ಚಂಡೀಗಢ(ಫೆ.11 ): ಪಂಜಾಬ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಈಗ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಪುತ್ರಿಯೂ ತಂದೆಯ ಪರ ಚುನಾವಣಾ ಪ್ರಚಾರ ಮಾಡಲು ಅಖಾಡಕ್ಕಿಳಿದಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಿದೆ.
ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಪುತ್ರಿ ರಬಿಯಾ ಸಿಧು ಅವರು ಗುರುವಾರ ಕ್ಷೇತ್ರಗಳಲ್ಲಿ ತಂದೆಯ ಪರ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ರಾಬಿಯಾ ತನ್ನ ತಂದೆ ನವಜೋತ್ ಸಿಂಗ್ ಸಿಧು (Navjot Sidhu ) ಚುನಾವಣೆಯಲ್ಲಿ ಗೆಲ್ಲದೇ ಹೋದರೆ ತನ್ನ ತಂದೆಗೆ ಗೆಲುವು ಸಿಗುವವರೆಗೂ ತಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ರಾಬಿಯಾ ಅವರ ಮಾತುಗಳು ತೀಕ್ಷ್ಣ ಮತ್ತು ಕಹಿಯಾಗಿತ್ತು.
5 State Election: ಹಣಕ್ಕಾಗಿ ತಾಯಿಯನ್ನೇ ತೊರೆದ'ಕ್ರೂರಿ ಸಿಧು';ಪಂಜಾಬ್ ಪಾಲಿಟಿಕ್ಸ್‌ನಲ್ಲಿ ಸಂಚಲನ
ಹಣದ ಕೊರತೆಯಿಂದ ಮಗಳ ಮದುವೆ ಆಗುವುದಿಲ್ಲ ಎಂದು ತಂದೆ ನವಜೋತ್ ಸಿಧು ಭಾವನಾತ್ಮಕವಾಗಿ ಹೇಳಿದ್ದರು ಎಂದು ಮಗಳು ರಬಿಯಾ ಹೇಳಿದ್ದು, ಹೀಗಾಗಿ ಆಕೆ ತನ್ನ ತಂದೆಯ ವಿಜಯದ ನಂತರವೇ ಮದುವೆಯಾಗುವುದಾಗಿ ಪ್ರತಿಜ್ಞೆ ಮಾಡಿದ್ದಾಳೆ. ಆದರೆ ನವಜೋತ್ ಸಿಂಗ್ ಸಿಧು ಇಂದಿಗೂ ತನ್ನ ಪುತ್ರಿ ಓದಲು ಮತ್ತು ಆಕೆಗೆ ಏನು ಬೇಕು ಅದೆಲ್ಲವನ್ನೂ ಮಾಡಲು ಪ್ರೋತ್ಸಾಹಿಸುತ್ತಾರೆ. ಆದರೆ ಆಕೆಯ ಮದುವೆಗೆ ಹಣವಿಲ್ಲ ಎಂದರೆ ಹೇಗೆ ಎಂಬುದು ತಿಳಿಯುತ್ತಿಲ್ಲ.
ಪ್ರಸ್ತುತ ಪಂಜಾಬ್ ಸಿಎಂ ಆಗಿರುವ ಚರಂಜಿತ್ ಸಿಂಗ್ ಚನ್ನಿ ತನ್ನ ತಂದೆಯ ಸಮೀಪ ನಿಲ್ಲಲ್ಲು ಕೂಡ ಸಾಧ್ಯವಿಲ್ಲ. ಸಿದ್ದುಗೆ ಸರಿಸಮಾನ ಎಂದು ಭಾವಿಸಿದ ಸಿಎಂ ಚನ್ನಿ ಅವರಿಗೆ ಮುಂದೆ ಯಾವುದೇ ಸ್ಥಾನಮಾನವಿರುವುದಿಲ್ಲಎಂದು ಸಿಎಂ ಚನ್ನಿ ಅವರನ್ನು ಟಾರ್ಗೆಟ್ ಮಾಡಿ ರಾಬಿಯಾ (Rabia) ಕಿಡಿಕಾರಿದ್ದಾಳೆ. ತನ್ನ ತಂದೆ 14 ವರ್ಷಗಳಿಂದ ಪಂಜಾಬ್‌ನ್ನು (Punjab) ಮಾದರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರನ್ನು ಯಾರೂ ಶ್ಲಾಘಿಸುತ್ತಿಲ್ಲ. ಆದರೆ ಅವರು ಶೀಘ್ರದಲ್ಲೇ ಜನ ಮೆಚ್ಚುಗೆ ಗಳಿಸಲಿದ್ದಾರೆ. ನನ್ನ ತಂದೆ ಚುನಾವನೆಯಲ್ಲಿ ಗೆಲ್ಲಲಿದ್ದಾರೆ. ವಿಜಯವು ನಿಜವಾದ ವ್ಯಕ್ತಿಗಳಿಗೆ ಸೇರಿದೆ ಮತ್ತು ನನ್ನ ತಂದೆ ನಿಜವಾದ ವ್ಯಕ್ತಿ ಎಂದು ಪುತ್ರಿ ಅಪ್ಪನ ಪರ ಬ್ಯಾಟಿಂಗ್ ಮಾಡಿದಳು.
Punjab Election : ಪಂಜಾಬ್ ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಸಿಧು-ಚನ್ನಿ ಜಟಾಪಟಿ!
ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ತಂದೆಯವರನ್ನು ಸಿಲುಕಿಸಲು ಯತ್ನಿಸುತ್ತಿದ್ದಾರೆ. ಆದರೆ ಸಿಧು ಗೆದ್ದು ಬಂದರೆ ಮಾಫಿಯಾ ರಾಜ್ಯ ಏನಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಅದಕ್ಕಾಗಿಯೇ ಎಲ್ಲರೂ ಸಿದ್ದು ಅವರನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ನಿಜವಾದ ಮನುಷ್ಯ ಮತ್ತು ಅವರಿಗೆ ಗೆಲುವು ಖಚಿತ ಎಂದು ರಾಬಿಯಾ ಹೇಳಿದ್ದಾಳೆ.
133 ಕೋಟಿಯ ಒಡೆಯ ಬಡವ ಹೇಗೆ?
ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ(Charanjit Singh Channi) ಅವರನ್ನೇ ಮತ್ತೆ ಟಾರ್ಗೆಟ್ ಮಾಡಿದ ರಾಬಿಯಾ, 133 ಕೋಟಿಯ ಒಡೆಯ ಬಡವ ಹೇಗೆ ಹೇಗೆ ಎಂದು ಪ್ರಶ್ನಿಸಿದರು. ಚರಂಜಿತ್ ಸಿಂಗ್ ಚನ್ನಿ ಅವರ ಬ್ಯಾಂಕ್ ಖಾತೆಯನ್ನು ತೆಗೆದು ನೋಡಿ ಹಾಗೆಯೇ ನನ್ನ ತಂದೆಯ ಬ್ಯಾಂಕ್ ಖಾತೆಯನ್ನು ನೋಡಿ. 133 ಕೋಟಿಯ ಒಡೆಯ ಬಡವ ಹೇಗಾಗಲು ಸಾಧ್ಯ ಎಂದು ಆಕೆ ಕೇಳಿದಳು.
ಒಟ್ಟಿನಲ್ಲಿ ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿರುವ ಸಿಧು ಅವರ ಸುಂದರ ಪುತ್ರಿ ಚುನಾವಣಾ ಅಖಾಡಕ್ಕಿಳಿದಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರುವಂತೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ