ಲೈಂಗಿಕ ಕಾರ್ಯಕರ್ತೆಯ ಹತ್ಯೆ: ಶವ ಪೀಸ್ ಪೀಸ್ ಮಾಡಿ ಟ್ರಾಲಿಗೆ ತುಂಬಿ ಎಸೆದ ಪಾಪಿ

By Anusha Kb  |  First Published Sep 19, 2024, 1:59 PM IST

ಚೆನ್ನೈನ ತುರೈಪಾಕ್ಕಂನಲ್ಲಿ ಟ್ರಾಲಿಯೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಆರೋಪಿ ಮಣಿಕಂಡನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಣಕಾಸಿನ ವಿಚಾರದಲ್ಲಿ ನಡೆದ ಜಗಳದಲ್ಲಿ ಮಹಿಳೆಯನ್ನು ಕೊಲೆ ಮಾಡಿ ಟ್ರಾಲಿಯಲ್ಲಿ ತುಂಬಿಸಿ ಎಸೆದಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.


ಚೆನ್ನೈ: ಬಿಟ್ಟು ಹೋದ ಟ್ರಾಲಿಯೊಂದರಲ್ಲಿ ಮಹಿಳೆಯ ಶವ ಪತ್ತೆಯಾದ ಆಘಾತಕಾರಿ ಘಟನೆ  ಚೆನ್ನೈನ ತುರೈಪಾಕ್ಕಂ ನಡೆದಿದೆ. ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಡ ನಿರ್ಮಾಣ ಕಾರ್ಮಿಕರು ಈ ಟ್ರಾಲಿಯನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ನಂತರ ಸ್ಥಳಕ್ಕೆ ಬಂದ ಪೊಲೀಸರು ಟ್ರಾಲಿಯನ್ನು ತೆರೆದು ನೋಡಿದಾಗ ಅದರಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

ಕೊಲೆಯಾದ ಮಹಿಳೆಯನ್ನು 32 ವರ್ಷದ ದೀಪಾ ಎಂದು ಗುರುತಿಸಲಾಗಿದ್ದು ಆಕೆ ಮಾದಾವರಂ ನಿವಾಸಿ ಎಂದು ಗುರುತಿಸಲಾಗಿದೆ. ಮಹಿಳೆಯ ಸೋದರ ಇದು ತನ್ನ ಸೋದರಿಯ ಶವ ಎಂದು ಗುರುತಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ಯಾರೋ ಈ ಮಹಿಳೆಯ ಹತ್ಯೆ ಮಾಡಿ ಟ್ರೋಲಿ ಬ್ಯಾಗ್‌ಗೆ ತುಂಬಿಸಿ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಬ್ಯಾಗ್ ಸಿಕ್ಕ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾರೆ. ಬಳಿಕ ಪೊಲೀಸರು ಶಂಕಿತನೋರ್ವನನ್ನು ಬಂಧಿಸಿದ್ದಾರೆ. 

Tap to resize

Latest Videos

undefined

ಶೇಕಡಾ 80ರಷ್ಟು ಪುರುಷರು ಸೆಕ್ಸ್‌ಗಾಗಿ ರೆಡ್‌ಲೈಟ್ ಏರಿಯಾಗೆ ಬರಲ್ಲ; ಕತ್ತಲೆ ಹಿಂದಿನ ರಹಸ್ಯ ಬಿಚ್ಚಿಟ್ಟ ಮಹಿಳೆ

ಶಂಕಿತನನ್ನು ಶಿವಗಂಗೆ ಜಿಲ್ಲೆಯ ಮಣಿಕಂಡನ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ವೇಳೆ ಮಣಿಕಂಡನ್ ದೀಪಾ ಮೇಲೆ ಹ್ಯಾಮರ್‌ನಿಂದ ಭೀಕರವಾಗಿ ಹಲ್ಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.  ಹಣದ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ಸಿಟ್ಟಿಗೆದ್ದ ಮಣಿಕಂಡನ್ ಆಕೆಯನ್ನು ಹ್ಯಾಮರ್‌ನಿಂದ ಹೊಡೆದು ಕೊಂದಿದ್ದಾನೆ. ನಂತರ ಆಕೆಯ ದೇಹವನ್ನು ತುಂಡು ತುಂಡು ಮಾಡಿ ಸೂಟ್‌ಕೇಸ್‌ಗೆ ತುಂಬಿಸಿ ರಸ್ತೆ ಬದಿ ಎಸೆದಿದ್ದಾನೆ.

ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ದೀಪ
ಮೃತ ಮಹಿಳೆ ದೀಪಾ ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಳು. ಮಣಿಕಂಡನ್‌ ಮಧ್ಯವರ್ತಿಯೋರ್ವನ ಸಹಾಯದಿಂದ ದೀಪಾಳನ್ನು ಸಂಪರ್ಕ ಮಾಡಿದ್ದ. ಬುಧವಾರ ದೀಪಾ ತೊರೈಪಕ್ಕಂಗೆ ಪ್ರಯಾಣ ಮಾಡಿದ್ದರು. ಆಕೆ ಮರಳಿ ಬಾರದೇ ಇದ್ದಾಗ ಆಕೆಯ ಸೋದರ ಆಕೆಗೆ ಕರೆ ಮಾಡಿದ್ದಾನೆ. ಆದರೆ ಆಕೆಯ ಫೋನ್ ಸ್ವಿಚ್‌ಆಫ್ ಬಂದಿದೆ. ಈ ವೇಳೆ ದೀಪಾ ಸೋದರ 'ಫೈಂಡ್ ಮೈ ಡಿವೈಸ್‌' ಸಹಾಯದಿಂದ ಆಕೆಯ ಮೊಬೈಲ್ ಫೋನ್ ಟ್ರ್ಯಾಕ್ ಮಾಡಿದಾಗ ಅದು ತುರೈಪಾಕ್ಕಂನಲ್ಲಿರುವುದನ್ನು ಸೂಚಿಸಿತ್ತು. 

ಇದಾದ ಬಳಿಕ ಬುಧವಾರ ರಾತ್ರಿಯೇ ದೀಪಾ ಸೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಮಾಧವರಂನಲ್ಲಿ ದೂರು ದಾಖಲಿಸಲು ಪೊಲೀಸರು ಹೇಳಿದ್ದಾರೆ. ಇದಾದ ಮರುದಿನ ತುರೈಪಾಕ್ಕಂನಲ್ಲಿ ಮಹಿಳೆಯ ಶವಪತ್ತೆಯಾಗಿದ್ದು, ದೀಪಾಳ ಸೋದರನಿಗೆ ಕರೆ ಮಾಡಿದ ಪೊಲೀಸರು ಬಂದು ಗುರುತು ಪತ್ತೆ ಮಾಡುವಂತೆ ಹೇಳಿದ್ದಾರೆ. ಅದರಂತೆ ಹೋಗಿ ನೋಡಿದಾಗ ದೀಪಾ ಶವ ಪತ್ತೆಯಾಗಿದೆ.

ಕೂದಲು ನೀಡಿದ ಸುಳಿವು: ವೇಶ್ಯೆಯ 140 ಬಾರಿ ಇರಿದು ಕೊಂದ ಭಾರತೀಯನಿಗೆ 30 ವರ್ಷದ ಬಳಿಕ ಜೈಲು

ರೌಡಿ ಕಾಕತೋಪು ಬಾಲಾಜಿ ಎನ್‌ಕೌಂಟರ್‌

ಹಾಗೆಯೇ ಚೆನ್ನೈನ ಮತ್ತೊಂದು ಅಪರಾಧ ಪ್ರಕರಣದಲ್ಲಿ, ಕುಖ್ಯಾತ ಕ್ರಿಮಿನಲ್ ಓರ್ವನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ರೌಡಿ ಕಾಕತೋಪು ಬಾಲಾಜಿಯನ್ನು ಚೆನ್ನೈನ ಪುಲಿಯಾಂತೋಪ್ ಪ್ರದೇಶದಲ್ಲಿ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ. ರೌಡಿ ಕಾಕತೋಪು ಬಾಲಾಜಿ ಅವರ ವಿರುದ್ಧ ಐದು ಕೊಲೆ ಪ್ರಕರಣ ಹಾಗೂ 15 ಕೊಲೆ ಯತ್ನಗಳು ಸೇರಿದಂತೆ 50 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದವು. ಈತ ಪುಲಿಯಾಂತೋಪ್ ಪ್ರದೇಶದಲ್ಲಿ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಆತನನ್ನು ಸ್ಟಾನ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ

ರೌಡಿ ಬಾಲಾಜಿ ಅಪರಾಧದ ಸುದೀರ್ಘ ಹಿನ್ನೆಲೆ ಹೊಂದಿದ್ದ. ಈತನ ವಿರುದ್ಧ ಗೂಂಡಾ ಕಾಯ್ದೆಯಡಿ 12 ಪ್ರಕರಣಗಳು ದಾಖಲಾಗಿದ್ದವು, ಹಲವು ಬಾರಿ ಈತನನ್ನು ಬಂಧಿಸಿದ್ದರು, ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಹಳೆ ಚಟ ಮುಂದುವರಿಸಿದ್ದ. ಆದರೆ ಈಗ ಆತನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಮುಗಿಸಿದ್ದಾರೆ. ಆತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರೊಯಪೆಟ್ಟಾದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

click me!