ಯಪ್ಪಾ, ದಿನಕ್ಕೆ ಎಷ್ಟೊಂದು ಡೆಲಿವರಿ ಆರ್ಡರ್‌ಗಳು? ನಿವಾಸಿಗಳಿಗೆ ಸೆಕ್ಯುರಿಟಿ ಗಾರ್ಡ್‌ಗಳಿಂದ ನೋಟಿಸ್

By Mahmad Rafik  |  First Published Sep 19, 2024, 2:11 PM IST

ದೆಹಲಿಯ ಹೌಸಿಂಗ್ ಸೊಸೈಟಿಯೊಂದು ಹೆಚ್ಚು ಪಾರ್ಸೆಲ್‌ಗಳನ್ನು ಸ್ವೀಕರಿಸುವ ನಿವಾಸಿಗಳಿಗೆ ಪರ್ಸನಲ್ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವಂತೆ ಸೂಚಿಸಿ ವಿವಾದಕ್ಕೆ ಗುರಿಯಾಗಿದೆ. ಹಬ್ಬದ ಸಮಯದಲ್ಲಿ ಹೆಚ್ಚಿನ ಪಾರ್ಸೆಲ್‌ಗಳು ಬರುವುದರಿಂದ ತಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸೆಕ್ಯುರಿಟಿ ಸಿಬ್ಬಂದಿ ದೂರಿದ್ದಾರೆ.


ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹೌಸಿಂಗ್ ಸೊಸೈಟಿಯ ವಿಚಿತ್ರ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ನೋಟಿಸ್ ಫೋಟೋ ಕಾಣಬಹುದು. ಈ ನೋಟಿಸ್‌ನಲ್ಲಿ ಅಲ್ಲಿಯ ನಿವಾಸಿಗಳಿಗೆ ವಿಶೇಷ  ಮನವಿಯೊಂದನ್ನು ಮಾಡಿಕೊಳ್ಳಲಾಗಿದ್ದು, ಪರ್ಸನಲ್ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸೆಪ್ಟೆಂಬರ್ 18ರಂದು ರೇಜಜಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್ ತನ್ನ ಹೌಸಿಂಗ್ ಸೊಸೈಟಿಯ ನಿವಾಸಿಗಳಿಗೆ ಪರ್ಸನಲ್ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವಂತೆ ಸೂಚಿಸಿದೆ. ಇಲ್ಲವಾದರೆ ದಿನಕ್ಕೆ ಒಂದು ಅಥವಾ ಎರಡು ಡೆಲಿವರಿಗೆ ಮಾತ್ರ ನಿಮ್ಮ ಆರ್ಡರ್ ಸೀಮಿತಗೊಳಿಸಿಕೊಳ್ಳಿ ಎಂದು ಸಲಹೆಯನ್ನು ನೀಡಿದೆ. ಹಬ್ಬ ಅಥವಾ ವಿಶೇಷ ದಿನಗಳಲ್ಲಿ ಅತಿ ಹೆಚ್ಚು ಪಾರ್ಸೆಲ್‌ಗಳು ಬರೋದರಿಂದ ಅದು ತಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೆಕ್ಯುರಿಟಿ ಸಿಬ್ಬಂದಿ ತಮ್ಮ ಸೊಸೈಟಿ ಅಧ್ಯಕ್ಷರಿಗೆ ಹೇಳಿದ್ದಾರೆ.

ಈ ಹೌಸಿಂಗ್ ಸೊಸೈಟಿಯ ನಿವಾಸಿಯೊಬ್ಬರು ನೋಟಿಸ್ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೊಸೈಟಿ ಅಧ್ಯಕ್ಷ ಹುಚ್ಚನಾಗಿದ್ದಾನೆ. ಒಮ್ಮೆ ನನ್ನ ಸೋದರ ಸಂಬಂಧಿ ಮನೆಗೆ ಹೆಚ್ಚು ಪಾರ್ಸೆಲ್‌ಗಳು ಬಂದಿರೋದಕ್ಕೆ ಎಚ್ಚರಿಕೆ ನೀಡಲಾಗಿದೆ.

Latest Videos

undefined

ಭಾರತದ 2 ನೇ ಎಂಪಾಕ್ಸ್ ಕೇಸ್‌: ಕೇರಳದಲ್ಲಿ 38 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ದೃಢ!

ನಮ್ಮ ಹೌಸಿಂಗ್ ಸೊಸೈಟಿಯ ಭದ್ರತಾ ಸಿಬ್ಬಂದಿ/ಕಾವಲುಗಾರ ನೀಡಿದ ದೂರಿನ ಅನ್ವಯ ಎಲ್ಲಾ ಸದಸ್ಯರ ಸಭೆ ಕರೆಯಲಾಗಿದೆ. ಕಳೆದ ಏಳು ವರ್ಷಗಳಿಂದ ಸೆಕ್ಯುರಿಟಿ ಗಾರ್ಡ್ ನಮ್ಮ ಜೊತೆಯಲ್ಲಿ ಕೆಲಸ ಮಾಡುತ್ತಿದ್ದು, ಹಬ್ಬಗಳ ಸಂದರ್ಭದಲ್ಲಿ ಅತ್ಯಧಿಕ ಪಾರ್ಸೆಲ್ ಬರುತ್ತವೆ. ಇದು ಅವರ ಕೆಲಸದ  ಮೇಲೆ ಪರಿಣಾಮ ಬೀರುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕೆಲಸದ ಅವಧಿಯಲ್ಲಿ ಆರ್ಡರ್‌ಗಳನ್ನು ಸ್ವೀಕರಿಸಬೇಕು. ಹಾಗೆಯೇ ಡೆಲಿವರಿ ಬಾಯ್ ಜೊತೆ ಓಟಿಪಿ ಸಹ ಶೇರ್ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ Ajio, Swiggy ಸಿಬ್ಬಂದಿ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಬೇಕಾಗುತ್ತದೆ. ಆದರೆ ಇದು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸೆಕ್ಯುರಿಟಿ ಸಿಬ್ಬಂದಿ ತಮ್ಮ ಅಳಲನ್ನು ಅಧ್ಯಕ್ಷರ ಮುಂದೆ ತೋಡಿಕೊಂಡಿದ್ದಾರೆ. ಈ ಹಿನ್ನೆಲೆ ಹೌಸಿಂಗ್ ಸೊಸೈಟಿಯ ಎಲ್ಲಾ ಸದಸ್ಯರ ಸಭೆಯನ್ನು ಕರೆಯಲಾಗಿದೆ.

ಬ್ಯಾಚುಲರ್‌ ಹುಡುಗರು ವಾಸಿಸುವ ಬ್ಲಾಕ್‌ನನಿಂದಲೇ ಹೆಚ್ಚಿನ ಡೆಲಿವರಿ ಆರ್ಡರ್‌ಗಳು ಬರುತ್ತವೆ ಎಂದು ಸೊಸೈಟಿ ಅಧ್ಯಕ್ಷರು ಹೇಳಿದ್ದಾರೆ. ಬ್ಯಾಚುಲರ್‌ಗಳು ವಾಸಿಸುವ ಎಫ್‌ ಬ್ಲಾಕ್‌ಗೆ ಒಂದು ಫ್ಲ್ಯಾಟ್‌ನಿಂದಲೇ ದಿನಕ್ಕೆ  10-15 ಆರ್ಡರ್‌ಗಳು ಬರುತ್ತವೆ. ಹಾಗಾಗಿ ಆರ್ಡರ್‌ಗಳನ್ನು ದಿನಕ್ಕೆ ಒಂದು ಅಥವಾ ಎರಡಕ್ಕೆ ಸೀಮಿತಗೊಳಿಸಬೇಕು ಎಂದು ಅಧ್ಯಕ್ಷರು ನೋಟಿಸ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇಲ್ಲವಾದಲ್ಲಿ ಡೆಲಿವರಿ ಬಾಯ್ ಜೊತೆ ಸಂಪರ್ಕ ಸಾಧಿಸಲು ವ್ಯಕ್ತಿಯನ್ನು ನೇಮಿಸಿಕೊಳ್ಳಿ ಎಂದು ಹೇಳಲಾಗಿದೆ.

ಗಣೇಶ ಹಬ್ಬಕ್ಕೆ ಡಿಜೆ ಲೇಸರ್ ಬಳಕೆ ಹಾನಿಕಾರವಾಗಿದ್ದರೆ ಈದ್‌ಗೂ ಹಾನಿ, ಅರ್ಜಿ ತಿರಸ್ಕರಿಸಿದ ಹೈಕೋರ್ಟ್!

SOCIETY PRESIDENTS ARE INSANE!

My cousin’s building got a warning for receiving too many parcels in a day 😭😭 pic.twitter.com/Baj7vCKRtF

— shagun (@upshagunn)
click me!