
ಬಾಲ್ಯದಲ್ಲಿ ಪುಟ್ಟ ಮಕ್ಕಳಿಗೆ ತಿನ್ನುವುದರ ಮೇಲೆ ಭಾರಿ ಆಸೆ ಇರುತ್ತದೆ. ತಮ್ಮಿಷ್ಟದ ತಿನಿಸನ್ನು ಎಷ್ಟು ತಿಂದರೂ ಸಾಕಾಗದು ಎಂಬಷ್ಟು ವ್ಯಾಮೋಹ ಬಾಲ್ಯದಲ್ಲಿ ಇರುತ್ತದೆ. ತಿನ್ನುವ ಆಸೆಗೆ ಬಿದ್ದು ಮಕ್ಕಳು ಏನೇನೋ ಅನಾಹುತ ಮಾಡಿಕೊಂಡಿದ್ದಾರೆ. ಕೆಲವು ದುರುಳರು ಪುಟ್ಟ ಮಕ್ಕಳ ಈ ಆಸೆಯ ಸ್ವಭಾವವನ್ನೇ ಬಳಸಿಕೊಂಡು ಅವರಿಗೆ ಅದಿದು ಕೊಡಿಸುವುದಾಗಿ ಕರೆಸಿಕೊಂಡು ಹೋಗಿ ಏನೇನೋ ಮಾಡಬಾರದ್ದನ್ನು ಮಾಡಿದಂತಹ ಘಟನೆಗಳು ನಡೆದಿವೆ. ಹಾಗೆಯೇ ತಿನ್ನುವ ಆಸೆಗೆ ಬಿದ್ದ ಬಾಲಕನೋರ್ವ ಮನೆಯಲ್ಲಿ 85 ಲಕ್ಷ ಮೌಲ್ಯದ ಚಿನ್ನಾಭರಣವನ್ನೇ ತನಗೆ ಆಹಾರ ನೀಡುವ ಬೀದಿ ವ್ಯಾಪಾರಿಯೊಬ್ಬನಿಗೆ ನೀಡಿದ್ದಾರೆ. ಉತ್ತರ ಪ್ರದೇಶದ ದಿಯೋರಿಯಾದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಬಾಲಕನ ಪೋಷಕರು ಈಗ ಪೊಲೀಸರಿಗೆ ದೂರು ನೀಡಿದ್ದಾರೆ.
ಹೌದು 7ನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಬಾಲಕನ ಮೊಮೊಸ್ ತಿನ್ನುವ ಆಸೆಯೊಂದು ಕುಟುಂಬವನ್ನೇ ಬೀದಿಗೆ ತಂದಿದೆ. ಬಾಲ್ಯದ ಈ ಏನನ್ನು ಕಂಡರೂ ತಿನ್ನಬೇಕು ಎನ್ನುವ ಬಾಲಕನ ಆಸೆ ಕುಟುಂಬದ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ಸ್ಥಳೀಯವಾಗಿ ಮೊಮೊಸ್ ಮಾರುತ್ತಿದ್ದ ಮೂವರು ಪುರುಷರು ಈ ಬಾಲಕನಿಗೆ ಮೊದಲಿಗೆ ಉಚಿತವಾಗಿ ಮೊಮೊಸ್ ನೀಡುವುದಕ್ಕೆ ಶುರು ಮಾಡಿದ್ದಾರೆ ನಂತರ ಅಂತಿಮವಾಗಿ ಅದಕ್ಕೆ ಪ್ರತಿಯಾಗಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಆತ ತರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಲಕನ ತಂದೆ ವಿಮಲೇಶ್ ಮಿಶ್ರಾ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ದೇಗುಲವೊಂದರಲ್ಲಿ ಪುರುಹೀತರಾಗಿರುವ ಮಿಶ್ರಾ ಅವರು ತನ್ನ ಮಗನಿಗೆ ಮೊಮೊಸ್ ಬಹಳ ಇಷ್ಟವಾದ ಆಹಾರವಾಗಿದ್ದು, ಮೊಮೊಸ್ ಶಾಪೊಂದನ್ನು ನಡೆಸುತ್ತಿದ್ದ ಬೀದಿ ವ್ಯಾಪಾರಿಯೊಬ್ಬರು ತನ್ನ ಮಗನ ಈ ಆಸೆಯನ್ನೇ ಬಳಸಿಕೊಂಡು ತಮ್ಮ ಮನೆಯಲ್ಲಿದ್ದ ಜ್ಯುವೆಲ್ಲರಿಯನ್ನು ಆತನ ಮೂಲಕ ತರಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
ಮನೆಯಲ್ಲಿದ್ದ ಚಿನ್ನಾಭರಣ ತಂದು ಕೊಟ್ಟರೆ ಉಚಿತವಾಗಿ ಮೊಮೊಸ್ ನೀಡುವುದಾಗಿ ಹೇಳಿ ಆ ಅಂಗಡಿಯವರು ಬಾಲಕನಿಗೆ ಮನವರಿಕೆ ಮಾಡಿದ್ದಾರೆ. ಹೀಗಾಗಿ ದಿನವೂ ಮೊಮೊಸ್ ತಿನ್ನುವ ಆಸೆಯಲ್ಲಿದ್ದ ಆ ಬಾಲಕ ಮನೆಯಲ್ಲಿದ್ದ ಜ್ಯುವೆಲ್ಲರಿಯನ್ನು ತಂದು ಆ ಮೂವರಿಗೆ ನೀಡಿದ್ದಾನೆ ಎಂದು ವಿಮಲೇಶ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ವಿಮಲೇಶ್ ಅವರ ಸಹೋದರಿ ಅವರ ಮನೆಗೆ ಭೇಟಿ ನೀಡಿ ಆಭರಣಗಳನ್ನು ಕೇಳಿದಾಗ ಸತ್ಯ ಬೆಳಕಿಗೆ ಬಂದಿದೆ.. ಕುಟುಂಬದವರು ಕಪಾಟು ತೆರೆದ ತಕ್ಷಣ, ಅಲ್ಲಿದ್ದ ಎಲ್ಲವೂ ಕಾಣೆಯಾಗಿರುವುದನ್ನು ಕಂಡು ಆಘಾತಕ್ಕೊಳಗಾಗಿದೆ. ಕೂಡಲೇ ಅವರು ಹುಡುಗನನ್ನು ವಿಚಾರಿಸಿದಾಗ, ಅವನು ಆಭರಣಗಳನ್ನು ಮೋಮೋ ಮಾರಾಟಗಾರರಿಗೆ ನೀಡಿದ್ದಾಗಿ ಇದರಿಂದ ತಾನು ಉಚಿತವಾಗಿ ಮೋಮೋ ತಿನ್ನಬಹುದು ಎಂದು ಅವರು ಹೇಳಿದ್ದಾಗಿ ಬಾಲಕ ಹೇಳಿದ್ದಾನೆ.
ಇದನ್ನೂ ಓದಿ: ಪಕ್ಕದಲ್ಲಿ ಬೋರ್ ಕೊರೆಸುತ್ತಿದ್ದಾಗ ನೆರೆಮನೆಯ ಒಳಗೆ ನೆಲ ಸೀಳಿ ಚಿಮ್ಮಿದ ನೀರು: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಂತರ ವಿಮಲೇಶ್ ಮಿಶ್ರಾ ಅವರು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿ, ಮೂವರು ಮೊಮೊಸ್ ಮಾರುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಲಕ ತಂದುಕೊಟ್ಟ ಆ ಆಭರಣದ ಪ್ರಸ್ತುತ ಮೌಲ್ಯ 85 ಲಕ್ಷ ರೂ. ಎಂದು ತಿಳಿದು ಬಂದಿದೆ. ಬಾಲಕನ ತಂದೆ ದೂರು ನೀಡಿದ ನಂತರಪೊಲೀಸರು ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿ ಡೆಲಿವರಿ ಬಾಯ್‌ಗೆ ಟಿಪ್ಸ್ ನೀಡಿ ಶಾಕ್ ಕೊಟ್ಟ ಭಿಕ್ಷುಕ: : ವಿಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ