ಗ್ರೀಕ್ ಹಿಪೊಕ್ರೆಟಿಕ್ ಪ್ರಮಾಣ ವಚನಕ್ಕೆ ಕೋಕ್: ವೈದ್ಯಕೀಯ ಪದವೀಧರರಿಗೆ ಇನ್ಮುಂದೆ 'ಚರಕ್ ಶಪತ್'?

By Suvarna NewsFirst Published Feb 11, 2022, 10:04 AM IST
Highlights

*ವೈದ್ಯಕೀಯ ಪದವೀಧರರಿಗೆ ವೈಟ್ ಕೋಟ್ ಸಮಾರಂಭ
*ಗ್ರೀಕ್ ವೈದ್ಯಕೀಯ  ಹಿಪೊಕ್ರೆಟಿಕ್ ಪ್ರಮಾಣ ವಚನಕ್ಕೆ ಕೋಕ್
*ಚರಕ ಸಂಹಿತೆಯಲ್ಲಿ ಉಲ್ಲೇಖಿಸಲಾದ ಪ್ರಮಾಣ ವಚನ ಸಾಥ್!

ನವದೆಹಲಿ (ಫೆ. 11): ಭಾರತದ ಅತ್ಯುನ್ನತ ವೈದ್ಯಕೀಯ ಶಿಕ್ಷಣ ನಿಯಂತ್ರಕ, ರಾಷ್ಟ್ರೀಯ ವೈದ್ಯಕೀಯ ಆಯೋಗ (NMC), ವೈದ್ಯಕೀಯ ಪದವೀಧರರ ಸಮಾರಂಭದಲ್ಲಿ ಹಿಪೊಕ್ರೆಟಿಕ್ ಪ್ರಮಾಣ ವಚನವನ್ನು (Hippocratic oath) 'ಚರಕ್ ಶಪತ್' ಎಂದು ಬದಲಿಸಲು ಸಲಹೆ ನೀಡಿದೆ.  ಹಿಪೊಕ್ರೆಟಿಕ್ ಪ್ರಮಾಣ ಎಂಬುದು ಗ್ರೀಕ್ ವೈದ್ಯಕೀಯ ಗ್ರಂಥಗಳಲ್ಲಿ ಒಂದಾಗಿರುವ ವೈದ್ಯರಿಂದ  ತೆಗೆದುಕೊಳ್ಳುವ ನೀತಿಶಾಸ್ತ್ರದ ಪ್ರಮಾಣ ವಚನವಾಗಿದೆ.  

ಚರಕ ಸಂಹಿತೆಯಲ್ಲಿ ಉಲ್ಲೇಖ:  ಹಿಪೊಕ್ರೆಟಿಕ್ ಪ್ರಮಾಣವು  ವೈದ್ಯಕೀಯ ಪದವೀಧರರಿಗೆ ನೈತಿಕ ಸಂಕೇತವಾಗಿದೆ, ಇದನ್ನು ಪ್ರಾಚೀನ ಗ್ರೀಕ್ ವೈದ್ಯ ಹಿಪ್ಪೊಕ್ರೇಟ್ಸ್ ಬರೆದಿದ್ದಾರೆ ಎಂದು ನಂಬಲಾಗಿದೆ. ವೈದ್ಯಕೀಯ ಅಭ್ಯಾಸ ನಡೆಸಲು ಮಾರ್ಗದರ್ಶಿಯಾಗಿ ಘಟಿಕೋತ್ಸವ ಸಮಾರಂಭದಲ್ಲಿ ಈ ಪ್ರಮಾಣವಚನ ಸ್ವೀಕರಿಸಲಾಗುತ್ತದೆ. ಚರಕ ಶಪತ್ ಎಂಬುದು ಚರಕ ಸಂಹಿತೆಯಲ್ಲಿ ಉಲ್ಲೇಖಿಸಲಾದ ಪ್ರಮಾಣ ವಚನವಾಗಿದ್ದು ಭಾರತೀಯ ವೈದ್ಯಕೀಯ ಪದ್ಧತಿಯ ಸಾಂಪ್ರದಾಯಿಕ ಪದ್ಧತಿಯಾದ ಆಯುರ್ವೇದದ ಆರಂಭಿಕ ತಜ್ಞರಲ್ಲಿ ಒಬ್ಬರಾದ ಚರಕರಿಂದ ರಚಿಸಲ್ಪಟ್ಟ ಪ್ರಾಚೀನ ಭಾರತೀಯ ಔಷಧದ ಸಮಗ್ರ ಪಠ್ಯವಾಗಿದೆ.

Latest Videos

ಇದನ್ನೂ ಓದಿ: Kashi Vishwanath Dham: ಸನಾತನ ಧರ್ಮ, ಸಂಸ್ಕೃತಿ, ಆಧ್ಯಾತ್ಮ ಪರಂಪರೆ ರಕ್ಷಕ ಪ್ರಧಾನಿ ಮೋದಿ

ಚರ್ಚೆಯ ಹಂತದಲ್ಲಿದೆ: "ಹಿಪೊಕ್ರೆಟಿಕ್ ಪ್ರಮಾಣ ವಚನ ಇಲ್ಲ. ವೈಟ್ ಕೋಟ್ ಸಮಾರಂಭದಲ್ಲಿ (ಪೋಷಕರೊಂದಿಗೆ) ಪ್ರಮಾಣವಚನವು  “ಮಹರ್ಷಿ ಚರಕ್ ಶಪತ್” ಇರುತ್ತದೆ,” ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ಎಲ್ಲಾ ವೈದ್ಯಕೀಯ ಕಾಲೇಜುಗಳೊಂದಿಗೆ ಪ್ರಸಾರವಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಚರ್ಚೆಯ ಮುಖ್ಯಾಂಶಗಳಲ್ಲಿ ಹೇಳಲಾಗಿದೆ. 

ರಾಷ್ಟ್ರೀಯ ವೈದ್ಯಕೀಯ ಆಯೋಗ  ಸದಸ್ಯರೊಬ್ಬರು ಈ ಬೆಳವಣಿಗೆಯನ್ನು ದೃಢಪಡಿಸಿದ್ದು "ಇದು ಈಗ ಚರ್ಚೆಯ ಹಂತದಲ್ಲಿದೆ; ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ನಿರ್ಧಾರ ತೆಗೆದುಕೊಳ್ಳುವ ಮೊದಲು ಅನುಸರಿಸಬೇಕಾದ ಸರಿಯಾದ ಪ್ರಕ್ರಿಯೆ ಇರಬೇಕು,  ಅದು ಹಾಗೆಯೇ ಕೆಲಸ ಮಾಡುವುದಿಲ್ಲ, ”ಎಂದು ಹೇಳಿದ್ದಾರೆ.

ಈ ವರ್ಷ ಫೆಬ್ರವರಿ 7 ರಂದು ನಡೆದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಪದವಿಪೂರ್ವ ವೈದ್ಯಕೀಯ ಮಂಡಳಿಯ ವೀಡಿಯೊ ಕಾನ್ಫರೆನ್ಸ್‌ನ ಮುಖ್ಯಾಂಶಗಳನ್ನು ಒದಗಿಸುವ ಮತ್ತೊಂದು ದಾಖಲೆಯು ಹಿಪೊಕ್ರೆಟಿಕ್ ಪ್ರಮಾಣ ವಚನವನ್ನು ಚರಕ್ ಶಪತ್‌ನೊಂದಿಗೆ ಬದಲಾಯಿಸುವ ಪ್ರಸ್ತಾಪವನ್ನು ಮುಂದಿಡಲು ಕಾರಣವೆಂದರೆ “ಚರಕ ನಮ್ಮ ತಾಯ್ನಾಡಿಗೆ ಸೇರಿದವರು-  ವೈಟ್ ಕೋಟ್ ಸಮಾರಂಭದಲ್ಲಿ ಸ್ಥಳೀಯ ಭಾಷೆಗಳಲ್ಲಿ/ದೇಶೀಯ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಸಲಾಗುವುದು" ಎಂದು ಹೇಳಿತ್ತು. 

ಇದನ್ನೂ ಓದಿ: Vice-President Venkaiah Naidu : ನಿಮ್ಮ ಧರ್ಮವನ್ನ ಪಾಲಿಸಿ ಆದರೆ, ದ್ವೇಷ ಭಾಷಣ ಬೇಡ!

ಈ ಬೆನ್ನಲ್ಲೇ ಟ್ವೀಟ್‌ ಮಾಡಿರುವ ರಾಷ್ಟ್ರೀಯ ಮೆಡಿಕೋಸ್ ಸಂಸ್ಥೆ  “NMCಯಿಂದ ಮಹರ್ಷಿ ಚರಕ್ ಶಪತ್‌ನೊಂದಿಗೆ ಹಿಪೊಕ್ರೆಟಿಕ್ ಪ್ರಮಾಣವನ್ನು ಬದಲಿಸಲಾಗಿದೆ. ಎನ್‌ಎಂಒ ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದಕ್ಕಾಗಿ #ಧನ್ಯವಾದ ಎನ್‌ಎಂಸಿ, ”ಎಂದು ಹೇಳಿದೆ

 

The replacement of hippocratic oath with Maharishi Charak Sapth by NMC. for adopting NMO's vision.
🙏🙏 pic.twitter.com/Ll0RdqiUQV

— National Medicos Organization (@NMOBharat)

 

“ನಾನು ಅಪೊಲೊ ಫಿಸಿಷಿಯನ್ ಮತ್ತು ಅಸ್ಕ್ಲೆಪಿಯಸ್ ಮತ್ತು ಹೈಜಿಯಾ ಮತ್ತು ಪ್ಯಾನೇಸಿಯಾ ಮತ್ತು ಎಲ್ಲಾ ದೇವರುಗಳು ಮತ್ತು ದೇವತೆಗಳ ಮೇಲೆ ಪ್ರತಿಜ್ಞೆ ಮಾಡುತ್ತೇನೆ, ಅವರನ್ನು ನನ್ನ ಸಾಕ್ಷಿಗಳನ್ನಾಗಿ ಮಾಡುತ್ತೇನೆ, ನನ್ನ ಸಾಮರ್ಥ್ಯದ ಪ್ರಕಾರ ನಾನು ಈ ಪ್ರಮಾಣ ಮತ್ತು ಈ ಒಡಂಬಡಿಕೆಯನ್ನು ಪೂರೈಸುತ್ತೇನೆ ... ನಾನು ನನ್ನ ಸಾಮರ್ಥ್ಯ ಮತ್ತು ತೀರ್ಪಿನ ಪ್ರಕಾರ ರೋಗಿಗಳ ಪ್ರಯೋಜನಕ್ಕಾಗಿ ಆಹಾರ ಕ್ರಮಗಳನ್ನು ಅನ್ವಯಿಸುತ್ತೇನೆ; ನಾನು ಅವರನ್ನು ಹಾನಿ ಮತ್ತು ಅನ್ಯಾಯದಿಂದ ಕಾಪಾಡುತ್ತೇನೆ ... " ಎಂದು ಕ್ಲಾಸಿಕ್ ಹಿಪೊಕ್ರೆಟಿಕ್ ಪ್ರಮಾಣವು ಹೇಳುತ್ತದೆ. 

“ಸ್ವಂತಕ್ಕಾಗಿ ಅಲ್ಲ, ಯಾವುದೇ ಲೌಕಿಕ ಭೌತಿಕ ಆಸೆ ಅಥವಾ ಲಾಭದ ನೆರವೇರಿಕೆಗಾಗಿ ಅಲ್ಲ, ಆದರೆ ಕೇವಲ ನರಳುತ್ತಿರುವ ಮಾನವೀಯತೆಯ ಒಳಿತಿಗಾಗಿ, ನಾನು ನನ್ನ ರೋಗಿಗೆ ಚಿಕಿತ್ಸೆ ನೀಡುತ್ತೇನೆ ಮತ್ತು ಎಲ್ಲಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ" ಎಂದು ಮೂಲತಃ ಸಂಸ್ಕೃತದಿಂದ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಿಗೆ ಅನುವಾದಿಸಲಾದ ಚರಕ್ ಶಪತ್‌ ಉಲ್ಲೇಖವು ಹೇಳುತ್ತದೆ. 

click me!