ನಿರ್ಮಾಣ ಹಂತದ ಮನೆಯ 15 ಲಕ್ಷ ಮೌಲ್ಯದ ಸಾಮಗ್ರಿ ಕದ್ದು ಪಾನ್‌ ಶಾಪ್‌ನಲ್ಲಿ ಮಾರುತ್ತಿದ್ದ ಮಹಿಳೆ ಅರೆಸ್ಟ್‌!

By Santosh Naik  |  First Published Dec 12, 2024, 2:05 PM IST

ಒಬ್ಬರೇ ಇಷ್ಟು ಸಾಮಗ್ರಿಗಳನ್ನ ಕದಿಯಲು ಸಾಧ್ಯವಿಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಈ ಕಳ್ಳತನದ ಹಿಂದೆ ಮತ್ತಷ್ಟು ಜನ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.


ಕಣ್ಣೂರು (ಡಿ.12): ನಿರ್ಮಾಣ ಹಂತದಲ್ಲಿದ್ದ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಕದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಪಾಚಿಯಮ್ಮ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ನಿರ್ಮಾಣ ಹಂತದ ಮನೆಯಲ್ಲಿನ ಸಿಸಿಟಿವಿ ಕ್ಯಾಮೆರಾ, ಎಲೆಕ್ಟ್ರಿಕ್‌ ಕೇಬಲ್‌ಗಳು, ಬಾತ್‌ರೂಮ್‌ ಫಿಟ್ಟಿಂಗ್‌ ಸೇರಿದಂತೆ ಹಲವು ವಸ್ತುಗಳನ್ನು ಈಕೆ ಕದ್ದಿದ್ದಾರೆ ಎನ್ನಲಾಗಿದೆ. ಕಳೆದ ಶನಿವಾರ ಸಂಜೆ ಕಳ್ಳತನ ನಡೆದಿದೆ. ಪಯ್ಯನ್ನೂರು ರೈಲ್ವೆ ನಿಲ್ದಾಣದ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪಾಚಿಯಮ್ಮ, ಕುತಿರುಮ್ಮಲದ ವಿನೀತ್ ಎಂಬುವವರ ನಿರ್ಮಾಣ ಹಂತದ ಮನೆಗೆ ಹೋಗಿ ಅಂದಾಜು 15 ಲಕ್ಷ ರೂಪಾಯಿ ಮೌಲ್ಯದ ನಿರ್ಮಾಣ ಸಾಮಗ್ರಿಗಳನ್ನು ಕದ್ದಿದ್ದಾರೆ.

Bengaluru : ಕರ್ನಾಟಕದಲ್ಲಿ ಗರಿಷ್ಠ ಆದಾಯ ತರುವ ಟೋಲ್‌ ಪ್ಲಾಜಾ ಇದು, ಒಂದೇ ವರ್ಷದಲ್ಲಿ 308 ಕೋಟಿ ಕಲೆಕ್ಷನ್‌!

Tap to resize

Latest Videos

ಕದ್ದ ಸಾಮಾನುಗಳ ಪೈಕಿ ಕೆಲವನ್ನು ಕಬ್ಬಿಣದ ಅಂಗಡಿಗೆ ಮಾರಿ ಹಣ ಪಡೆದು ಏನೂ ತಿಳಿಯದವರಂತೆ ವಾಪಸ್ಸಾಗಿದ್ದರು. ದೂರು ದಾಖಲಾದ ನಂತರ ಪಯ್ಯನ್ನೂರು ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪಾಚಿಯಮ್ಮಳನ್ನು ಪತ್ತೆ ಹಚ್ಚಲಾಗಿದೆ. ಕೆಲವು ಸಾಮಗ್ರಿಗಳನ್ನು ಸ್ಥಳೀಯ ಪಾನ್‌ಶಾಪ್‌ನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಕಳ್ಳತನದಲ್ಲಿ ಇನ್ನೂ ಹೆಚ್ಚಿನ ಜನರು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇಷ್ಟೊಂದು ಸಾಮಗ್ರಿಗಳನ್ನು ಒಬ್ಬರೇ ಕದಿಯಲು ಸಾಧ್ಯವಿಲ್ಲ ಎಂಬುದು ಪೊಲೀಸರ ಅಭಿಪ್ರಾಯ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್‌ಗೆ ಕಳುಹಿಸಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್-ರೋಸ್ನೆಫ್ಟ್ ಡೀಲ್‌: ರಷ್ಯಾದ ಜೊತೆ ಭಾರತದ ಅತಿದೊಡ್ಡ ತೈಲ ಪೂರೈಕೆ ಒಪ್ಪಂದ!

 

click me!