ಕ್ಷೇತ್ರ ಮರುವಿಂಗಡಣೆ ವೇಳೆ ಎಳ್ಳಷ್ಟೂ ಅನ್ಯಾಯ ಆಗಲ್ಲ: ಅಮಿತ್ ಶಾ ಭರವಸೆ

ಕ್ಷೇತ್ರ ಮರುವಿಂಗಡನೆಯಲ್ಲಿ ಯಾವುದೇ ರೀತಿಯಲ್ಲೂ ಅನ್ಯಾಯವಾಗಲ್ಲ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ. ಸದ್ಯ ಕೇಳಿಬರುತ್ತಿರುವ ವಿರೋಧ  ಡಿಎಂಕೆ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಮಾಡುತ್ತಿರುವ ನಾಟಕ ಎಂದು ಶಾ ಕಿಡಿ ಕಾರಿದ್ದಾರೆ. 

Delimitation Row Amit shah clarifies no injustice for southern states

ಪಿಟಿಐ ನವದೆಹಲಿ(ಮಾ.30) ಕ್ಷೇತ್ರ ಮರುವಿಂಗಡಣೆ ವೇಳೆ ಎಳ್ಳಷ್ಟೂ ಅನ್ಯಾಯ ಆಗಲ್ಲ. 5 ವರ್ಷ ಸುಮ್ಮನಿದ್ದ ಡಿಎಂಕೆ ಈಗ ತನ್ನ ವೈಫಲ್ಯ ಮುಚ್ಚಿಕೊಳ್ಳಲು ವಿನಾಕಾರಣ, ಈ ಬಗ್ಗೆ ಪ್ರಸ್ತಾಪ ಮಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ತಮಿಳುನಾಡಿನ ಜನರು ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂಬ ವಿಶ್ವಾಸವಿದೆ. ಜನರ ನಾಡಿ ಮಿಡಿತ ನನಗೆ ಅರ್ಥವಾಗಿದೆ’ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಟೈಮ್ಸ್‌ ನೌ ಶೃಂಗಸಭೆಯಲ್ಲಿ ಮಾತನಾಡಿದ ಶಾ, ‘ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆಯ ಬಗ್ಗೆ ಏನೂ ಹೇಳಿಲ್ಲ. ಅಷ್ಟರಲ್ಲಿ 2026 ರ ರಾಜ್ಯ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಡಿಎಂಕೆ ಈ ವಿಷಯವನ್ನು ಎತ್ತಿದೆ. 5 ವರ್ಷಗಳ ಕಾಲ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಮತ್ತು ಈಗ ಅವರು ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದಾರೆ’ ಎಂದರು.

Latest Videos

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರ: ಮತ್ತೆ ಅಣ್ಣಾಮಲೈ ಮೇಲೆ ಡಿಕೆಶಿ ವಾಕ್‌ ಪ್ರಹಾರ

‘ಕ್ಷೇತ್ರ ಮರುವಂಗಡಣೆಯಲ್ಲಿ ಯಾರಿಗೂ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ನಾನು ನಿಮಗೆ ಹೇಳಬಲ್ಲೆ. ಯಾರಿಗೂ ಅನ್ಯಾಯವಾಗುವ .0001 ಪ್ರತಿಶತದಷ್ಟೂ ಅವಕಾಶವಿಲ್ಲ’ ಎಂದರು.

- ತನ್ನ ವೈಫಲ್ಯ ಮುಚ್ಚಿಕೊಳ್ಳಲು ಡಿಎಂಕೆಯಿಂದ ಈ ಬಗ್ಗೆ ಪ್ರಸ್ತಾಪ
- ವಿಂಗಡಣೆಯಲ್ಲಿ ಅನ್ಯಾಯಕ್ಕೆ ಶೇ.0001ರಷ್ಟು ಅವಕಾಶವೂ ಇಲ್ಲ
- ಡಿಎಂಕೆಯನ್ನು ಜನ ಅಧಿಕಾರದಿಂದ ಕೆಳಗಿಳಿಸುವುದು ನಿಶ್ಚಿತ

ಕ್ಷೇತ್ರ ಮರುವಿಂಗಡಣೆ ವಿರೋಧಿ ಸಭೆ
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯನ್ನು ವಿರೋಧಿಸಿ ತಮಿಳುನಾಡಿನ ಡಿಎಂಕೆ ಸರ್ಕಾರದ ನೇತೃತ್ವದಲ್ಲಿ ವಿಪಕ್ಷ ಕೂಟದ ಸಭೆ ನಡೆದ ಬೆನ್ನಲ್ಲೇ, ತೆಲಂಗಾಣ ಕೂಡ ಅಂತಹ ಸಭೆ ನಡೆಸಲು ಮುಂದಾಗಿದೆ. ಇದರ ಸಿದ್ಧತೆಯೆಂಬಂತೆ, ಕ್ಷೇತ್ರಗಳ ಮರುವಿಂಗಡಣೆಗೆ ಜನಸಂಖ್ಯೆ ಒಂದೇ ಮಾನದಂಡ ಆಗಬಾರದು ಎಂದು ಪ್ರತಿಪಾದಿಸುವ ನಿರ್ಣಯವನ್ನು ತೆಲಂಗಾಣ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ವೇಳೆ ಸಿಎಂ ರೇವಂತ್‌ ರೆಡ್ಡಿ ಮಾತನಾಡಿ, ‘ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳನ್ನು ವಿಂಗಡಿಸಿದರೆ, ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯದಲ್ಲಿ ಶೇ.6ರಷ್ಟು ಇಳಿಕೆಯಾಗಿ, ಶೇ.24ರಿಂದ 19ಕ್ಕೆ ತಲುಪುತ್ತದೆ’ ಎಂದು ಆರೋಪಿಸಿದರು. ಜೊತೆಗೆ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಸಿಎಂಗಳಿಗೆ ತಮ್ಮ ಸರ್ಕಾರ ಆಯೋಜಿಸುವ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ.

ದಕ್ಷಿಣದ ದನಿ ಅಡಗಿಸಲು ಬಿಡೆವು
ಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆ ಮೂಲಕ ದಕ್ಷಿಣ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯವನ್ನು ಕಡಿತಗೊಳಿಸಲು ಉದ್ದೇಶಿಸಿದೆ. ಜನಸಂಖ್ಯಾ ನಿಯಂತ್ರಣ ಮತ್ತು ಸಾಕ್ಷರತಾ ಪ್ರಯತ್ನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ದಕ್ಷಿಣ ಭಾರತವು ಬಹಳ ಹಿಂದಿನಿಂದಲೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಎತ್ತಿಹಿಡಿದಿದೆ. ನಮ್ಮ ಸೀಟುಗಳು ಕಡಿಮೆಯಾಗಲು ನಾವು ಬಿಡುವುದಿಲ್ಲ. ಆರ್ಥಿಕವಾಗಿ ಮತ್ತು ಸಾಕ್ಷರತೆಯ ವಿಷಯದಲ್ಲಿ, ನಾವು ದೇಶವನ್ನು ನಿರಂತರವಾಗಿ ಮುನ್ನಡೆಸಿದ್ದೇವೆ.
- ಡಿ.ಕೆ. ಶಿವಕುಮಾರ್‌, ಕರ್ನಾಟಕ ಡಿಸಿಎಂ

ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆಗೆ ವಿರೋಧ: ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲ ಕೋರಿದ ಸ್ಟಾಲಿನ್‌!
 

vuukle one pixel image
click me!