ಜಗತ್ತಿನ ಎರಡನೇ ಅತಿದೊಡ್ಡ ವಜ್ರ ಉತ್ಪಾದಕ ದೇಶ ಬೋಟ್ಸಾವಾನದಲ್ಲಿ ಬರೋಬ್ಬರಿ 2,492 ಕ್ಯಾರೆಟ್‌ನ (499 ಗ್ರಾಂ) ವಜ್ರದ ಕಲ್ಲು ಪತ್ತೆಯಾಗಿದೆ. ಇದು ವಿಶ್ವದಲ್ಲಿ ಇದುವರೆಗೆ ಪತ್ತೆಯಾದ ಎರಡನೇ ಅತಿ ದೊಡ್ಡ ಗಾತ್ರದ ವಜ್ರಮ ಎಂಬ ದಾಖಲೆಗೆ ಪಾತ್ರವಾಗಿದೆ. ಜೊತೆಗೆ ಕಳೆದ 100 ವರ್ಷಗಳಲ್ಲಿ ಕಂಡು ಬಂದ ಅತಿದೊಡ್ಡ ಗಾತ್ರದ ವಜ್ರ ಎಂಬ ದಾಖಲೆಗೂ ಪಾತ್ರವಾಗಿದೆ.
ನವದೆಹಲಿ: ಜಗತ್ತಿನ ಎರಡನೇ ಅತಿದೊಡ್ಡ ವಜ್ರ ಉತ್ಪಾದಕ ದೇಶ ಬೋಟ್ಸಾವಾನದಲ್ಲಿ ಬರೋಬ್ಬರಿ 2,492 ಕ್ಯಾರೆಟ್‌ನ (499 ಗ್ರಾಂ) ವಜ್ರದ ಕಲ್ಲು ಪತ್ತೆಯಾಗಿದೆ. ಇದು ವಿಶ್ವದಲ್ಲಿ ಇದುವರೆಗೆ ಪತ್ತೆಯಾದ ಎರಡನೇ ಅತಿ ದೊಡ್ಡ ಗಾತ್ರದ ವಜ್ರಮ ಎಂಬ ದಾಖಲೆಗೆ ಪಾತ್ರವಾಗಿದೆ. ಜೊತೆಗೆ ಕಳೆದ 100 ವರ್ಷಗಳಲ್ಲಿ ಕಂಡು ಬಂದ ಅತಿದೊಡ್ಡ ಗಾತ್ರದ ವಜ್ರ ಎಂಬ ದಾಖಲೆಗೂ ಪಾತ್ರವಾಗಿದೆ.
1905ರಲ್ಲಿ ದಕ್ಷಿಣ ಆಫ್ರಿಕಾದ ಕಲ್ಲಿನಾನ್‌ನಲ್ಲಿ 3106 ಕ್ಯಾರೆಟ್‌ನ ವಜ್ರ ಪತ್ತೆಯಾಗಿದ್ದು, ಇದುವರೆಗೆ ದೊರೆತಿರುವ ಅತಿದೊಡ್ಡ ಗಾತ್ರದ ವಜ್ರ ಎಂಬ ದಾಖಲೆ ಹೊಂದಿದೆ. ಇದರ ಕೆಲ ತುಂಡುಗಳನ್ನು ಬ್ರಿಟಿಷ್ ಮನೆತನದ ಕಿರೀಟಗಳಿಗೆ ಬಳಸಲಾಗಿತ್ತು.
ಗುಜರಾತ್‌ನ ಈ ಗ್ರಾಮ ಏಷ್ಯಾದಲ್ಲೇ ಶ್ರೀಮಂತ; ಇಲ್ಲಿನ ಒಬ್ಬೊಬ್ಬರ ಆದಾಯ ಎಷ್ಟು ಗೊತ್ತಾ?
"ಈ ಅಸಾಮಾನ್ಯ 2,492-ಕ್ಯಾರೆಟ್ ವಜ್ರದ ಕುರಿತಂತೆ ನಾವು ಅಚ್ಚರಿಗೊಳಗಾಗಿದ್ದೇವೆ ಲುಕಾರಾದ ಅಧ್ಯಕ್ಷ ವಿಲಿಯಂ ಲ್ಯಾಂಬ್ ಹೇಳಿದರು ಆದರೆ. ವಜ್ರದ ಮೌಲ್ಯ, ಗುಣಮಟ್ಟ ಏನು ಅದನ್ನ ರತ್ನಗಳನ್ನಾಗಿ ಕತ್ತರಿಸಬಹುದು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಇದು ದೇಶದಲ್ಲಿ ಪತ್ತೆಯಾದ ಅತಿ ದೊಡ್ಡ ವಜ್ರ ಎಂದು ಸರ್ಕಾರ ಹೇಳಿದೆ.