ಸಿಕ್ಕಿಬಿದ್ದ ಕಳ್ಳನಿಂದ ನೃತ್ಯ ಮಾಡಿಸಿದ ಜನ: ವೀಡಿಯೋ ಸಖತ್ ವೈರಲ್

By Anusha Kb  |  First Published Aug 23, 2024, 11:28 AM IST

ಚಿನ್ನದ ಸರ ಕಳ್ಳತನ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಥಳಿಸಿ ನಂತರ ಬಲವಂತವಾಗಿ ಡಾನ್ಸ್ ಮಾಡುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳನೋರ್ವನಿಗೆ ಸರಿಯಾಗಿ ಬಾರಿಸಿದ ಸಾರ್ವಜನಿಕರು ಬಳಿಕ ಆತನಿಗೆ ಒತ್ತಾಯಪೂರ್ವಕವಾಗಿ ಡಾನ್ಸ್ ಮಾಡಿಸಿದ ವಿಚಿತ್ರ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿ ಪ್ರದೇಶ (NCR) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಈ ಕಳ್ಳ ಚಿನ್ನದ ಚೈನ್ ಎಗರಿಸುವ ವೇಳೆ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹೀಗೆ ಸಿಕಿಬಿದ್ದ ಆತನಿಗೆ ಸರಿಯಾಗಿ ತದುಕಿದ ಯುವಕರು ಆತನನ್ನು ಬಿಡುವ ಮೊದಲು ಆತನಿಂದ ಡಾನ್ಸ್‌ ಮಾಡಿಸಿದ್ದಾರೆ. ಭೋಜ್ಪುರಿ ಹಾಡೊಂದಕ್ಕೆ ಆತನಿಂದ ಡಾನ್ಸ್ ಮಾಡಿಸಿದ್ದು, ಜೊತೆಗೆ ಅಲ್ಲಿದ್ದ ಹುಡುಗರೆಲ್ಲಾ ಸೇರಿ ಆತನೊಂದಿಗೆ ಸ್ಟೆಪ್ ಹಾಕಿದ್ದಾರೆ. 

ಬಹುಶಃ ಬೋಜ್‌ಪುರಿ ಅಥವಾ ಮರ್ವಾರಿ ಹಾಡುಗಳನ್ನು ಯುವಕರು ಡಿಜೆ ಮೂಲಕ ಹಾಕಿದ್ದು, ಅದಕ್ಕೆ ಡಾನ್ಸ್ ಮಾಡುವಂತೆ ಕಳ್ಳನಿಗೆ ಹೇಳಿದ್ದಾರೆ. ಅದರಂತೆ ಆತ ತಲೆಗೊಂದು ಕೈ ಸೊಂಟಕ್ಕೊಂದು ಕೈ ಇಟ್ಟು ಹ್ಯಾಪೆಮೊರೆಯಲ್ಲಿ ಡಾನ್ಸ್‌ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. @gharkekalesh ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು,  18 ಸೆಕೆಂಡ್ಗಳ ವೀಡಿಯೋದಲ್ಲಿ ಕಳ್ಳನ ಜೊತೆ ಇತರರು ಕೂಡ ಈ ಅದ್ದೂರಿ ಸಂಗೀತದ ಹಾಡಿಗೆ ಡಾನ್ಸ್ ಮಾಡುವುದನ್ನು ಕಾಣಬಹುದಾಗಿದೆ. 

Latest Videos

undefined

ಮಂಡ್ಯದಿಂದ ಬಂದು ಬೆಂಗ್ಳೂರಲ್ಲಿ ಬೈಕ್‌ ಕಳ್ಳತನ: 46 ಬೈಕ್‌ ಜಪ್ತಿ

ಸಿಕಿಬಿದ್ದ ಕಳ್ಳನಿಗೆ ಬಾರಿಸಿದ ಸಾರ್ವಜನಿಕರು ಆತನಿಂದ ಒತ್ತಾಯಪೂರ್ವಕವಾಗಿ ಡಾನ್ಸ್ ಮಾಡಿಸಿದರು ಎಂದು ವೀಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ.  ಈ ಕಳ್ಳ ಈ ಘಟನೆಯನ್ನು ಯಾವತ್ತೂ ಮರೆಯಲಾರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂತಹದ್ದೇ ಸುದ್ದಿಯೊಂದರ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದು, ಅದರಲ್ಲಿ ಸಿಕಿಬಿದ್ದ ಕಳ್ಳನೋರ್ವನಿಗೆ ಯುವಕರು ಎನರ್ಜಿ ಡ್ರಿಂಕ್ ಕುಡಿಸುತ್ತಿರುವ ದೃಶ್ಯವಿದೆ. ಎನರ್ಜಿ ಡ್ರಿಂಕ್ ಕೊಟ್ಟು ಮತ್ತೆ ಆತನಿಗೆ ಸರಿಯಾಗಿ ತದುಕಬಹುದು ಎಂಬ  ಪ್ಲಾನ್ ಯುವಕರದ್ದು

ಭಾರಿ ಬಿಗಿ ಭದ್ರತೆ ಇರುವ ಅಯೋಧ್ಯೆಯ ರಾಮಪಥದಲ್ಲೇ ಕಂಬ ಸಹಿತ 3,800 ಬೀದಿ ದೀಪಗಳನ್ನು ಎಗರಿಸಿದ ಕಳ್ಳರು

ಅಲ್ಲದೇ ಕೆಲವರು ಕಳ್ಳನ ಪರ ಬ್ಯಾಟಿಂಗ್ ಮಾಡಿದ್ದು, ಆತ ತಪ್ಪು ಮಾಡಿದ್ದರೆ ಪೊಲೀಸರನ್ನು ಕರೆಸಿ ಶಿಕ್ಷೆ ಕೊಡಿಸಿ, ಆದರೆ ಈ ರೀತಿ ಮಾಡಿರುವುದು ಕಿರುಕುಳ ಎಂದು ಒಬ್ಬರು ಕಳ್ಳನ ಪರ ವಹಿಸಿದ್ದಾರೆ. ಇತ್ತ ಸಿಕಿಬಿದ್ದ ಕಳ್ಳ ಧರಿಸಿರುವ ಟೀಶರ್ಟ್‌ನಲ್ಲಿ ದೀ ಬಾಯ್ಸ್ ಎಂಬ ಟ್ಯಾಗ್‌ಲೈನ್ ಇದ್ದು, ಇದು ಕೂಡ ಅನೇಕರಿಗೆ ನಗು ತರಿಸಿದೆ. ಮತ್ತೆ ಕೆಲವರು ಇದೊಂದು ಒಳ್ಳೆಯ ಪನಿಷ್‌ಮೆಂಟ್ ಎಂದು ಹೇಳಿದ್ದಾರೆ. ಇದೊಂದು ಒಳ್ಳೆಯ ಶಿಕ್ಷೆ, ಆತ ನಗಲು ಬಾರದು ಅಳಲು ಬಾರದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.  ಒಟ್ಟಿನಲ್ಲಿ ಈ ವೀಡಿಯೋವನ್ನು 3 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. 

Thief got beaten by crowd and forced to dance on Song, Somewhere in NCR region
pic.twitter.com/OpLcEcmyh8

— Ghar Ke Kalesh (@gharkekalesh)

 

click me!