ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಫ್ರಾನ್ಸ್ ಬೆಂಬಲ!

By Suvarna NewsFirst Published Nov 19, 2022, 10:32 AM IST
Highlights

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಸಿಗುವ ಕಾಲ ಹತ್ತಿರವಾಗುತ್ತಿದೆ. ಭಾರತದ ಸತತ ಪ್ರಯತ್ನಗಳ ಬಳಿಕ ಹಲವು ದೇಶಗಳು ಬೆಂಬಲ ವ್ಯಕ್ತಪಡಿಸಿದೆ. ಇದೀಗ ಫ್ರಾನ್ಸ್ ಬೆಂಬಲ ಸೂಚಿಸುವ ಮೂಲಕ ಭಾರತದ ಅಡೆತಡೆಯೊಂದು ದೂರವಾಗಿದೆ.

ನವದೆಹಲಿ(ನ.19): ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಭಾರತದ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಕುರಿತು ವಿಶೇಷ ಒತ್ತು ನೀಡಿದ್ದಾರೆ. ಇದರ ಪರಿಣಾಮ ಈಗಾಗಲೇ ಹಲವು ದೇಶಗಳು ಭಾರತಕ್ಕೆ ಖಾಯಂ ಸದಸ್ಯತ್ವ ನೀಡಲು ಒಪ್ಪಿಗೆ ಸೂಚಿಸಿದೆ. ಇದೀಗ ಫ್ರಾನ್ಸ್ ಕೂಡ ಬೆಂಬಲ ಸೂಚಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಪ್ರಸಕ್ತ ಎದುರಿಸುತ್ತಿರುವ ಸವಾಲುಗಳಿಗೆ ಸಮರ್ಪಕ ಉತ್ತರ ನೀಡಲು ಭದ್ರತಾ ಮಂಡಳಿಯನ್ನು ವಿಸ್ತರಿಸುವ ಅಗತ್ಯವಿದೆ. ಹೀಗಾಗಿ ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ನೀಡಬೇಕು ಎಂದು  ಧ್ವನಿಮತದ ಮೂಲಕ ವಿಶ್ವಸಂಸ್ಥೆಯ ಫ್ರಾನ್ಸ್ ಖಾಯಂ ಪ್ರತಿನಿಧಿ ನಥಲೈಬ್ರಾದ್ರಸ್ಟ್ ಹೇಳಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸೂಕ್ತ ಪ್ರತಿನಿಧಿಗಳು ಇರಬೇಕು. ಇದಕ್ಕೆ ಭಾರತ ಅರ್ಹವಾಗಿದೆ ಎಂದು ಬ್ರಾದ್ರಸ್ಟ್ ಹೇಳಿದ್ದಾರೆ. ಇದೇ ವೇಳೆ ಜರ್ಮನಿ, ಜಪಾನ್ ಹಾಗೂ ಬ್ರೆಜಿಲ್‌ಗೂ ಖಾಯಂ ಸದಸ್ಯತ್ವ ನೀಡಬೇಕು ಎಂದು ಫ್ರಾನ್ಸ್ ಹೇಳಿದೆ.

ವಿಶ್ವಂಸ್ಥೆ ಸಾಮಾನ್ಯ ಸಭೆಯಲ್ಲಿ(United Nations general assembly) ಮಾತನಾಡಿದ ಬ್ರಾದ್ರಸ್ಟ್, ಭಾರತ ಸೇರಿದಂತೆ ಇತರ ಕೆಲ ರಾಷ್ಟ್ರಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ(United Nations Security Council ) ಸದಸ್ಯತ್ವಕ್ಕೆ ಸೇರ್ಪಡೆಗೊಳಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಭದ್ರತಾ ಮಂಡಳಿ ಪ್ರಸಕ್ತ ಸವಾಲುಗಳಿಗೆ ಸೂಕ್ತ ಪರಿಹಾರ ಒದಗಿಸಲು ಪ್ರಮುಖ ರಾಷ್ಟ್ರಗಳ ಸಲಹೆ ಹಾಗೂ ಅನುಭವಗಳು ಅತೀ ಮುಖ್ಯವಾಗಿದೆ. ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಇದರ ಜೊತೆ ಅಷ್ಟೇ ಪ್ರಬಲ ಸಂಸ್ಥೆಯಾಗಬೇಕು ಎಂದು ಬ್ರಾದ್ರಸ್ಟ್(Nathalie Broadhurst) ಹೇಳಿದ್ದಾರೆ.

'ಯೋಗ್ಯ ಅಭ್ಯರ್ಥಿ': ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸ್ಥಾನಕ್ಕೆ ಭಾರತವನ್ನು ಬೆಂಬಲಿಸಿದ ರಷ್ಯಾ!

ವಿಶ್ವಸಂಸ್ಥೆಯ ಕಾರ್ಯಗಳು, ಕಾರ್ಯವ್ಯಾಪ್ತಿ, ಪರಿಹಾರಕ್ಕೆ ಸುಲಭ ಮಾರ್ಗಗಳ ಹುಡುಕಲು ಭದ್ರತಾ ಮಂಡಳಿಯಲ್ಲಿ ಕನಿಷ್ಠ 25 ಖಾಯಂ ಪ್ರತಿನಿಧಿಗಳು ಇರಬೇಕು ಎಂದು ಬ್ರಾದ್ರಸ್ಟ್ ಹೇಳಿದ್ದಾರೆ. ಆರಂಭಿಕ ಹಂತದಲ್ಲಿ ಭಾರತ, ಜರ್ಮನಿ, ಜಪಾನ್ ಹಾಗೂ ಬ್ರೆಜಿ ದೇಶಕ್ಕೆ ಖಾಯಂ ಸದಸ್ಯತ್ವ(UNSC permanent membership) ನೀಡಬೇಕು. ಈ ಸಾಲಿನಲ್ಲಿ ಆಫ್ರಿಕಾ ದೇಶಗಳನ್ನು ಮನವಿ ಸಲ್ಲಿಸಿದೆ. ಹೀಗಾಗಿ ಎರಡನೇ ಹಂತದಲ್ಲಿ ಆಫ್ರಿಕಾ ಹಾಗೂ ಇತರ ದೇಶಗಳ ಸೇರ್ಪಡೆ ಕುರಿತು ಚರ್ಚೆ ನಡಸಬೇಕು ಎಂದು ಫ್ರಾನ್ಸ್ ಹೇಳಿದೆ.

ಯುನೈಟೆಡ್ ಕಿಂಗ್ಡಮ್ ಕೂಡ ಧ್ವನಿಮತದ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಿದೆ. ಇತ್ತೀಚೆಗೆ ರಷ್ಯಾ ಕೂಡ ಭಾರತದ ಖಾಯಂ ಸದಸ್ಯತ್ವಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು. 77ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೇ ಲ್ಯಾವ್ರೋವ್‌, ‘ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಗಳು ಸಮಕಾಲೀನ ವಾಸ್ತವತೆಯೊಂದಿಗೆ ಹೊಂದಾಣಿಕೆಯಾಗಬೇಕು. ಹಾಲಿ 5 ದೇಶಗಳಿಗೆ ಇರುವ ಕಾಯಂ ಸದಸ್ಯತ್ವವನ್ನು ವಿಸ್ತರಿಸಬೇಕು. ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್‌ ಅಮೆರಿಕ ದೇಶಗಳಿಗೆ ಸ್ಥಾನ ಕಲ್ಪಿಸುವ ಮೂಲಕ ಮಂಡಳಿಯನ್ನು ಇನ್ನಷ್ಟುಪ್ರಜಾಪ್ರಭುತ್ವ ಹೊಂದಿರುವಂತೆ ಮತ್ತು ಇನ್ನಷ್ಟುಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದ್ದರು. 

EAM visit Saudi "ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಭಾರತ ಅರ್ಹ"

ಹಾಲಿ, ಭದ್ರತಾ ಮಂಡಳಿಯಲ್ಲಿ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್‌ ಮತ್ತು ಬ್ರಿಟನ್‌ ದೇಶಗಳು ಕಾಯಂ ಸದಸ್ಯತ್ವ ಹೊಂದಿವೆ. ಇವುಗಳಿಗೆ ವಿಶೇಷ ವೀಟೋ ಅಧಿಕಾರವಿದೆ. ಅಂದರೆ ಯಾವುದೇ ಪ್ರಸ್ತಾಪವನ್ನು ತಡೆಯುವ ವಿಶೇಷ ಅಧಿಕಾರವಿದೆ.
 

click me!