ಅಟ್ಕಾನ, ಲಟ್ಕಾನ, ಭಟ್ಕಾನ ಕಾಲ ಮುಗಿತು, ಅರುಣಾಚಲ ಏರ್‌ಪೋರ್ಟ್ ಉದ್ಘಾಟಿಸಿ ಮೋದಿ ಭಾಷಣ!

By Suvarna NewsFirst Published Nov 19, 2022, 11:06 AM IST
Highlights

ಅರುಣಾಚಲ ಪ್ರದೇಶದಲ್ಲಿ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಬಿಜೆಪಿ ಸರ್ಕಾರ ಅಭಿವೃದ್ಧಿವೇಗ ಹಾಗೂ ಜನರಿಗೆ ಮೂಲಭೂತ ಸೌಕರ್ಯ ನೀಡುತ್ತಿರುವ ಪ್ರಯತ್ನದ ಕುರಿತು ಮಾತನಾಡಿದ್ದಾರೆ. ಈ ವೇಳೆ ಈ ಹಿಂದಿನ ಸರ್ಕಾರ ಶಿಲನ್ಯಾಸ ಮಾಡಿದರೆ ಅದು ಪೂರ್ಣಗೊಂಡ ಉದಾಹರೆ ಕಡಿಮೆ. ಆದರೆ ನಮ್ಮ ಸರ್ಕಾರ ಶಿಲನ್ಯಾಸ ನಾವೇ ಮಾಡುತ್ತೇವೆ, ಅವಧಿಯೊಳಗೆ ಉದ್ಘಾಟನೆಯನ್ನು ಮಾಡುತ್ತೇವೆ ಎಂದಿದ್ದಾರೆ. ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ.

ಅರುಣಾಚಲ ಪ್ರದೇಶ(ನ.19) ಶಿಲನ್ಯಾಸ ನಾವು ಮಾಡ್ತೇವೆ, ಉದ್ಘಾಟನೆಯನ್ನು ನಾವೇ ಮಾಡುತ್ತೇವೆ. ನಮ್ಮ ಯೋಜನೆಗಳ ಅನುಷ್ಠಾನದಲ್ಲಿ ಅಡೆ ತಡೆ ಇಲ್ಲ. ತ್ವರಿತಗತಿಯಲ್ಲಿ ಕೆಲಸವನ್ನು ಮಾಡಿ ಪೂರ್ಣಗೊಳಿಸುತ್ತೇವೆ. ನಾವೇ ಉದ್ಘಾಟನೆ ಮಾಡಿ ಜನರಿಗೆ ಮುಕ್ತ ಮಾಡುತ್ತೇವೆ ಇದು ನಮ್ಮ ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ತೋರುತ್ತಿರುವ ಶ್ರದ್ಧೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಪೀಲ್ಡ್ ವಿಮಾನ ನಿಲ್ದಾಣ ಡೋನಿ ಪೋಲೋ ಏರ್‌ಪೋರ್ಟ್ ಉದ್ಘಾಟನೆ ಮಾಡಿದ ಬಳಿಕ ಆಯೋಜಿಸದ ಸಭೆಯನ್ನುದ್ದೇಶಿ ಮಾತನಾಡಿದರು. ಈ ಹಿಂದಿನ ಸರ್ಕಾರ ಮೀನಾಮೇಷ ಎಣಿಸಿ ಯೋಜನೆಗೆ ಶಿಲನ್ಯಾಸ ಮಾಡುತ್ತಿತ್ತು. ಬಳಿಕ ಯೋಜನೆ ನೆನೆಗುದಿಗೆ ಬೀಳುತ್ತಿತ್ತು. ಉದ್ಘಾಟನೆ ಮಾತು ಬದಿಗಿರಲಿ, ಯೋಜನೆ ಪೂರ್ಣಗೊಳ್ಳುತ್ತಿರಲಿಲ್ಲ. ಬಳಿಕ ಯೋಜನೆಗಳ ಹಾಗೇ ರದ್ದಾಗುತ್ತಿತ್ತು ಎಂದು ಪ್ರಧಾನಿ ಕಾಂಗ್ರೆಸ್ ಸರ್ಕಾರದ ಹೆಸರತ್ತದೆ ಟೀಕಿಸಿದರು. 2019ರ ಚುನಾವಣೆಗೂ ಮೊದಲು ಅರುಣಾಚಲ ಪ್ರದೇಶದ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಚುನಾವಣೆ ಗಿಮಿಕ್ ಎಂದು ಟೀಕಿಸಿದ್ದರು. ಇದೀಗ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ ಎಂದರು.

ಆದರೆ ಕೆಲವರಿಗೆ ಅಭಿವೃದ್ಧಿ ಅಂದರೆ ಅಲರ್ಜಿ. ಹೀಗಾಗಿ ವಿಮಾನ ನಿಲ್ದಾಣ ಉದ್ಘಾಟನೆ ಎಂದಾಗ ಇದು ಚುನಾವಣೆ ಗಿಮಿಕ್ ಎನ್ನುತ್ತಿದ್ದಾರೆ. ನಾವು ಯೋಜನೆಗಳಿಗೆ ಚಾಲನೆ ನೀಡುತ್ತಿದ್ದೇವೆ. ಅದರ ಕಾರ್ಯಗಳು ಯಾವ ರೀತಿ ನಡೆಯುತ್ತಿದೆ ಅನ್ನೋದನ್ನು ನಿರಂತವಾಗಿ ಗಮನಿಸಿ ಸಲಹೆಗಳನ್ನು ನೀಡುತ್ತೇವವೆ. ಬಳಿಕ ಉದ್ಘಾಟನೆ ಮೂಲಕ ಸಾರ್ವನಿಕರಿಗೆ ಮುಕ್ತ ಮಾಡುತ್ತಿದ್ದೇವೆ. ಇಂದು ಇಲ್ಲಿನ ಕಾರ್ಯಕ್ರಮ ಮುಗಿಸಿ ವಾರಾಣಿಸಿಗೆ ತೆರಳುತ್ತೇನೆ. ಅಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ಹೀಗೆ ಹಲವು ಕಾರ್ಯಕ್ರಮಗಳ ಜೊತೆ ಮುನ್ನಡೆಯುತ್ತಿದ್ದೇವೆ. ಇದಕ್ಕೆ ಪ್ರೇರಣೆ ನನ್ನ ದೇಶ ಹಾಗೂ ಜನ. ನನ್ನ ದೇಶ ಅತೀ ವೇಗದಲ್ಲಿ ಅಭಿವೃದ್ಧಿಯಾಗಬೇಕು ಅನ್ನೋ ಕನಸಿನೊಂದಿಗೆ ನಿರಂತರ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

 

ಸಂಜೆ ಪ್ರಧಾನಿ ಮೋದಿ ಗುಜರಾತ್ ಭೇಟಿ, ಬಿಜೆಪಿ ಬೃಹತ್ ರ‍್ಯಾಲಿಯಲ್ಲಿ ಭಾಷಣ!

ದೆಹಲಿಯಲ್ಲಿ ಕುಳಿತು ಪಾಲಿಸಿ ಮಾಡುವವರು, ಅಭಿವೃದ್ಧಿ ಬದಲು ಚುನಾವಣೆ ಗೆಲ್ಲುವುದು ಹೇಗೆ ಅನ್ನೋದನ್ನು ಮಾತ್ರ ಯೋಚಿಸುತ್ತಿದ್ದರು. ಆದರೆ ಅಟಲ್ ಬಿಹಾರ್ ವಾಜಪೇಯಿ ದೇಶದ ಅಭಿವೃದ್ಧಿಗೆ ನಾಂದಿ ಹಾಡಿದರು. ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದರು. ಆದರೆ ನಂತ್ರ ಬಂದ ಸರ್ಕಾರ ಅದನ್ನು ಮುಂದುವರಿಸಲಿಲ್ಲ. 2014ರಲ್ಲಿ ನಮಗೆ ಮತ್ತೆ ಅಧಿಕಾರ ನೀಡಿದ್ದೀರಿ. ಇದರಿಂದ ಅಭಿವೃದ್ಧಿ ಯಾವ ಪಥದಲ್ಲಿ ಸಾಗುತ್ತಿದೆ ಅನ್ನೋದನ್ನು ನೀವು ಗಮನಿಸುತ್ತಿದ್ದೀರಿ ಎಂದು ಮೋದಿ ಹೇಳಿದ್ದಾರೆ.

ಟೆಲಿಕಾಂ, ಟೆಕ್ಸ್‌ಟೈಲ್, ವಿಮಾನ, ಹೈಡ್ರೋ ಪ್ರಾಜೆಕ್ಟ್ ಯಾವುದೇ ಕ್ಷೇತ್ರವಾಗಿರಲಿ. ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ. ಡ್ರೋನ್ ತಂತ್ರಜ್ಞಾನದಿಂದ ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿ, ವಿಮಾನ ನಿಲ್ದಾಣದ ಮೂಲಕ ದೇಶದ ಅಂಚಿನ ಗ್ರಾಮಕ್ಕೆ ಸಂಪರ್ಕ ಎಲ್ಲವೂ ಈಗ ಸಾಧ್ಯ ಎಂದು ಮೋದಿ ಹೇಳಿದ್ದಾರೆ. 

ಅರುಣಾಚಲದ ಮೊದಲ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣದಲ್ಲಿದೆ ಹಲವು ವಿಶೇಷತೆ!

ಈ ಹಿಂದಿನ ಸರ್ಕಾರ ಅರುಣಾಚಲ ಪ್ರದೇಶದ ಅಭಿವೃದ್ಧಿಗೆ ಯಾವುದೇ ಪ್ರಯತ್ನ ಮಾಡಲಿಲ್ಲ. ಕಾರಣ ದೆಹಲಿಯಿಂದ ದೂರದಲ್ಲಿರುವ ಅರುಣಾಚಲ ಪ್ರದೇಶ ಅವರಿಗೆ ಬೇಕಾಗಿರಲಿಲ್ಲ. ಮತದ ದೃಷ್ಟಿಯಿಂದ ಅರುಣಾಚಲ ಈ ಹಿಂದಿನ ಸರ್ಕಾರಕ್ಕೆ ಯಾವುದೇ ಮಹತ್ವದ ರಾಜ್ಯವಾಗಿರಲಿಲ್ಲ. ಇಷ್ಟೇ ಅಲ್ಲ ಅರಣಾಚಲ ಚೀನಾ ಜೊತೆ ಗಡಿ ಹಂಚಿಕೊಂಡ ರಾಜ್ಯವಾಗಿದೆ. ಹೀಗಾಗಿ ಸಹವಾಸವೇ ಬೇಡ ಎಂದು ಸುಮ್ಮನಾಗಿತ್ತು. ಆದರೆ ನಮ್ಮ ಸರ್ಕಾರ ಗಡಿ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುತ್ತಿದೆ. ಬಾರ್ಡರ್ ರಸ್ತೆ ಕಾಮಾಗರಿಗಳು ತ್ವರಿತಗತಿಯಲ್ಲಿ ನಡೆಯುತ್ತದೆ ಎಂದರು.

ಡೋನಿ ಪೋಲೋ ವಿಮಾನ ನಿಲ್ದಾಣ ಅರುಣಚಾಲ ಪ್ರದೇಶದ ಮೊದಲ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವಾಗಿದೆ. ಕಳೆದ 70 ವರ್ಷದಲ್ಲಿ ಈಶಾನ್ಯ ರಾಜ್ಯದಲ್ಲಿ ಕೇವಲ 9 ವಿಮಾನ ನಿಲ್ದಾಣಗಳನ್ನು ಅಭಿವೃದ್ದಿ ಮಾಡಲಾಗಿದೆ. ಇದೀಗ 2014ರ ಬಳಿಕ ಈಶಾನ್ಯ ರಾಜ್ಯದ ವಿಮಾನ ನಿಲ್ದಾಣದ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಇದು ಅಭಿವೃದ್ಧಿ ಎಂದು ಮೋದಿ ಹೇಳಿದ್ದಾರೆ.

ಅರುಣಾಚಲ ಪ್ರದೇಶ ಬೆಟ್ಟ ಗುಡ್ಡಗಳ ಪ್ರದೇಶ. ಅತೀ ಸುಂದರ ತಾಣ. ಇಲ್ಲಿನ ಸಂಪರ್ಕ ಸುಲಭಗೊಳಿಸುವ ಮೂಲಕ ಆರ್ಥಿಕವಾಗಿ, ವಾಣಿಜ್ಯವಾಗಿ, ಸಾಮಾಜಿಕವಾಗಿ ಅರುಣಾಚಲ ಪ್ರದೇಶ ಅಭಿವೃದ್ಧಿಯಾಗಲಿದೆ. ವಿಮಾ ನಿಲ್ದಾಣದ ಜೊತೆಗೆ ರಸ್ತೆ ಸಂಪರ್ಕ ಕೂಡ ತ್ವರಿತಗತಿಯಲ್ಲಿ ನಡೆಯುತ್ತದೆ. ಇದರಿಂದ ಅರುಣಾಚಲ ಪ್ರದೇಶದ ಜನರ ಸಂಪರ್ಕ ಸಾರಿಗೆ ಸುಲಭವಾಗಲಿದೆ.

ಬಿದಿರಿನ ಉತ್ಪನ್ನ ಅರುಣಾಚಲ ಪ್ರದೇಶದ ಪ್ರಮುಖ ಉತ್ಪನ್ನ ಹಾಗೂ ಇಲ್ಲಿನ ಸಂಸ್ಕೃತಿಯಲ್ಲಿ ಮಿಳಿತಗೊಂಡಿದೆ. ಆದರೆ ಈ ಹಿಂದಿನ ಸರ್ಕಾರ ಬಿದಿರು ಕಡಿಯಲು ನಿಷೇಧ ಹೇರಲಾಗಿತ್ತು. ಆದರೆ ನಮ್ಮ ಸರ್ಕಾರ ಬಿದಿರಿನ ಮೇಲಿದ್ದ ನಿಷೇಧ ಹಿಂಪಡೆದು ತಿದ್ದುಪಡಿ ಮಾಡಲಾಗಿದೆ. ಇದೀಗ ಅರುಣಾಚಲ ಪ್ರದೇಶದ ಕುಸರಿನ ಕೆಲಸ, ಬಿದಿರಿನ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡಲಾಗಿದೆ. ಇದರಿಂದ ಅಲ್ಲಿನ ಬಿದಿರಿನ ಉತ್ಪನ್ನಗಳು ವಿಶ್ವದಲ್ಲೇ ಅತ್ಯಂತ ಬೇಡಿಕೆ ಉತ್ಪವನ್ನವಾಗಿದೆ. ಇದರಿಂದ ಅರುಣಾಚಲ ಪ್ರದೇಶ ಇತರ ದೇಶದದೊಂದಿದೆ ಇದೀಗ ವ್ಯವಹಾ ನಡೆಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

click me!