ಕಾವೇರಿಗಾಗಿ ಕರ್ನಾಟಕದಿಂದ ಮತ್ತೆ ಕಾನೂನು ಸಮರ.. ನೀರು ಕೊಡಲ್ಲ!

By Suvarna NewsFirst Published Jul 19, 2021, 7:29 PM IST
Highlights

* ತಮಿಳುನಾಡಿನಿಂದ ಕಾವೇರಿ ಹೆಚ್ಚುವರಿ ನೀರು ಬಳಕೆ
* ಸುಪ್ರೀಂ ಕೋರ್ಟ್ ಮೊರೆ ಹೋದ ರಾಜ್ಯ ಸರ್ಕಾರ
* ಅನುಮತಿ ನೀಡದಂತೆ ತಡೆ ಕೋರಿ ಮನವಿ
* ಕಾವೇರಿ-ಗುಂಡಾರ್ ಸಂಪರ್ಕ ಯೋಜನೆಗೆ ಮುಂದಾಗಿರುವ ತಮಿಳುನಾಡು

ಬೆಂಗಳೂರು(ಜು. 19)  ತಮಿಳುನಾಡು ವಿರುದ್ದ ಕರ್ನಾಟಕ ಕಾನೂನು ಸಮರಕ್ಕೆ ಇಳಿದಿದೆ. ಸುಪ್ರೀಂ ಕೋರ್ಟ್ ನಲ್ಲಿ  ಕರ್ನಾಟಕ ವಿಶೇಷ ಅರ್ಜಿ ದಾಖಲಿಸಿದೆ. 91 ಟಿಎಂಸಿ ಹೆಚ್ಚುವರಿ ಕಾವೇರಿ ನೀರು ತಮಿಳುನಾಡು ಬಳಕೆ ಮಾಡುತ್ತಿದೆ ಎಂದು ಹೇಳಿದೆ.

ಕಾವೇರಿ-ಗುಂಡಾರ್ ಸಂಪರ್ಕ ಯೋಜನೆ ಅಡಿ ತಮಿಳುನಾಡು ನೀರು ಬಳಕೆ ಮಾಡಲು ಹೊರಟಿದೆ. ಈ ಯೋಜನೆಗೆ ಹೆಚ್ಚುವರಿ 45 ಟಿಎಂಸಿ ಪೂರೈಕೆ ಮಾಡಲು ತಮಿಳುನಾಡು ಮುಂದಾಗಿದೆ. ಈ ಯೋಜನೆ ಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು  ಎಂದು ಕೇಳಿಕೊಳ್ಳಲಾಗಿದೆ.

ಮೇಕೆದಾಟು ಯೋಜನೆಗೆ ಮತ್ತೊಂದು ರಾಜ್ಯದಿಂದಲೂ ವಿರೋಧ

ಕಾವೇರಿ-ವೈಗೈ-ಗುಂಡಾರ್ ನದಿ ಕಾಲುವೆ ಸಂಪರ್ಕ ಯೋಜನೆ  ವಿರುದ್ಧ ಸುಪ್ರೀಂಕೋರ್ಟ್ ಗೆ ಕರ್ನಾಟಕ ಅರ್ಜಿ ಹಾಕಿದೆ.  ಕರ್ನಾಟಕ ಮೇಲ್ಭಾಗದ ರಾಜ್ಯವಾಗಿದ್ದು, ಹೆಚ್ಚುವರಿ ನೀರು ಬಳಸಿಕೊಳ್ಳುವ ಹಕ್ಕು ಹೊಂದಿದೆ. ತಮಿಳುನಾಡಿಗೆ ಸುಪ್ರೀಂಕೋರ್ಟ್ ಹಂಚಿಕೆ ಮಾಡಿರುವ ನೀರನ್ನು ಹರಿಸಿದ ಬಳಿಕ ಉಳಿದ ಹೆಚ್ಚುವರಿ ನೀರನ್ನು ಬಳಸಿಕೊಳ್ಳಬೇಕೆಂಬುದು ರಾಜ್ಯದ ಚಿಂತನೆಯಾಗಿದೆ.

ಆದರೆ ತಮಿಳುನಾಡಿನ ಹೊಸ ಯೋಜನೆಯಿಂದ ರಾಜ್ಯಕ್ಕೆ ನಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ತ.ನಾಡು ಹೊಸ ಯೋಜನೆಗೆ ಅನುಮತಿ ನೀಡಬಾರದು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಕೇಳಿಕೊಳ್ಳಲಾಗಿದೆ.

click me!