ಕೋಟಾದಲ್ಲಿ ಮನೆಯೊಂದರ ವಾಷಿಂಗ್ ಮೆಷಿನ್‌ನಲ್ಲಿ 5 ಅಡಿ ಉದ್ದದ ಹಾವೊಂದು ಪತ್ತೆಯಾಗಿದ್ದು, ಮನೆ ಮಂದಿ ಬೆಚ್ಚಿ ಬಿದ್ದ ಘಟನೆ ನಡೆದಿದೆ. ಹಾವು ಹಿಡಿಯುವ ತಜ್ಞರು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಮಳೆಗಾಲದಲ್ಲಿ ಹಾವುಗಳು ಆಶ್ರಯ ಅರಸಿ ಮನೆಗಳಿಗೆ ಬರುವುದು ಸಾಮಾನ್ಯವಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು.
ಕೋಟಾ: ಕೆಲ ದಿನಗಳ ಹಿಂದಷ್ಟೇ ಟಾಯ್ಲೆಟ್ ಬೆಸಿನ್‌ನಲ್ಲಿ ಮೂರು ಹಾವುಗಳು ಪತ್ತೆಯಾದಂತಹ ಭಯಬೀಳಿಸುವ ಘಟನೆ ವರದಿ ಆಗಿತ್ತು. ಆದರೆ ಈ ಘಟನೆ ಮಾಸುವ ಮೊದಲೇ ಈಗ ಮನೆಯೊಂದರ ವಾಶಿಂಗ್ ಮೆಷಿನ್‌ನಲ್ಲಿ ಭಾರೀ ಗಾತ್ರದ ಹಾವೊಂದು ಕಾಣಿಸಿಕೊಂಡು ಮನೆ ಮಂದಿಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ರಾಜಸ್ತಾನದ ಕೋಟಾದಲ್ಲಿ ಈ ಘಟನೆ ನಡೆದಿದ್ದು, ವಾಶಿಂಗ್ ಮೆಷಿನ್‌ನಲ್ಲಿ ಐದು ಅಡಿಯ ಭಾರೀ ಗಾತ್ರದ ಹಾವನ್ನು ನೋಡಿ ಕುಟುಂಬದವರು ಹೌಹಾರಿದ್ದಾರೆ. ಬಳಿಕ ಹಾವು ಹಿಡಿಯುವರಿಗೆ ಕುಟುಂಬದವರು ಕರೆ ಮಾಡಿ ವಿಚಾರ ತಿಳಿಸಿದ್ದು, ಬಳಿಕ ಸ್ಥಳಕ್ಕೆ ಬಂದ ಹಾವು ಹಿಡಿಯುವವರು ಹಾವನ್ನು ರಕ್ಷಿಸಿ ಕಾಡೊಂದಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.
ಕೋಟಾದ ಸ್ವಾಮಿ ವಿವೇಕಾನಂದ ನಗರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಶಂಭುದಯಾಳ್ ಎಂಬುವವರು ಬಟ್ಟೆ ಒಗೆಯುವುದಕ್ಕೆಂದು ವಾಷಿಂಗ್ ಮೆಷಿನ್ ಮುಚ್ಚಳ ತೆಗೆದು ನೋಡಿದಾಗ ಅಲ್ಲಿ ನಾಗರಹಾವೊಂದು ಮುದುಡಿ ಮಲಗಿತ್ತು. ಭಾರಿ ಗಾತ್ರ ಹಾವು ನೋಡಿ ಭಯಗೊಂಡ ಅವರು ಕೂಡಲೇ ನೆರೆಹೊರೆ ಮನೆಯವರಿಗೆ ತಿಳಿಸಿದ್ದಾರೆ. ಬಳಿಕ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ಹಾವು ವಾಷಿಂಗ್ ಮೆಷಿನ್ ಒಳಗೆ ಪವಡಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ವಾಷಿಂಗ್ ಮೆಷಿನ್‌ನಲ್ಲಿ ಹಾವು ನೋಡಿ ಭಯ ಹಾಗೂ ಅಚ್ಚರಿ ವ್ಯಕ್ತಪಡಿಸಿದರೆ ಮತ್ತೆ ಕೆಲವು ಹಾಸ್ಯ ಮಾಡಿದ್ದಾರೆ.
ಬಾಲದಿಂದಲೇ ಬೇಟೆಯಾಡುತ್ತೆ ಈ ಇರಾನಿಯನ್ ಸ್ಪೈಡರ್ ಸ್ನೇಕ್: ಅಪರೂಪದ ವೀಡಿಯೋ ವೈರಲ್
ಹಾವು ಹೊರಗಿನ ವಾತಾವರಣದಲ್ಲಿರುವ ಮಾಲಿನ್ಯದಿಂದಾಗಿ ಸ್ವಚ್ಛಗೊಳ್ಳಲು ವಾಷಿಂಗ್ ಮೆಷಿನ್ ಒಳಗೆ ಬಂದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು, ತನ್ನನ್ನು ತಾನು ಸ್ವಚ್ಛ ಮಾಡಿಕೊಳ್ಳಲು ಬಂದಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಳೆಗಾಲದಲ್ಲಿ ಇದೆಲ್ಲಾ ಸಾಮಾನ್ಯ ಜನ ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಗೋವಿಂದ್ ಶರ್ಮಾ ಎಂಬುವವರು ಈ ಹಾವನ್ನು ವಾಷಿಂಗ್ ಮೆಷಿನ್‌ನಿಂದ ತೆಗೆದು ರಕ್ಷಣೆ ಮಾಡಿದ್ದಾರೆ. ಈ ಹಾವು ಅಂದಾಜು 5 ಅಡಿಗಳಷ್ಟು ಉದ್ದವಿತ್ತು. ಅದನ್ನು ಬಹಳ ಜಾಗರೂಕವಾಗಿ ವಾಷಿಂಗ್ ಮೆಷಿನ್‌ನಿಂದ ತೆಗೆದ ಅವರು ಬಳಿಕ ಶಂಭು ದಯಾಳ್ ಅವರ ಮನೆಯಿಂದ ದೂರದಲ್ಲಿರುವ ಲಡಪುರ ಕಾಡಿನಲ್ಲಿ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಮುಂಗಾರಿನಲ್ಲಿ ಸಮಯದಲ್ಲಿ ಸುರಕ್ಷಿತ ಜಾಗಗಳನ್ನು ಅರಸಿ ಹಾವುಗಳು ಬರುವುದು ಸಾಮಾನ್ಯ ಎನಿಸಿದೆ, ಅದರಲ್ಲೂ ವಿಶೇಷವಾಗಿ ಸರಿಸೃಪಗಳು ತಮ್ಮ ಆವಾಸ ಸ್ಥಾನದಿಂದ ಹೊರಬಂದು ಮನೆಗಳ ಸಂದಿಗಳಲ್ಲಿ, ಶೂಗಳು, ಕಾರುಗಳ ಒಳಗೆ ಬೈಕ್‌ಗಳ ಒಳಗೆ ಸೇರಿಕೊಳ್ಳುತ್ತವೆ.
ಟಾಯ್ಲೆಟ್ ಕಮೋಡ್‌ನಲ್ಲಿ ಹಾವು, ಕಾಣಿಸಿದ್ದು ಮೂರು, ಸಿಕ್ಕಿದ್ದು ಎರಡು... ಶೌಚಾಲಯದೊಳಗೆ ಹೋಗಲು ಫುಲ್ ಭಯ!
- स्वामी विवेकानंदनगर में कपड़े धोने के दौरान वाशिंग मशीन में कोबरा नज़र आने से हड़कंप मच गया. pic.twitter.com/iI02bZXBGj
— विभोर अग्रवाल🇮🇳 (@IVibhorAggarwal)