
ಅದು 2016ರ ಘಟನೆ. ಚಂಡೀಗಢದ ನಿವಾಸಿ, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೀರೇಂದ್ರ ಕುಮಾರ್ ಎನ್ನುವವರ 3ನೇ ಕ್ಲಾಸ್ನಲ್ಲಿ ಓದುತ್ತಿರುವ ಪುತ್ರ ವಿವೇಕ್ ಕುಮಾರ್ ಶಾಲೆಗೆ ಹೋದವ ವಾಪಸ್ ಆಗಿಲೇ ಇಲ್ಲ. ಅವನನ್ನು ಶಾಲೆಯಿಂದಲೇ ಕಿಡ್ನ್ಯಾಪ್ ಕರೆದುಕೊಂಡು ಹೋಗಲಾಯಿತು. ಎಲ್ಲಿ ಹುಡುಕಿದರೂ ಪಾಲಕರಿಗೆ ಆತ ಸಿಗಲೇ ಇಲ್ಲ. ಅವನ ತಂದೆ ವೀರೇಂದ್ರ ಕುಮಾರ್ ಅವನನ್ನು ಎಲ್ಲೆಡೆ ಹುಡುಕಿದರು. ಅವನು ಮತ್ತೆ ಮತ್ತೆ ಪೊಲೀಸ್ ಠಾಣೆಗೆ ಹೋದನು. ವಿವೇಕ್‌ನ ಸ್ನೇಹಿತರನ್ನು ಏನಾದರೂ ತಿಳಿದಿದೆಯೇ ಎಂದು ಕೇಳಿದರು. ಎಲ್ಲಿಯೂ ಸುಳಿವು ಸಿಗಲಿಲ್ಲ. ಆದರೆ ಮಗುವಿನ ಯಾವುದೇ ಕುರುಹು ಇರಲಿಲ್ಲ. ವರ್ಷಗಳು ಕಳೆದವು. ಕುಟುಂಬ ನಿಧಾನವಾಗಿ ಭರವಸೆ ಕಳೆದುಕೊಳ್ಳಲು ಪ್ರಾರಂಭಿಸಿತು. ಪೊಲೀಸರೂ ಒಂದು ಹಂತದಲ್ಲಿ ಕೈಚೆಲ್ಲಿದರು.
ನಂತರ, ಅಕ್ಟೋಬರ್ 2023 ರಲ್ಲಿ ಒಂದು ದಿನ, ವೀರೇಂದ್ರ ಕುಮಾರ್ ಅವರಿಗೆ ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿರುವ ಪೊಲೀಸ್ ಠಾಣೆಯಿಂದ ಫೋನ್ ಕರೆ ಬಂದಿತು. ಅಲ್ಲಿಂದ ಪೊಲೀಸ್ ಅಧಿಕಾರಿಯು "ನಿಮಗೆ ವಿವೇಕ್ ಎಂಬ ಮಗನಿದ್ದಾನೆಯೇ" ಎಂದು ಕೇಳಿದರು. ಇಷ್ಟು ವರ್ಷಗಳ ಬಳಿಕ ಮಗನ ಬಗ್ಗೆ ಪೊಲೀಸರೊಬ್ಬರಿಂದ ಫೋನ್ ಬಂದಾಗ ಆ ತಂದೆಯ ಸ್ಥಿತಿ ಹೇಗಾಗಬೇಡ, ಯಾರೂ ಊಹಿಸಿಕೊಳ್ಳಲು ಆಗದ ಕ್ಷಣ ಅದು. ತನ್ನ ಮಗ ಸಿಕ್ಕನೆ, ಏನಾದ? ಬದುಕಿದ್ದಾನೆಯೋ, ಹೆಣವಾಗಿದ್ದಾನೋ... ಆ ಕ್ಷಣದಲ್ಲಿ ಆ ಒಂದು ಫೋನ್ ಕಾಲ್ನಿಂದ ತತ್ತರಿಸಿಹೋದರು ಅಪ್ಪ. ನಡುಗುತ್ತಲೇ ಹೌದು ಏನಾಯ್ತು ಎಂದು ಕೇಳಿದಾಗ, ನಿಮ್ಮ ಮಗ ವಿವೇಕ್ ಜೀವಂತವಾಗಿದ್ದಾನೆ, ನಮಗೆ ಸಿಕ್ಕಿದ್ದಾನೆ ಎಂದಾಗ ತಂದೆ ಅರೆಕ್ಷಣ ಮೌನಕ್ಕೆ ಜಾರಿಬಿಟ್ಟರು. ಏನೂ ಹೇಳಲಾಗದ ಸ್ಥಿತಿ ಅದು.
ಕೊನೆಗೆ ಕೂಡಲೇ 500 ಕಿಲೋ ಮೀಟರ್ ದೂರ ಇರುವ ಪೊಲೀಸ್ ಠಾಣೆಗೆ ಹೋಗಿ ಎಂಟು ವರ್ಷಗಳ ಬಳಿಕ 17 ವರ್ಷದವನಾದ ತಮ್ಮ ಮಗನನ್ನು ಕಂಡು ಆ ಕಣ್ಣುಗಳೇ ನಂಬದಾದವು. ಆದರೆ ಆಗ ಆತ ವಿವೇಕ್ ಕುಮಾರ್ ಆಗಿರಲಿಲ್ಲ. ಬದಲಿಗೆ ಮೊಹಮ್ಮದ್ ಉಮರ್ ಆಗಿದ್ದ. ಮದರಸಾ ವಿದ್ಯಾರ್ಥಿಯಾಗಿದ್ದ ಆತ ಅದಾಗಲೇ ಭಯೋತ್ಪಾದನಾ ಕೃತ್ಯದಲ್ಲಿ ತರಬೇತಿ ಪಡೆದಿದ್ದ. ಮದರಸಾದಲ್ಲಿ, ವಿವೇಕ್ ನಿಗೆ ಸುನ್ನತಿ ಮಾಡಲಾಗಿತ್ತು. ಮತಾಂತರದ ಬಳಿಕ ಗೋಮಾಂಸವನ್ನು ಒತ್ತಾಯವಾಗಿ ತಿನ್ನಿಸಲಾಗಿತ್ತು. ಮೊಹಮ್ಮದ್ ಉಮರ್ ಎಂದು ಮರುನಾಮಕರಣ ಮಾಡಿದ ಬಳಿಕ ಉಗ್ರ ಚಟುವಟಿಕೆಯ ಟ್ರೈನಿಂಗ್ ಕೊಡಲು ಶುರು ಮಾಡಲಾಗಿತ್ತು!
ಬಳಿಕ, ಆತನನ್ನು ಗಲ್ಫ್ ದೇಶಕ್ಕೆ ಮಾರಾಟ ಮಾಡಲು ಮುಂದಾದಾಗ, ಮೂಲ ಆಧಾರ್ ಕಾರ್ಡ್ನಿಂದ ವಿಷಯವೆಲ್ಲಾ ಬಹಿರಂಗಗೊಂಡು ಬಿಟ್ಟಿತು! ಆ ಸಂದರ್ಭದಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಲು ಮುಂದಾಗಿದ್ದರು ಈ ರಕ್ಕಸರು. ಆ ಸಂದರ್ಭದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯಿಂದಾಗಿ ಬೆರಳಿನ ಅಚ್ಚು ಆಗುತ್ತಲೇ ಮೊದಲೇ ಆಧಾರ್ ಕಾರ್ಡ್ ಇರುವುದು, ಅದರಲ್ಲಿ ವಿವೇಕ್ ಕುಮಾರ್ ಎನ್ನುವ ಹೆಸರು ಇರುವುದು ಎಲ್ಲವೂ ಬಹಿರಂಗಗೊಂಡಿತು!
ಪಾಸ್‌ಪೋರ್ಟ್ ಕೇಂದ್ರದ ಅಧಿಕಾರಿಯೊಬ್ಬರು ಹಿಂದೂ ಕಾರ್ಯಕರ್ತರಿಗೆ ಮಾಹಿತಿ ಮುಟ್ಟಿಸಿದರು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ವೀರೇಂದ್ರ ಅವರನ್ನು ಸಂಪರ್ಕಿಸಿದರು. ವಿವೇಕ್ ಕೊನೆಗೂ ಮನೆಗೆ ಹಿಂದಿರುಗಿದಾಗ ಅವನು 18 ವರ್ಷಕ್ಕೆ ಕಾಲಿಟ್ಟಿದ್ದ. ಅವನು ಎಂಟು ವರ್ಷಗಳ ಬಾಲ್ಯವನ್ನು ಕಳೆದುಕೊಂಡಿದ್ದ. ಆತ ಎಷ್ಟು ಮಾನಸಿಕವಾಗಿ ನೊಂದಿದ್ದ ಎಂದರೆ, ಅದೇ ಆಘಾತದಿಂದ ಏನನ್ನೂ ಮಾತನಾಡುತ್ತಿರಲಿಲ್ಲ. ಆರಂಭದಲ್ಲಿ ತನ್ನ ಜೊತೆ ಏನಾಯಿತು ಎನ್ನುವುದನ್ನು ಹೇಳುವುದಕ್ಕೂ ಭಯಭೀತನಾಗಿದ್ದ. ಮೌನಿಯಾಗುತ್ತಿದ್ದ. ಏನಾದರೂ ಕೇಳಲು ಹೋದರೆ ಸಿಟ್ಟಿಗೇಳುತ್ತಿದ್ದ. ಕೊನೆಗೆ ಆತನ ಕರುಳುಹಿಂಡುವ ಸ್ಟೋರಿಗಳು ಒಂದೊಂದಾಗಿ ಬಯಲಾದವು. ಆತ ಅನುಭವಿಸಿದ ಚಿತ್ರಹಿಂಸೆಗಳು ಬೆಳಕಿಗೆ ಬಂದವು.
ಕೊನೆಗೆ ಮದರಾಸಾದ ಕೆಲವರ ವಿರುದ್ಧ ಪ್ರಕರಣ ದಾಖಲಾಯಿತು. ಆಗ ಎನ್‌ಸಿಪಿಸಿಆರ್ ಅಧ್ಯಕ್ಷರಾಗಿದ್ದ ಪ್ರಿಯಾಂಕ್ ಕನೂಂಗೊ ಮದರಸಾಕ್ಕೆ ಭೇಟಿ ನೀಡಿದರು, ಆದರೆ ಅದು ಲಾಕ್ ಆಗಿ ನಿರ್ಜನವಾಗಿತ್ತು, ಮಕ್ಕಳು ಮತ್ತು ಆಡಳಿತ ಮಂಡಳಿ ನಾಪತ್ತೆಯಾಗಿದ್ದರು. ಕೊನೆಗೆ ಉತ್ತರ ಪ್ರದೇಶ ಸರ್ಕಾರ, ಮದರಾಸಾದಲ್ಲಿ ಓದುತ್ತಿರುವ ಮುಸ್ಲಿಮೇತರರ ಸಂಖ್ಯೆ ನೀಡುವಂತೆ ಕಠಿಣ ಆದೇಶ ಹೊರಡಿಸಿತ್ತು. ಆದರೆ ಹಾಗೆ ಮಾಡದ ಮದರಾಸಾ, ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದೆ! ಕೆಲವು ತಿಂಗಳುಗಳ ನಂತರ, ಸರ್ಕಾರವು, ಎಲ್ಲಾ ರಾಜ್ಯಗಳಿಗೆ ಸರ್ಕಾರಿ ಅನುದಾನಿತ ಮತ್ತು ಮಾನ್ಯತೆ ಪಡೆದ ಮದರಸಾಗಳಿಂದ ಮುಸ್ಲಿಮೇತರ ವಿದ್ಯಾರ್ಥಿಗಳನ್ನು ಸಾಮಾನ್ಯ ಶಾಲೆಗಳಿಗೆ ವರ್ಗಾಯಿಸಲು ಸಲಹೆಗಳನ್ನು ನೀಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ