Justice Pushpa Ganediwala Resign: ರೇಪ್‌ಗೆ ಹೊಸ ವಿಶ್ಲೇಷಣೆ ನೀಡಿದ್ದ ಹೈಕೋರ್ಟ್‌ ಜಡ್ಜ್‌ ರಾಜೀನಾಮೆ!

By Suvarna News  |  First Published Feb 11, 2022, 10:46 AM IST

*ಬಾಂಬೆ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ್ದ ಸುಪ್ರೀಂ
*ಜ.20ರಂದು ವಿವಾದಿತ ತೀರ್ಪು ನೀಡಿದ್ದ ನ್ಯಾ. ಪುಷ್ಪಾ ಗನೇಡಿವಾಲಾ
*ರಾಜೀನಾಮೆ ನೀಡಿದ ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲಾ 


ನವದೆಹಲಿ (ಡಿ. 17): ‘ಚರ್ಮದಿಂದ ಚರ್ಮಕ್ಕೆ ಸ್ಪರ್ಶವಾದರೆ ಮಾತ್ರ ಅದು ಲೈಂಗಿಕ ದೌರ್ಜನ್ಯ (Sexual Assault) ಎನ್ನಿಸಿಕೊಳ್ಳುತ್ತದೆ’ ಎಂಬ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್‌ ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲಾ (Pushpa  Ganediwala) ಫೆಬ್ರವರಿ 12 ರಂದು ಅವರ ಅಧಿಕಾರಾವಧಿ ಮುಗಿಯುವ ಎರಡು ದಿನಗಳ ಮೊದಲೇ ರಾಜೀನಾಮೆ ನೀಡಿದ್ದಾರೆ.  ಪುಷ್ಪಾ ಅವರನ್ನು ಕಾಯಂ ನ್ಯಾಯಾಧೀಶರನ್ನಾಗಿ ಮಾಡುವ (Permanent Judge) ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್‌ (Supreme Court) ಕೊಲಿಜಿಯಂ ಎರಡನೇ ಬಾರಿ ತಿರಸ್ಕರಿಸಿತ್ತು.  

ಗನೇಡಿವಾಲಾ ಅವರನ್ನು ಬಾಂಬೆ ಹೈಕೋರ್ಟ್‌ ಕಾಯಂ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಕೊಲಿಜಿಯಂ, ಪುಷ್ಪಾ ಅವರ ವಿವಾದಾತ್ಮಕ ತೀರ್ಪುಗಳ ಬೆನ್ನಲ್ಲೇ ತನ್ನ ಶಿಫಾರಸನ್ನು ವಾಪಸ್‌ ಪಡೆದಿತ್ತು. 

Tap to resize

Latest Videos

ಇದನ್ನೂ ಓದಿ: ಬಡ್ತಿಗೆ ಸುಪ್ರಿಂ ನಕಾರಲೈಂಗಿಕ ಶೋಷಣೆ ಬಗ್ಗೆ ವಿವಾದಿತ ತೀರ್ಪು ನೀಡಿದ್ದ ಜಡ್ಜ್‌ಗೆ ‘ಶಿಕ್ಷೆ’!

‘ನ್ಯಾ| ಪುಷ್ಪಾ ಅವರು ಇಂತಹ ಪ್ರಕರಣಗಳನ್ನು ಇನ್ನಷ್ಟು ಎದುರಿಸಬೇಕಾಗಿದೆ. ವಕೀಲರಾಗಿದ್ದಾಗ ಪ್ರಾಯಶಃ ಅವರು ಇಂತಹ ಪ್ರಕರಣಗಳನ್ನು ನಿರ್ವಹಿಸಿಲ್ಲ. ಹೀಗಾಗಿ ಅವರಿಗೆ ತರಬೇತಿ ಬೇಕಾಗಿದೆ ಎಂಬುದು ಕೊಲಿಜಿಯಂ ಅನಿಸಿಕೆಯಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಮೂಲಗಳು ತಿಳಿಸಿವೆ ಎಂದು ವರದಿಯಾಗಿತ್ತು. 

ವಿವಾದಕ್ಕೆ ಕಾರಣವಾಗಿದ್ದ ತೀರ್ಪು: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ| ಎಸ್‌.ಎ. ಬೋಬ್ಡೆ ನೇತೃತ್ವದ ಕೊಲಿಜಿಯಂ, ನ್ಯಾ| ಪುಷ್ಪಾ ಅವರನ್ನು ಬಾಂಬೆ ಹೈಕೋರ್ಟ್‌ನ ನಾಗಪುರದ ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವುದಕ್ಕೆ ಜ.20ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

ಆದರೆ, ಬಟ್ಟೆಯ ಮೇಲಿಂದ ಬಾಲಕಿಯ ಅಂಗಾಂಗ ಮುಟ್ಟುವುದು ಪೋಸ್ಕೋ ಕಾಯ್ದೆಯಡಿ  (Pocso Act(2012))  ಅಪರಾಧವಾಗುವುದಿಲ್ಲ. ಚರ್ಮ- ಚರ್ಮದ ನಡುವೆ ಸಂಪರ್ಕ ಏರ್ಪಟ್ಟಿರಬೇಕು ಎಂದು ಕಾಯ್ದೆಯ ಬಗ್ಗೆ ವ್ಯಾಖ್ಯಾನ ನೀಡಿ ಜ.19ರಂದು ಅವರು ಪ್ರಕರಣವೊಂದರಲ್ಲಿ ತೀರ್ಪು ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ವಿವಾದಿತ ತೀರ್ಪು: ಕೈ ಹಿಡಿದು, ಪ್ಯಾಂಟ್‌ ಜಿಪ್‌ ಬಿಚ್ಚುವುದು ಲೈಂಗಿಕ ಕಿರುಕುಳವಲ್ಲ

ಪುಷ್ಪಾ ತೀರ್ಪಿಗೆ ಸುಪ್ರೀಂ ತಡೆ:  ಈ ನಡುವೆ, ಐದು ವರ್ಷದ ಬಾಲಕಿಯ ಕೈ ಹಿಡಿದು ಆಕೆಯಿಂದ 51 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್‌ ಜಿಪ್‌ ಬಿಚ್ಚಿಸಿಕೊಂಡದ್ದು ಕೂಡ ಪೋಸ್ಕೋದಡಿ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ತೀರ್ಪು ನೀಡಿ, ಆರೋಪಿಯೊಬ್ಬನನ್ನು ಖುಲಾಸೆಗೊಳಿಸಿದ್ದರು. ಇಂತಹ ತೀರ್ಪುಗಳು ಅಪಾಯಕಾರಿ ಇತಿಹಾಸ ಸೃಷ್ಟಿಸುತ್ತವೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ವಾದಿಸಿದ ಹಿನ್ನೆಲೆಯಲ್ಲಿ ಜ.27ರಂದು ಪುಷ್ಪಾ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್‌ ತಡೆ ನೀಡಿತ್ತು.

ಸುಪ್ರೀಂ ಮಹತ್ವದ ಆದೇಶ: ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯದ(sexual assault) ಪ್ರಕರಣವೊಂದರಲ್ಲಿ ‘ಚರ್ಮಕ್ಕೆ ಚರ್ಮ ತಾಗಿಲ್ಲ’(skin-to-skin contact) ಎಂಬ ಕಾರಣ ನೀಡಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ(Bombay High Court) ಬಹುಚರ್ಚಿತ ವಿವಾದಿತ ತೀರ್ಪನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ. ‘ಪೋಕ್ಸೋ ಕಾಯ್ದೆಯಡಿ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸಾಬೀತುಪಡಿಸುವಲ್ಲಿ ಆರೋಪಿಯ ಲೈಂಗಿಕ ಉದ್ದೇಶ ಮುಖ್ಯವೇ ಹೊರತು ಚರ್ಮಕ್ಕೆ ಚರ್ಮ ತಾಗುವುದಲ್ಲ’ ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಗುಪ್ತಾಂಗಗಳನ್ನು ಸ್ಪರ್ಶಿಸುವುದು ಅಥವಾ ಇನ್ನಾವುದೇ ರೀತಿಯ ದೈಹಿಕ ಸ್ಪರ್ಶವು ಲೈಂಗಿಕ ಉದ್ದೇಶದಿಂದ(sexual intent) ಕೂಡಿದ್ದಾಗಿದ್ದರೆ ಅದು ಪೋಕ್ಸೋ ಕಾಯ್ದೆಯ(POCSO Act) ಸೆಕ್ಷನ್‌ 7ರಡಿ ಲೈಂಗಿಕ ದೌರ್ಜನ್ಯವಾಗುತ್ತದೆ. ಕಾಯ್ದೆಯ ಉದ್ದೇಶವು ಸ್ಪಷ್ಟವಾಗಿದ್ದು, ಅದರಲ್ಲಿ ಕೋರ್ಟ್‌ಗಳು ಗೊಂದಲ ಹುಡುಕಬಾರದು ಎಂದೂ ಸುಪ್ರೀಂಕೋರ್ಟ್‌(Supreme Court) ತಿಳಿಸಿದೆ.

click me!