Data Protection Bill: ದತ್ತಾಂಶ ಸೋರಿಕೆ ಆದರೆ 500 ಕೋಟಿ ರೂ. ದಂಡ..!

By Kannadaprabha News  |  First Published Nov 19, 2022, 8:18 AM IST

ದತ್ತಾಂಶ ರಕ್ಷಣೆ ಮಾಡದಿದ್ರೆ 500 ಕೋಟಿ ರೂ. ದಂಡ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಅಲ್ಲದೆ, ಗಡಿಯಾಚೆ ದತ್ತಾಂಶ ವರ್ಗಾವಣೆ, ಸಂಗ್ರಹಕ್ಕೆ ಅಸ್ತು ನೀಡಿದೆ. ದತ್ತಾಂಶ ರಕ್ಷಣಾ ಮಸೂದೆಯಲ್ಲಿ ಈ ಮಹತ್ವದ ಅಂಶವಿದೆ. 


ನವದೆಹಲಿ: ಕೇಂದ್ರ ಸರ್ಕಾರ (Central Government) ಜಾರಿಗೆ ತರಲು ಉದ್ದೇಶಿಸಿರುವ ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ-2022ರ (Digital Personal Protection Bill - 2022) ಕರಡಿನಲ್ಲಿ (Draft) ಕೊಂಚ ಬದಲಾವಣೆ ಮಾಡಿದೆ. ದತ್ತಾಂಶ ರಕ್ಷಣೆಯಲ್ಲಿ (Data Protection) ವಿಫಲದಾದವರಿಗೆ 500 ಕೋಟಿ ರೂ. ದಂಡ ವಿಧಿಸಲು ಉದ್ದೇಶಿಸಲಾಗಿದೆ. ಜೊತೆಗೆ ಜಾಗತಿಕ ಟೆಕ್‌ ಕಂಪನಿಗಳಿಗೆ (Global Tech Companies) ಭಾರತದ ಹೊರತಾಗಿ ಬೇರೆ ಆಯ್ದ ಕೆಲವು ರಾಷ್ಟ್ರಗಳಲ್ಲಿ ದತ್ತಾಂಶಗಳ ವರ್ಗಾವಣೆ ಹಾಗೂ ಸಂಗ್ರಹಕ್ಕೂ ಅನುಮತಿ ನೀಡಿದೆ.
2019ರಲ್ಲಿ ಸಿದ್ಧಪಡಿಸಲಾದ ಕರಡು ಮಸೂದೆಯಲ್ಲಿ ಬೃಹತ್‌ ಟೆಕ್‌ ಕಂಪನಿಗಳಿಗೆ ದೇಶದ ನಾಗರಿಕರ ವೈಯಕ್ತಿಕ ದತ್ತಾಂಶಗಳನ್ನು ಗಡಿಯಾಚೆಗೆ ವರ್ಗಾಯಿಸದೇ, ದೇಶದಲ್ಲೇ ಅದನ್ನು ಸಂಗ್ರಹಿಸಬೇಕು ಎಂದು ಸೂಚಿಸಲಾಗಿತ್ತು. ಇದಕ್ಕೆ ಗೂಗಲ್‌ (Google), ಅಮೆಜಾನ್‌ (Amazon), ಫೇಸ್‌ಬುಕ್‌ನಂತಹ (Facebook) ಜಾಗತಿಕ ಕಂಪನಿಗಳು ಕಳವಳ ವ್ಯಕ್ತಪಡಿಸಿದ ಬಳಿಕ ಸರ್ಕಾರ ಇತ್ತೀಚೆಗೆ ಕರಡು ಮಸೂದೆಯನ್ನು ಪಡೆದಿತ್ತು. ಈಗ ಮಸೂದೆಯ ಪರಿಷ್ಕೃತ ಕರಡು ಸಿದ್ಧವಾಗಿದ್ದು, ಡಿಸೆಂಬರ್‌ 17ರಿಂದ ಸಾರ್ವಜನಿಕರ ಆಕ್ಷೇಪಣೆಗಳು ಹಾಗೂ ವಿಮರ್ಶೆಗೆ ಆಹ್ವಾನಿಸಲಾಗುತ್ತದೆ. ಜನರು ನೀಡುವ ಅಭಿಪ್ರಾಯ ಆಧರಿಸಿ ಅಂತಿಮ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಇದೇ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಮಸೂದೆ ಪ್ರಕಾರ, ನಾಗರಿಕರ ದತ್ತಾಂಶಗಳನ್ನು (ಆಧಾರ್‌ ಸಂಖ್ಯೆ, ನೊಬೈಲ್‌ ನಂಬರ್‌, ಬ್ಯಾಂಕ್‌ ಖಾತೆ ವಿವರ ಇತ್ಯಾದಿ) ಹೊಂದಿರುವ ಕಂಪನಿಗಳು, ಆ ದತ್ತಾಂಶಗಳು ಅನ್ಯರಿಗೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅವರನ್ನು ಸೋರಿಕೆ ಮಾಡಿದರೆ ಅಥವಾ ದುರ್ಬಳಕೆ ಮಾಡಿಕೊಂಡರೆ ಅಪರಾಧವಾಗಲಿದೆ.

Tap to resize

Latest Videos

undefined

ಇದನ್ನು ಓದಿ: Data Center ಹೊಸ ಡಾಟಾ ಸೆಂಟರ್‌ ನೀತಿಗೆ ಅಸ್ತು, ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ!

15 ಕೋಟಿಯಿಂದ 500 ಕೋಟಿಗೆ ಏರಿಕೆ:
ಈ ಹಿಂದೆ 2019ರಲ್ಲಿ ದತ್ತಾಂಶ ರಕ್ಷಣಾ ಮಸೂದೆಯ ಕರಡು ರೂಪಿಸಲಾಗಿತ್ತು. ಅದರಲ್ಲಿ ದತ್ತಾಂಶ ಸೋರಿಕೆ ಮಾಡಿದವರಿಗೆ 15 ಕೋಟಿ ರೂ. ದಂಡ ಅಥವಾ ಆ ಕಂಪನಿಯ ಜಾಗತಿಕ ವ್ಯವಹಾರದ 4 ಪಟ್ಟು ದಂಡ ವಿಧಿಸಲು ಉದ್ದೇಶಿಸಲಾಗಿತ್ತು. ಅದನ್ನು ಈಗ 500 ಕೋಟಿ ರೂ. ಗೆ ಹೆಚ್ಚಿಸಲಾಗಿದೆ.

‘ಭಾರತೀಯ ದ್ತತಾಂಶ ರಕ್ಷಣಾ ಮಂಡಳಿ’ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶವನ್ನು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಈ ಮಂಡಳಿಯು ದತ್ತಾಂಶ ನಿರ್ವಹಣೆಯಲ್ಲಿ ವಿಫಲನಾದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವ ಹಾಗೂ 500 ಕೋಟಿ ರೂ. ವರೆಗೆ ದಂಡ ವಿಧಿಸುವ ಅಧಿಕಾರ ಹೊಂದಿರುತ್ತದೆ. ಹಂತ ಹಂತವಾಗಿ ದಂಡ ವಿಧಿಸುವ ಅವಕಾಶವನ್ನೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: Data Protection Bill| ನಾಗರಿಕರಿಗೆ ಸಿಗಲಿದೆ ದತ್ತಾಂಶ ದುರ್ಬಳಕೆಯಿಂದ ರಕ್ಷಣೆ, ತಪ್ಪಿದರೆ ಭಾರೀ ದಂಡ!

ಕೆಲ ರಾಷ್ಟ್ರಗಳಲ್ಲಿ ದತ್ತಾಂಶ ಸಂಗ್ರಹಕ್ಕೆ ಅಸ್ತು:
ಐಟಿ ಹಾಗೂ ಟೆಕ್‌ ಸ್ನೇಹಿಯಾಗುವ ನಿಟ್ಟಿನಲ್ಲಿ ಗಡಿಯಾಚೆಗೂ ದತ್ತಾಂಶದ ಹರಿವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲ ರಾಷ್ಟ್ರಗಳಲ್ಲಿ ದತ್ತಾಂಶಗಳ ವರ್ಗಾವಣೆ ಹಾಗೂ ಸಂಗ್ರಹಣೆಗೆ ಅವಕಾಶ ನೀಡಿದೆ. ಈ ರಾಷ್ಟ್ರಗಳ ಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಆದರೆ ಇದರೊಂದಿಗೆ ನಿಗದಿತ ಸಮಯದವರೆಗೆ ಮಾತ್ರ ಕಂಪನಿಗಳು ದತ್ತಾಂಶವನ್ನು ಸಂಗ್ರಹಿಸಬಹುದು ಎಂದು ಮಸೂದೆ ತಿಳಿಸಿದೆ. ಇದು ಜಾಗತಿಕ ಟೆಕ್‌ ಕಂಪನಿಗಳಿಗೆ ನಿರಾಳತೆ ತಂದಿದೆ.

click me!