ಮೋದಿ ಮನವಿ ಬೆನ್ನಲ್ಲೇ ವಾರದಲ್ಲಿ 2 ದಿನ ವರ್ಕ್ ಫ್ರಮ್ ಹೋಮ್ ಕಡ್ಡಾಯ,ದೆಹಲಿ ಸರ್ಕಾರ ಆದೇಶ

Published : May 14, 2026, 05:22 PM IST
Delhi Govt Work from Home

ಸಾರಾಂಶ

ಯುದ್ಧ ಸಂಕಷ್ಟದಿಂದ ಎದುರಾಗಿರುವ ಸವಾಲು ಎದುರಿಸಲು ಮೋದಿ ಮಾಡಿದ ಹಲವು ಮನವಿಯಲ್ಲಿ ಮನೆಯಿಂದ ಕೆಲಸ ಕೂಡ ಒಂದು. ಈ ಮನವಿ ಬೆನ್ನಲ್ಲೇ ಇದೀಗ ವಾರದಲ್ಲಿ 2 ದಿನ ಮನೆಯಿಂದ ಕೆಲಸ ಮಾಡಲು ಸೂಚಿಸಿದೆ.

ನವದೆಹಲಿ (ಮೇ.14) ಮಧ್ಯಪ್ರಾಚ್ಯದ ಯುದ್ಧದಿಂದ ವಿಶ್ವದ ಹಲವು ದೇಶಗಳು ಸಂಕಷ್ಟಕ್ಕೆ ಸಿಲುಕಿದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತಕ್ಕೆ ಕಾರಣಾಗಿದೆ. ಭಾರತದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ಚಿನ್ನ ಆಮದು ಹೆಚ್ಚಾಗುತ್ತಿರುವ ಬೆನ್ನಲ್ಲೇ ದೇಶದ ವಿದೇಶಿ ವಿನಿಮಯ ಕರಗುತ್ತಿದೆ. ಹೀಗಾಗಿ ಮೋದಿ ಸಾರಿಗೆ ಬಳಲು, ಚಿನ್ನ ಖರೀದಿ ಮಾಡದಂತೆ ಮನವಿ ಮಾಡಿದ್ದಾರೆ. ಸ್ವದೇಶಿ ವಸ್ತುಗಳ ಖರೀದಿ ಹಾಗೂ ಬಳಕೆ ಸೇರಿದಂತೆಲ 7 ಸೂತ್ರ ನೀಡಿದ್ದಾರೆ. ಈ ಮನವಿಯಲ್ಲಿ ಆದಷ್ಟು ಮನೆಯಿಂದ ಕೆಲಸ (ವರ್ಕ್ ಫ್ರಮ್ ಹೋಮ್) ಆಯ್ಕೆಗೆ ಒತ್ತು ನೀಡಲು ಮನವಿ ಮಾಡಿದ್ದರು. ಮೋದಿ ಮನವಿ ಬೆನ್ನಲ್ಲೇ ದೆಹಲಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ವಾರದಲ್ಲಿ ಕನಿಷ್ಠ 2 ದಿನ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದೆ.

ದೆಹಲಿ ಉದ್ಯೋಗಿಗಳಿಗೆ 2 ದಿನ ಮನೆಯಿಂದ ಕೆಲಸ

ದೆಹಲಿಯ ಸರ್ಕಾರಿ ಉದ್ಯೋಗಿಗಳಿಗೆ ವಾರದಲ್ಲಿ ಕನಿಷ್ಠ 2 ದಿನ ಮನೆಯಿಂದ ಕೆಲಸ ಮಾಡಲು ಕಡ್ಡಾಯ ಮಾಡಿದೆ. ಸರ್ಕಾರಿ ಉದ್ಯೋಗಿಗಳ ಪೈಕಿ ಕೆಲ ವಿಭಾಗದ ಉದ್ಯೋಗಿಗಳಿಗೆ ವಾರದಲ್ಲಿ 2 ದಿನ ಮನೆಯಿಂದ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡಲು ಸೂಚಿಸಿದೆ. ಇನ್ನು ಶೇಕಡಾ 50ರಷ್ಟು ಮೀಟಿಂಗ್, ಸಭೆಗಳು ಆನ್‌ಲೈನ್ ಮೂಲಕ ಮಾಡಲು ಸೂಚಿಸಲಾಗಿದೆ. ಈ ಮೂಲಕ ಪ್ರಯಾಣದ ಖರ್ಟು ವೆಚ್ಚ, ಇಂಧನ ಉಳಿತಾಯಕ್ಕೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ವರ್ಕ್ ಫ್ರಮ್ ಹೋಮ್ ಆದೇಶದಲ್ಲಿ ಪೌರ ಕಾರ್ಮಿಕರು, ಆಸ್ಪತ್ರೆ ಸಿಬ್ಬಂದಿಗಳು, ಎಲೆಕ್ಟ್ರಿಸಿಟಿ, ನೀರು ಸರಬರಾದು, ಪರಿವೀಕ್ಷಣೆ ಸಿಬ್ಬಂದಿ ಸೇರಿದಂತೆ ಹಲವು ಉದ್ಯೋಗಿಗಳನ್ನು ಹೊರಗಿಡಲಾಗಿದೆ. ಸ್ಥಳಕ್ಕೆ ಹಾಜರಾಗಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಎಂದಿನಂತೆ ಇರಲಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಸಾರ್ವಜನಿಕ ಸಾರಿಗೆ ಬಳಸಲು ದೆಹಲಿ ಸರ್ಕಾರದ ಸೂಚನೆ

ಖಾಸಗಿ ವಾಹನದ ಬದಲು ಸಾರ್ವಜನಿಕ ಸಾರಿಗೆ ಬಳಕೆ ಮಾಡಲು ಸೂಚನೆ ನೀಡಲಾಗಿದೆ. ಈ ಮೂಲಕ ಇಂಧನ ಉಳಿಯಾ ಸಪ್ತಾಹದಲ್ಲಿ ಕೈಜೋಡಿಸುವಂತೆ ಮನವಿ ಮಾಡಲಾಗಿದೆ. ಎಲೆಕ್ಟ್ರಿಕ್ ವಾಹನ ಬಳಕೆ, ರೈಲು, ಮೆಟ್ರೋ, ಸಾರಿಗೆ ಬಸ್ ಮೂಲಕ ಪ್ರಯಾಣಕ್ಕೆ ಆದ್ಯತೆ ನೀಡಲು ಸೂಚಿಸಲಾಗಿದೆ.

ಖಾಸಗಿ ಕ್ಷೇತ್ರಗಳು ವರ್ಕ್ ಫ್ರಮ್ ಹೋಮ್ ನೀಡುವಂತೆ ಮನವಿ

ಖಾಸಗಿ ಕ್ಷೇತ್ರಗಳು ಸಾಧ್ಯವಿರುವಷ್ಟು ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ಅವಕಾಶ ಮಾಡುವಂತೆ ಮನವಿ ಮಾಡಿದೆ. ಇದೀಗ ದೆಹಲಯಲ್ಲಿರುವ ಖಾಸಗಿ ಕಂಪನಿಗಳು ಮನೆಯಿಂದ ಕೆಲಸಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಕೆಲ ಕಂಪನಿಗಳು ಈಗಾಗಲೈ ಹೈಬ್ರಿಡ್ ಮಾಡೆಲ್ ಜಾರಿಗೊಳಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಒಮಾನ್ ಕರಾವಳಿಯಲ್ಲಿ ಭಾರತದ ಹಡಗಿನ ಮೇಲೆ ದಾಳಿ, ಮಳುಗುತ್ತಿದ್ದ ಶಿಪ್‌ನಿಂದ 14 ಸಿಬ್ಬಂದಿ ರಕ್ಷಣೆ
ತಮಿಳುನಾಡು ತಲೈವಿ ಕೋಟೆಗೆ ದಳಪತಿ ಮುತ್ತಿಗೆ; ಅಮ್ಮನ ದೊಡ್ಡ ಸಾಮ್ರಾಜ್ಯಕ್ಕೆ ಬೆಂಕಿ ಹಚ್ಚಿದ ವಿಜಯ್!