ 5 ತಿಂಗಳು ಆದ ನಂತರ ತಿಳಿದಿತ್ತು. ಆದರೆ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಕಾರಣ ದಂಪತಿ ಮೊಹಾನೆಯಲ್ಲಿರುವ ಗಣಪತಿ ನರ್ಸಿಂಗ್ ಹೋಮ್‌ಗೆ ಹೋಗಿ ವೈದ್ಯರ ಬಳಿ ಗರ್ಭಪಾತ ಮಾಡಿಸುವಂತೆ ಮನವಿ ಮಾಡಿದ್ದರು.
ಹೀಗಾಗಿ ವೈದ್ಯ ಅನುರಾಗ್ ಧೋನಿ, ಈ ದಂಪತಿಗೆ ಮಗುವನ್ನು ಹೆತ್ತು ತನ್ನ ಕೈಗೆ ನೀಡುವಂತೆ ಸಲಹೆ ನೀಡಿದ್ದರು. ಆ ಮಗುವನ್ನು ತಾನು ತನ್ನ ಮಕ್ಕಳಿಲ್ಲದ ಸಂಬಂಧಿಯೊಬ್ಬರಿಗೆ ನೀಡುವುದಾಗಿ ವೈದ್ಯ ಅನುರಾಗ್ ಈ ದಂಪತಿಗೆ ಹೇಳಿದ್ದರು. ಹೀಗಾಗಿ ಈ ಮಗುವಿನಿಂದಲಾದರೂ ನಮ್ಮ ಇನ್ನಿಬ್ಬರು ಮಕ್ಕಳ ಭವಿಷ್ಯ ಚೆನ್ನಾಗಿರಬಹುದು ಎಂದು ಪೋಷಕರು ಆಸೆಪಟ್ಟು ವೈದ್ಯರ ಸಲಹೆಗೆ ಒಪ್ಪಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚಪ್ಪಲಿ ಬಿಟ್ಟು ಬನ್ನಿ ಎಂದಿದ್ದಕ್ಕೆ ವೈದ್ಯನಿಗೆ ಚಪ್ಪಲಿ ಬಿಚ್ಚಿ ಹೊಡೆದ ರೋಗಿಯ ಸಂಬಂಧಿಗಳು
ಆಗಸ್ಟ್ 23ರಂದು ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಆದರೆ ಮಹಿಳೆಯ ಜೊತೆಗಿದ್ದ ಎಲ್ಲರನ್ನೂ ವೈದ್ಯರು ಮನೆಗೆ ಕಳುಹಿಸಿದ್ದು, ಇವತ್ತು ಹೆರಿಗೆ ಆಗುವುದಿಲ್ಲ ಇನ್ನೊಂದು ದಿನ ಕಾಯಬೇಕು ಎಂದು ಹೇಳಿದ್ದಾರೆ. ನಂತರ ರಾತ್ರಿ 11.30ರ ಸುಮಾರಿಗೆ ಮಹಿಳೆಗೆ ಹೆರಿಗೆ ಮಾಡಿದ್ದಾರೆ. ಆದರೆ ಈ ವೇಳೆ ಆಸ್ಪತ್ರೆಯಲ್ಲಿ ಮಹಿಳೆಯ ಹೊರತಾಗಿ ಬೇರಾರು ಇರಲಿಲ್ಲ. ಅಲ್ಲದೇ ಕನಿಷ್ಠ ಮಗುವಿನ ಮುಖವನ್ನು ಕೂಡ ಪೋಷಕರಿಗೆ ತೋರಿಸಿಲ್ಲ, ಅಲ್ಲದೇ ಆಗಸ್ಟ್ 23ರಂದು ಮಗು ಜನಿಸಿದರು. 8ರಿಂದ 10 ದಿನಗಳ ಕಾಲ ಮಗುವನ್ನು ಪೋಷಕರ ಹತ್ತಿರ ಬಿಟ್ಟಿಲ್ಲ, ಅಲ್ಲದೇ ಆಸ್ಪತ್ರೆಯ ಬಿಲ್ ನೀಡುವಂತೆಯೂ ವೈದ್ಯ ಪೋಷಕರ ಬಳಿ ಕೇಳಿದ್ದಾರೆ.
8 ದಿನಗಳ ಕಾಲ ನಮ್ಮ ಮಗುವನ್ನು ನಮಗೆ ನೀಡುವಂತೆ ವೈದ್ಯರ ಬಳಿ ಬೇಡಿದೆವು. ಜನನದ ಸಮಯದಲ್ಲಿ ಮಗು ಅಳದ ಕಾರಣಮಗುವನ್ನು ಪರಿಶೀಲನೆಯಲ್ಲಿ ಇಡಲಾಗಿದೆ ಎಂದು ಆರಂಭದಲ್ಲಿ ಕೇಳಿದಾಗ ವೈದ್ಯರು ಹೇಳಿದರು. ಇದಾದ ನಂತರ ಮತ್ತೆ ಕೇಳಿದಾಗ ಮಗುವನ್ನು 50 ಸಾವಿರ ರೂಪಾಯಿಗಳಿಗೆ ಬೇರೆಯವರಿಗೆ ಮಾರಿದ್ದಾಗಿ ವೈದ್ಯರು ಹೇಳಿದ್ದಾರೆ. ಅಲ್ಲದೇ ವೈದ್ಯರು ಸಿಕ್ಕಿದ ಹಣದಲ್ಲಿ ತಮ್ಮ ಪಾಲನ್ನು ತೆಗೆದುಕೊಂಡು ನಮಗೆ ಬಿಡಿಗಾಸು ನೀಡಿದ್ದಾರೆ. ನಮಗೆ ಹಣ ಬೇಡ ಮಗುವೇ ಬೇಕು ಎಂದು ಹೇಳಿದರು ವೈದ್ಯರು ಕೇಳಲಿಲ್ಲ. ಹೀಗಾಗಿ ಈ ಅಂಧ ದಂಪತಿ ಜಿಲ್ಲೆಯ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ ವೈದ್ಯನ ವಿರುದ್ಧ ದೂರು ನೀಡಿದ್ದಾರೆ.
ಹೀಗಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ.