
ಶಿವಮೊಗ್ಗ: ದೀಪಾವಳಿ ಸಮಯದಲ್ಲಿ ಹಲವು ಕಡೆಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತದೆ. ಈ ಸಮಯದಲ್ಲಿ ಹೋರಿಯನ್ನು ಕೆರಳಿಸಿ ಯುವಕರು ಓಡುತ್ತಾರೆ. ಈ ವೇಳೆ ಓಡಿಸಿಕೊಂಡು ಬರುವ ಹೋರಿಯ ಎದುರು ಸಿಕ್ಕರೆ ಆತನ ಕತೆ ಫಿನಿಷ್. ರಾಜ್ಯದ ಹಲವೆಡೆ ನಡೆಯುವ ಈ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಈಗಾಗಲೇ ಹಾವೇರಿಯಲ್ಲಿ ಹೋರಿ ತಿವಿದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಮಾಜಿ ಶಾಸಕರೊಬ್ಬರಿಗೆ ಹೋರಿ ತುಳಿದು ಅವರನ್ನು ಮೇಲಿನಿಂದ ಎತ್ತಿ ಎಸೆದಿದ್ದು, ಅವರಿಗೆ ಗಾಯಗಳಾಗಿವೆ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗದಲ್ಲಿ ದೀಪಾವಳಿಯ ಸಂದರ್ಭದಲ್ಲಿ ಆಯೋಜಿಸಿದ್ದ ಸಂಪ್ರದಾಯಿಕ ಹೋರಿ ಹಬ್ಬದ ಆಚರಣೆ ವೇಳೆ ಈ ಘಟನೆ ನಡೆದಿದೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಶಿವಮೊಗ್ಗದ ಶಿಕಾರಿಪುರ ನಗರದ ಮಾಜಿ ಶಾಸಕ ಮಹಾಲಿಂಗಪ್ಪ ಅವರು ಮನೆಯೊಂದರ ಬಾಗಿಲಿನ ಮುಂದೆ ನಿಂತಿದ್ದ ವೇಳೆ ಈ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇದ್ದ ಹೋರಿಯೊಂದು ಬಂದು ಅವರನ್ನು ಕುತ್ತಿ ನೆಲಕ್ಕೆ ಕೆಡವಿ ಕೆಲ ಕ್ಷಣ ಅಲ್ಲಿ ನಿಂತು ಮುಂದೆ ಹೋಗಿದೆ. ವೈರಲ್ ಆದ ವೀಡಿಯೋದಲ್ಲಿ ಯುವಕರು, ಹುಡುಗರು ಹೋರಿಯ ಎದುರು ಬೊಬ್ಬಿಡುತ್ತಾ ಅದನ್ನು ಕೆರಳಿಸುತ್ತಾ ಓಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಎರಡು ದಿನಗಳ ಹಿಂದೆ ಶಿವಮೊಗ್ಗ ಬಳ್ಳಿಗಾವಿಯಲ್ಲಿ ನಡೆದ ಸಾಂಪ್ರಾದಾಯಿಕ ಗ್ರಾಮೀಣ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಈ ಅವಘಡ ಸಂಭವಿಸಿದೆ. ಸ್ಪರ್ಧೆಯನ್ನು ವೀಕ್ಷಿಸಲು ಹೋಗಿದ್ದ ಶಿಕಾರಿಪುರದ ಮಾಜಿ ಶಾಸಕ ಮಹಾಲಿಂಗಪ್ಪ ಅವರು ಮನೆಯೊಂದರ ಬಾಗಿಲ ಮುಂದೆ ಈ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡುತ್ತಾ ನಿಂತಿದ್ದಾಗ ಅಲ್ಲಿಗೆ ಬಂದ ಹೋರಿ, ಒಂದೆರಡು ಬಾರಿ ಮಹಾಲಿಂಗಪ್ಪ ಅವರನ್ನು ತಿವಿದು ಎತ್ತಿ ಕೆಳಗೆ ಹಾಕಿದೆ. ಘಟನೆಯಲ್ಲಿ ಮಹಾಲಿಂಗಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚೇತರಿಸಿಕೊಂಡಿದ್ದಾರೆ.
ಅಲ್ಲಿದ ಯುವಕರು ತಮ್ಮ ಫೋನ್‌ಗಳಲ್ಲಿ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಮನೆಯೊಂದರ ಬಾಗಿಲಲ್ಲಿ ನಿಂತಿದ್ದ ಮಹಾಲಿಂಗಪ್ಪ ಅವರಿಗೆ ಬಿಳಿ ಬೂದು ಬಣ್ಣದ ಹೋರಿ ಎರಡು ಬಾರಿ ಕೊಂಬಿನಿಂದ ತಿವಿದಿದ್ದೆ. ಈ ವೇಳೆ ಅವರು ಕೆಳಗೆ ಬಿದ್ದಿದ್ದು, ನಂತರ ಹೋರಿ ಅಲ್ಲಿಂದ ಬೇರೆಡೆಗೆ ಓಡಿದೆ. ಘಟನೆಯಲ್ಲಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಈ ಹೋರಿ ಬೆದರಿಸುವ ಸ್ಪರ್ಧೆ ಹಾವೇರಿ ಜಿಲ್ಲೆಯಲ್ಲಿ ಇನ್ನಷ್ಟು ಅದ್ದೂರಿಯಾಗಿ ನಡೆಯುತ್ತಿದೆ. ಆದರೆ ಈ ಬಾರಿ ಇಲ್ಲಿನ ಹಲವು ಭಾಗಗಳಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹಲವು ಕಡೆಗಳಲ್ಲಿ ದುರಂತ ಸಂಭವಿಸಿದ್ದು, ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಹೋರಿ ಮನೆಗೆ ನುಗ್ಗಿದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದಲ್ಲಿ ನಡೆದಿತ್ತು. ಹಾಗೆಯೇ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ನಡೆದ ಹೋರಿ ಹಬ್ಬ ನೋಡಲು ಹೋಗಿದ್ದಾಗ ಹೋರಿ ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ನಂತರ ಮೃತಪಟ್ಟಿದ್ದಾನೆ.
ಇದನ್ನೂ ಓದಿ: 19 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾದ ಬಸ್‌ನಲ್ಲಿತ್ತು 46 ಲಕ್ಷ ಮೌಲ್ಯದ 234 ಹೊಸ ಸ್ಮಾರ್ಟ್ ಫೋನ್
ಇದನ್ನೂ ಓದಿ: ಗಡಿ ಬಂದ್ ಮಾಡಿದ ಅಫ್ಘಾನಿಸ್ತಾನ: ಪಾಕಿಸ್ತಾನದಲ್ಲಿ ಗಗನಕ್ಕೇರಿದ ಅಗತ್ಯ ವಸ್ತುಗಳ ಬೆಲೆ ಟೊಮೆಟೋಗೆ ಕೇಜಿಗೆ 600
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ