ದಸ್ನಾ ದೇವಾಲಯ ನಿರ್ಮಿಸಲು ನೆರವಾದ ಸಮುದಾಯಕ್ಕೆ ಪ್ರವೇಶ ನಿರಾಕರಣೆ!

By Suvarna NewsFirst Published Mar 22, 2021, 2:54 PM IST
Highlights

ದಾಸ್ನಾ ಮಂದಿರ ದೇಶದಲ್ಲೇ ಭಾರಿ ಚರ್ಚಾ ವಿಷಯವಾಗಿದೆ. ಮುಸ್ಲಿಂ ಬಾಲಕ ನೀರು ಕುಡಿದ ಕಾರಣಕ್ಕೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಬಾಲಕನಿಗೆ ಥಳಿಸಿದ ಆರೋಪಿಗಳ ಬಂಧಿಸಲಾಗಿದೆ. ದೇವಾಲಯ ಇಲ್ಲಿನ ಕಟ್ಟುಪಾಡು, ಸಂಪ್ರದಾಯ ಹಾಗೂ ಇತಿಹಾಸ ಇದೀಗ ಮತ್ತೆ ಸದ್ದು ಮಾಡುತ್ತಿದೆ. 

ಘಾಝಿಯಾಬಾದ್(ಮಾ.22): ದಾಸ್ನಾ ಮಂದಿರದಲ್ಲಿ ಮುಸ್ಲಿಂ ಬಾಲಕನಿಗೆ ಥಳಿಸಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ದಾಸ್ನಾ ಮಂದಿರದ ಇತಿಹಾಸ ಇದೀಗ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಕಾರಣ ಈ ದೇವಾಲಾಯ ಪುನರ್ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯ ನೆರವಾಗಿತ್ತು ಅನ್ನೋ ಮಾತುಗಳು ಗ್ರಾಮದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಆದರೆ ಇದೀಗ ಇದೇ ಸಮುದಾಯಕ್ಕೆ ಪ್ರವೇಶ ನಿರಾಕರಿಸಲಾಗಿದೆ.

ಆಲೂರು: ನಿಧಿಗಾಗಿ ದೇಗುಲದಲ್ಲಿ ಗುಂಡಿ ಅಗೆದ ಖದೀಮರು..!.

ದಾಸ್ನಾ ದೇವಿ ಮಂದಿರ ಪುನರ್ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯ ಹೆಚ್ಚಿನ ನೆರವು ನೀಡಲಾಗಿತ್ತು ಅನ್ನೋ ಮಾತುಗಳಿವೆ.  ಆದರೆ ಕಳೆದ ಕೆಲ ವರ್ಷಗಳಿಂದ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಈ ಕುರಿತು ದೇವಸ್ಥಾನದ ಹೊರಭಾಗದಲ್ಲೇ ಸೂಚನೆ ಕೂಡ ಹಾಕಲಾಗಿದೆ. ಇದೀಗ ಪುನರ್ ನಿರ್ಮಾಣಕ್ಕೆ ನೆರವಾದ ಮುಸ್ಲಿಂವರಿಗೆ ಪ್ರವೇಶ ನಿರಾಕರಿಸಿರುವುದು ತಪ್ಪು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.

ಈ ಸೂಚನೆ ಹಾಕಲು ಹಲವು ಕಾರಣಗಳಿವೆ ಅನ್ನೋದು ದೇವಾಲಯದ ಮುಖ್ಯ ಅರ್ಚಕ ಯತಿ ನರಸಿಂಹಾನಂದ ಸರಸ್ವತಿ ಹೇಳಿದ್ದಾರೆ. ಈ ದಾಸ್ನಾ ದೇವಾಲಯವನ್ನು 4 ಬಾರಿ ದರೋಡೆ ಮಾಡಲಾಗಿದೆ. ಇಲ್ಲಿನ ಸಂಪತ್ತನ್ನು ದೋಚಲಾಗಿದೆ. ಅರ್ಚಕರನ್ನು ಹತ್ಯೆ ಮಾಡಲಾಗಿದೆ. ಮುಸ್ಲಿಂ ಸಮುದಾಯದ ಈ ಪವಿತ್ರ ದೇವಾಲಯವನ್ನು ಹಾಳುಗೆಡವು ಎಲ್ಲಾ ಪ್ರಯತ್ನ ಮಾಡಿದೆ. ಇದೇ ಕಾರಣ ಮುಸ್ಲಿಂಮರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದಿದ್ದಾರೆ.

2 ವರ್ಷದ ಹಿಂದೆ ಹಿಂದೂ ದಂತ ವೈದ್ಯರನ್ನು ಇದೇ ದೇವಾಲಯದ ಅವರಣದಲ್ಲಿರುವ ಅವರ ಕ್ಲೀನಿಕ್‌ನಲ್ಲೇ ಹತ್ಯೆ ಮಾಡಲಾಗಿತ್ತು.  2019ರಲ್ಲಿ ಮುಸ್ಲಿಂ ಯುವಕರ ಗುಂಪು ನೇರವಾಗಿ ಗುಂಡಿನ ದಾಳಿ ಮಾಡಿ ಹತ್ಯೆ ಮಾಡಲಾಗಿತ್ತು. ಹಿಂದೂಗಳ ಮೇಲಿನ ಹತ್ಯೆ ಹಾಗೂ ಹಲವು ಕಾರಣಗಳಿಂದ ದೇವಾಲಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರವೇಶ ನಿರಾಕರಿಸಲಾಗಿದೆ ಅನ್ನೋದು ದೇವಾಲಯದ ನಿರ್ಧಾರ.

click me!