
ಡೆಹ್ರಾಡೂನ್(ಮಾ.22): ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ದೇವಸ್ಥಾನದ ಹೊರಭಾಗದಲ್ಲಿ ಹಾಕಲಾದ ಹಿಂದೂಗಳಲ್ಲದವರಿಗೆ ಇಲ್ಲಿ ಪ್ರವೇಶವಿಲ್ಲ ಎಂಬ ಬ್ಯಾನರ್ ಸದ್ಯ ಭಾರೀ ಸದ್ದು ಮಾಡುತ್ತಿದೆ.
ಹೌದು 'ಇದು ಹಿಂದೂಗಳ ಪವಿತ್ರ ಕ್ಷೇತ್ರ, ಇಲ್ಲಿ ಹಿಂದೂಗಳಲ್ಲದವರಿಗೆ ಪ್ರವೇಶವಿಲ್ಲ' ಎಂದು ಈ ಬ್ಯಾನರ್‌ನಲ್ಲಿ ಮುದ್ರಿಸಲಾಗಿದೆ. ರಾಜ್ಯದ ಇನ್ನೂ ಹಲವಾರು ದೇವಸ್ಥಾನಗಳ ಹೊರಗೆ ಇಂತಹುದೇ ಬ್ಯಾನರ್‌ಗಳನ್ನು ಹಾಕಲಾಗಿದೆ ಎಂದು ಅನೇಕ ವರದಿಗಳು ಉಲ್ಲೇಖಿಸಿವೆ.
ಇನ್ನು ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಲ್ಲಿ ವಿಚಾರಿಸಿದಾಗ, ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಇನ್ನು ಹಿಂದೂ ಯುವ ವಾಹಿನಿ ಸಂಘಟನೆ ಹೆಸರಲ್ಲಿ ಹಾಕಲಾದ ಈ ಬ್ಯಾನರ್‌ನ್ನು ಸದ್ಯ ತೆರವುಗೊಳಿಸಲಾಗಿದ್ದು, ಬ್ಯಾನರ್‌ನಲ್ಲಿ ಹಾಕಲಾದ ಫೋನ್ ನಂಬರ್ ಮಾಲೀಕರ ವಿರುದ್ಧ ಸೆಕ್ಷನ್ 153Aರಡಿ ಕೇಸ್ ದಾಖಲಿಸಲಾಗಿದೆ.
ಇನ್ನು ಉತ್ತರಾಖಂಡ್‌ನ ಗಾಜಿಯಾಬಾದ್‌ನ ದೇವಸ್ಥಾನದಲ್ಲಿ ಮುಸ್ಲಿಂ ಬಾಲಕನೊಬ್ಬ ನೀತರು ಕುಡಿದನೆಂಬ ಕಾರಣಕ್ಕಾಗಿ ಆತನಿಗೆ ಥಳಿಸಿದ ಪ್ರಕರಣ ಸದ್ದು ಮಾಡಿದ ಒಂದು ವಾರದಲ್ಲಿ ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ