ದೆಹಲಿ ಗಲಭೆ ಪರಿಹಾರ: ಕಣ್ಣು ಕಳೆದುಕೊಂಡವರಿಗೆ 2 ಲಕ್ಷ ನೀಡಿ ಕೈತೊಳೆದ ದೆಹಲಿ ಸರ್ಕಾರ!

Published : Mar 22, 2021, 03:25 PM ISTUpdated : Mar 22, 2021, 03:32 PM IST
ದೆಹಲಿ ಗಲಭೆ ಪರಿಹಾರ: ಕಣ್ಣು ಕಳೆದುಕೊಂಡವರಿಗೆ 2 ಲಕ್ಷ ನೀಡಿ ಕೈತೊಳೆದ ದೆಹಲಿ ಸರ್ಕಾರ!

ಸಾರಾಂಶ

ಕಳೆದ ವರ್ಷ ದೆಹಲಿಯಲ್ಲಿ ನಡೆದ ಗಲಭೆ ದೇಶದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿದೆ. ಈ ಗಲಭೆಯ ಸಂತ್ರಸ್ತರಿಗೆ ಸರಿಯಾದ ಪರಿಹಾರ ಇನ್ನೂ ಸಿಕ್ಕಿಲ್ಲ. ಕೆಲವರಿ ಬದುಕೇ ಕತ್ತಲಲ್ಲಿದೆ. ಆದರೆ ಸರ್ಕಾರ ಅಲ್ಪ ಮೊತ್ತ ಪರಿಹಾರ ನೀಡಿ ಕೈತೊಳೆದುಕೊಂಡಿದೆ.

ನವದೆಹಲಿ(ಮಾ.22):  ಕಳೆದ ವರ್ಷ ದೆಹಲಿ ಇದ್ದಕ್ಕಿದ್ದಂತೆ ಹೊತ್ತಿ ಉರಿದಿತ್ತು. ದೆಹಲಿ ಗಲಭೆ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಕೇಂದ್ರ ಸರ್ಕಾರದ ಮಸೂದೆ ವಿರೋಧಿಸಿ ಆರಂಭಗೊಂಡ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಇಷ್ಟೇ ಅಲ್ಲ ಬಹುದೊಡ್ಡ ಗಲಭೆಯಾಗಿ ಮಾರ್ಪಟ್ಟಿತ್ತು. ಇದೀಗ ಈ ಗಲಭೆಯ ಸಂತ್ರಸ್ತರಲ್ಲಿ ಕೆಲವರಿಗೆ ಪರಿಹಾರ ಹಣ ಬಿಡುಗಡೆಯಾಗಿದೆ. ಆದರೆ ಈ ಹಣದಿಂದ ಹೊಸ ಬದುಕು ಮರೀಚಿಕೆಯಾಗಿದೆ ಅನ್ನೋದು ಸಂತ್ರಸ್ತರ ಅಳಲು.

ದೆಹಲಿ ಹಿಂಸಾಚಾರದ ವೇಳೆ ಏನಾಗಿತ್ತು?  ಗನ್ ಹಿಡಿದವನಿಗೆ ಜಾಮೀನಿಲ್ಲ

2020ರ ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ಗಲಭೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಗಲಭೆ ಕೋರರು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿದ್ದರು. ಹಲವು ಸ್ಥಳದಲ್ಲೇ ಪ್ರಾಣಬಿಟ್ಟಿದ್ದರು. ಈ ಹೀಗೆ ಗಲಭೆಕೋರರ ದಾಳಿಯಲ್ಲಿ ಮೊಹಮ್ಮದ್ ವಾಲ್ಕಿ ಕುಟುಂಬ ಕೂಡ ಸಿಲುಕಿತ್ತು. ಗಲಭೆಕೋರರು ಆ್ಯಸಿಡ್ ದಾಳಿಗೆ ಮೊಹಮ್ಮದ್ ವಾಲ್ಕಿ ಕಣ್ಣುಗಳೇ ಸುಟ್ಟು ಹೋಗಿದೆ.

ಗಲಭೆಕೋರರ ಆ್ಯಸಿಡ್ ದಾಳಿ ಸಿಲುಕಿದ ಮೊಹಮ್ಮದ್ ವಾಲ್ಕಿ ಕುಟುಂಬ ನೇರವಾಗಿ ಪಕ್ಕದಲ್ಲಿದ್ದ ಮಸೀದಿಗೆ ತೆರಳಿ ಆಶ್ರಯ ಪಡೆದಿತ್ತು. ಆದರೆ ಆ್ಯಸಿಡ್ ದಾಳಿಯಿಂದ ಕಣ್ಣು, ಮುಖ ಸುಟ್ಟು ಹೋದ ವಾಲ್ಕಿಗೆ ತಕ್ಷಣವೇ ಚಿಕಿತ್ಸೆಯ ಅಗತ್ಯವಿತ್ತು. ಆದರೆ ಮಸೀದಿಯಿಂದ ಹೊರಬಂದರೆ ಹತ್ಯೆಯಾಗುವ ಭೀತಿ ಎದುರಾಗಿತ್ತು. ಹೀಗಾಗಿ 12 ಗಂಟೆಗಳ ಬಳಿಕ ಮಧ್ಯ ರಾತ್ರಿ ವಾಲ್ಕಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ದಿಲ್ಲಿ ಹಿಂಸೆ: ಮೃತರ ಸಂಖ್ಯೆ 38ಕ್ಕೆ: ಮೃತರ ಕುಟುಂಬಕ್ಕೆ ಕೇಜ್ರಿ ತಲಾ 10 ಲಕ್ಷ ರೂ.!.

ಇದೀಗ ವಾಲ್ಕಿಗೆ ಕಣ್ಣುಗಳು ಕಾಣುವುದಿಲ್ಲ. ದೆಹಲಿ ಸರ್ಕಾರ ಕಣ್ಣು ಕಳೆದುಕೊಂಡವರಿಗೆ 2 ಲಕ್ಷ ರೂಪಾಯಿ ಪರಿಹಾರ ಬಿಡುಗಡೆ ಮಾಡಿದೆ. ಈ ಹಣದಲ್ಲಿ ತನ್ನ ಚಿಕಿತ್ಸಾ ವೆಚ್ಚ ಕೂಡ ಸಾಲುವುದಿಲ್ಲ. ಹೀಗಾಗಿ ಕನಿಷ್ಠ 5 ಲಕ್ಷಕ್ಕೆ ಏರಿಸಬೇಕು ಎಂದು ವಾಲ್ಕಿ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರದಿಂದ ನನಗೆ ಎಷ್ಟು ಪರಿಹಾರ ಸಿಕ್ಕಿತ್ತು ಅನ್ನೋದಕ್ಕಿಂತ ನನ್ನ ಬದುಕೆ ಕತ್ತಲಲ್ಲಿದೆ ಎಂದು ವಾಲ್ಕಿ ನೋವಿನಿಂದ ಹೇಳಿಕೊಂಡಿದ್ದಾರೆ.

ದೆಹಲಿ ಗಲಭೆಯ ಸಂತ್ರಸ್ತರಿಗೆ ಸರ್ಕಾರ ಘೋಷಿಸಿದ ಪರಿಹಾರ ಮೊತ್ತ:
ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ
ಸಂಪೂರ್ಣ ಕಣ್ಣು ಕಳದೆುಕೊಂಡವರಿಗೆ 5 ಲಕ್ಷ ರೂಪಾಯಿ
ಗಲಭೆಯಲ್ಲಿ ಸಾವನ್ನಪ್ಪಿದ್ದವರಿಗೆ 10 ಲಕ್ಷ ರೂಪಾಯಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್