ಭಾರತವನ್ನು ಅವಮಾನಿಸುವ ಯತ್ನ; ಪ್ರತಿಪಕ್ಷದ ಪೆಗಾಸಸ್ ಆರೋಪಕ್ಕೆ ಅಮಿತ್ ಶಾ ತಿರುಗೇಟು!

By Suvarna News  |  First Published Jul 19, 2021, 8:04 PM IST
  • ಸಂಸತ್ತಿನಲ್ಲಿ ಭಾರಿ ಗದ್ದಲ ಎಬ್ಬಿಸಿದ ಪೆಗಾಸಸ್ ಸ್ಪೈವೇರ್ ಆರೋಪ
  • ಮೋದಿ ಸರ್ಕಾರ ಪೆಗಾಸಸ್ ಬಳಸಿ ನಾಯಕರು ಸೇರಿದಂತೆ ಹಲವರ ಡೇಟಾ ಕದಿಯುತ್ತಿದೆ ಆರೋಪ
  • ಮಾಧ್ಯಮ ವರದಿ ಆಧರಿಸಿ ಕಲಾಪದಲ್ಲಿ ಮುಗಿಬಿದ್ದ ಪ್ರತಿಪಕ್ಷ
  • ಪ್ರತಿಪಕ್ಷದ ರಣತಂತ್ರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು

ನವದೆಹಲಿ(ಜು.19): ಸಂಸತ್ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪೆಗಾಸಸ್ ಸ್ಪೈವೇರ್ ವರದಿ ಆಧರಿಸಿ ಮೋದಿ ಸರ್ಕಾರದ ಮೇಲೆ ಮುಗಿಬಿದ್ದಿದೆ. ಬಿಜೆಪಿ ಸರ್ಕಾರ ಪೆಗಾಸಸ್ ಸ್ಪೈವೇರ್ ಬಳಸಿ ನಾಯಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಫೋನ್ ಕಂಟ್ರೋಲ್ ಮಾಡುತ್ತಿದೆ. ಮಾಹಿತಿ ಕದಿಯುತ್ತಿದೆ ಎಂದು ಆರೋಪಿಸಿದೆ. ಇಂದು ಬೆಳಗ್ಗೆಯಿಂದ ಸದ್ದು ಮಾಡಿದ ಪೆಗಾಸಸ್ ಆರೋಪಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿರುಗೇಟು ನೀಡಿದ್ದಾರೆ. 

ಪೆಗಾಸಸ್ ವರದಿ ಭಾರತೀಯ ಪ್ರಜಾಪ್ರಭುತ್ವ ಕೆಣಕುವ ಪ್ರಯತ್ನ; IT ಸಚಿವ ಅಶ್ವಿನಿ ವೈಷ್ಣವ್!

ವಿಶ್ವಮಟ್ಟದಲ್ಲಿ ಭಾರತವನ್ನು ಅವಾಮಾನಿಸುವ, ಭಾರತದ ಅಭಿವೃದ್ಧಿಗೆ ಅಡ್ಡಿಪಡಿಸುವ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ. ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಭಾರತ ಕಲಾಪದ ಮೇಲೆ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಆದರೆ ಪ್ರತಿಪಕ್ಷ ಆಧಾರ ರಹಿತ ವರದಿ ಮುಂದಿಟ್ಟುಕೊಂಡು ಕಲಾಪವನ್ನೇ ಆಹುತಿ ಪಡೆದಿದೆ. ಜೊತೆಗೆ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನಿಸಲು ಪ್ರಯತ್ನಿಸುತ್ತಿದೆ.

Latest Videos

undefined

ನೀವು ಆರೋಪಗಳ ಸಮಯ ನೋಡಿ. ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ವರದಿ(ಪೆಗಾಸಸ್) ಹರಿಬಿಡಲಾಗಿದೆ. ಈ ವರದಿ ಮುಂದಿಟ್ಟುಕೊಂಡು ಸರ್ಕಾರವನ್ನು ಅಡ್ಡಿಪಡಿಸಲು ವಿರೋಧ ಪಕ್ಷ ಮುಂದಾಗಿದೆ. ಭಾರತ ಪ್ರಗತಿಯನ್ನು ಇಷ್ಟಪಡದ ಜಾಗತಿಕ ಸಂಸ್ಥೆಗಳು ಭಾರತದ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದೆ. ಇದನ್ನು ಕಣ್ಣುಮುಚ್ಚಿ ಪ್ರತಿಪಕ್ಷಗಳು ಬೆಂಬಲಿಸುತ್ತಿದೆ. ಭಾರತದ ಜನರು ಈ ಕಾಲಗಣನೆ ಮತ್ತು ಸಂಪರ್ಕವನ್ನು ಅರ್ಥಮಾಡಿಕೊಳ್ಳುವಲ್ಲಿ ತುಂಬಾ ಒಳ್ಳೆಯದು ಎಂದು ಅಮಿತ್ ಶಾ ಹೇಳಿದ್ದಾರೆ.

ಏನಿದು ಪೆಗಾಸಸ್ ಸ್ಪೈವೇರ್? ಹೇಗೆ ಫೋನ್‌ ಒಳಗೆ ನುಸುಳುತ್ತದೆ?: ತಜ್ಞರ ಉತ್ತರ

ಈ ಬಾರಿಯ ಮುಂಗಾರು ಅಧಿವೇಶನದಲ್ಲಿ  ರೈತರು, ಯುವಕರು, ಮಹಿಳೆಯರು ಮತ್ತು ಸಮಾಜದ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಪ್ರಮುಖ ಮಸೂದೆಗಳು ಮಂಡನೆಗೆ ಸಜ್ಜಾಗಿದೆ. ಈ ಕುರಿತು ಚರ್ಚೆ ಅವಶ್ಯಕವಾಗಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಕೂಡ ಸರ್ಕಾರ ಎಲ್ಲಾ ವಿಷಯ ಚರ್ಚಿಸಲು ಸಿದ್ಧವಾಗಿದೆ ಎಂದಿದ್ದಾರೆ. ಇಷ್ಟಾದರು ವಿರೋಧ ಪಕ್ಷಗಳು ಕೆಲ ಸತ್ಯಕ್ಕೆ ದೂರವಾದ ವರದಿಗಳನ್ನು ಮುಂದಿಟ್ಟು ಕಾಲಹರಣ ಮಾಡುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

Spyware Pegasus: 'ಟಾರ್ಗೆಟ್‌' ಪಟ್ಟಿಯಲ್ಲಿ ರಾಗಾ, ಪಿಕೆ, ಇಬ್ಬರು ಕೇಂದ್ರ ಸಚಿವರ ಹೆಸರು!

ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೊಸ ಮಂತ್ರಿಗಳ ಪರಿಚಯಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಈ ಘಟನೆಗೆ ಅಮಿತ್ ಶಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಮಹಿಳೆಯರು, SC, ST ಮತ್ತು OBC ಸದಸ್ಯರಿಗೆ ಒತ್ತು ನೀಡಿ ಮಂತ್ರಿ ಮಂಡಲವನ್ನು ವಿಸ್ತರಿಸಲಾಗಿತ್ತು. ಆದರೆ ಇದನ್ನು ಜೀರ್ಣಿಸಿಕೊಳ್ಳಲು ಹಲವರಿಗೆ ಸಾಧ್ಯವಾಗಿಲ್ಲ. ರಾಷ್ಟ್ರೀಯ ಪ್ರಗತಿಯ ಹಳಿ ತಪ್ಪಿಸಲು ಬಯಸುವವರು ಭಾರತವನ್ನು ಕತ್ತಲಲ್ಲಿ ಇಡಲು ಇಷ್ಟಪಡವವರ  ರಾಗಕ್ಕೆ ನೃತ್ಯ ಮಾಡುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

click me!