ದೆಹಲಿ: ಉಬರ್ ಕ್ಯಾಬ್‌ನ ಮಹಿಳಾ ಚಾಲಕಿ ಮೇಲೆ ದುಷ್ಕರ್ಮಿಗಳಿಬ್ಬರು ಬೀರ್ ಬಾಟಲ್‌ನಿಂದ ಹಲ್ಲೆ ಮಾಡಿದ ಆಘಾತಕಾರಿ ಘಟನೆ ದೆಹಲಿಯ ಕಾಶ್ಮೀರ್ ಗೇಟ್ ಬಳಿ ನಡೆದಿದೆ. ಘಟನೆಯಲ್ಲಿ ಮಹಿಳಾ ಕ್ಯಾಬ್ ಚಾಲಕಿಗೆ ಗಂಭೀರ ಗಾಯಗಳಾಗಿವೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮಹಿಳೆ ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ ದೆಹಲಿಯ ಕಾಶ್ಮೀರ್ ಗೇಟ್‌ನ ಇಂಟರ್ ಸ್ಟೇಟ್ ಬಸ್ ಟರ್ಮಿನಲ್ ಬಳಿ ಕಾರನ್ನು ಅಡ್ಡ ಹಾಕಿದ ಇಬ್ಬರು ದುಷ್ಕರ್ಮಿಗಳು ಆಕೆಯ ಕಾರಿನ ಮೇಲೆ ಕಲ್ಲೆಸೆದ್ದಿದ್ದಲ್ಲದೇ ಆಕೆಯ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿದ್ದಾರೆ. ಹೀಗೆ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಕ್ಯಾಬ್ ಚಾಲಕಿಯನ್ನು ಪ್ರಿಯಾಂಕಾ (Priyanka) ಎಂದು ಗುರುತಿಸಲಾಗಿದೆ. ಈಕೆ ರಾಷ್ಟ್ರ ರಾಜಧಾನಿಯ ಸಮಯ್‌ಪುರ ಬದ್ಲಿ (Samaypur Badli) ಪ್ರದೇಶದಲ್ಲಿ ವಾಸ ಮಾಡುತ್ತಿದ್ದಳು.
ಪ್ರಿಯಾಂಕಾ (Priyanka) ಇಂಟರ್ ಸ್ಟೇಟ್ ಬಸ್ ಟರ್ಮಿನಲ್ (ISBT) ಸಮೀಪ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಕಾರಿಗೆ ಅಡ್ಡ ಬಂದ ಇಬ್ಬರು ಖದೀಮರು ಕಾರಿನ ಬಾಗಿಲಿಗೆ ಕಲ್ಲಿನಿಂದ ಜಜ್ಜಿ ಹಾನಿಗೊಳಿಸಿದ್ದಾರೆ. ಅಲ್ಲದೇ ಕಾರಿನ ಮೇಲೆ ಎಸೆದ ಕಲ್ಲು ಆಕೆಯ ತಲೆಗೆ ತಾಗಿದ್ದು, ಕಾರಿನ ಗಾಜಿನ ತುಂಡುಗಳು ಆಕೆಯ ಮೇಲೆ ಬಿದ್ದಿವೆ. ಅಲ್ಲದೇ ದುಷ್ಕರ್ಮಿಯೊಬ್ಬ ಆಕೆಯ ಕಾರಿನ ಕೀಯನ್ನು ಆಕೆಯಿಂದ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಅಲ್ಲದೇ ಕಾರಿನೊಂದಿಗೆ ಅಲ್ಲಿಂದ ಹೋಗಲು ಯತ್ನಿಸಿದ್ದಾನೆ. ಈ ವೇಳೆ ನಾನು ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದಾಗ ಅವರು ಬಿಯರ್ ಬಾಟಲ್‌ನಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ನಾನು ಅಪಾಯದ ವೇಳೆ ಒತ್ತುವಂತಹ ಉಬರ್‌ನ ಬಟನ್ (panic button) ಅನ್ನು ಒತ್ತಿದ್ದೇನೆ. ಅಲ್ಲದೇ ನಾನು ತುರ್ತು ನಂಬರ್‌ಗೆ ಕೂಡ ಕರೆ ಮಾಡಲು ಯತ್ನಿಸಿದೆ. ಆದರೆ ಯಾರು ಉತ್ತರಿಸಿಲ್ಲ ಎಂದು ಕ್ಯಾಬ್ ಚಾಲಕಿ ಪ್ರಿಯಾಂಕಾ ದೂರಿದ್ದಾರೆ.
ಬದುಕು ಕೆಡಿಸಿದ ಕೊರೋನಾ: ಮಗು ಜೊತೆಯಲ್ಲಿ ಕ್ಯಾಬ್ ಓಡಿಸುತ್ತಿರುವ ಅಮ್ಮ
ಘಟನೆಯಿಂದ ಗಾಯಗೊಂಡ ಪ್ರಿಯಾಂಕಾ ಕುತ್ತಿಗೆ ಹಾಗೂ ದೇಹಕ್ಕೆ 10 ಹೊಲಿಗೆಗಳನ್ನು ಹಾಕಲಾಗಿದೆ. ಘಟನೆ ನಡೆದು ಅರ್ಧ ಗಂಟೆಯ ಬಳಿಕ ಪೊಲೀಸರು ಆಕೆಯ ನೆರವಿಗೆ ಆಗಮಿಸಿದ್ದು, ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಜನವರಿ 10 ರಂದು ರಾತ್ರಿ 2 ಗಂಟೆ ಸುಮಾರಿಗೆ ನಮಗೆ ಕಾಶ್ಮೀರ್ ಗೇಟ್ ಬಳಿ ದರೋಡೆ (robbery) ಆದ ನಡೆದಿದೆ ಎಂದು ಫೋನ್ ಕರೆ ಬಂದಿತ್ತು ಎಂದು ಹೇಳಿದ್ದಾರೆ.
ಓಲಾ, ಉಬರ್ ಆಟೋಗೆ ಕೋರ್ಟ್‌ನಲ್ಲಿ ಸಿಹಿ-ಕಹಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ